ಮುಂಡಗೋಡ: ಪಟ್ಟಣದ ಕಿಲ್ಲೇ ಓಣಿಯಲ್ಲಿನ ಯುವತಿಯೋರ್ವಳು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೋಗಿ ಕಾಣೆಯಾದ ಬಗ್ಗೆ ಮುಂಡಗೋಡ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಣೆಯಾದ ಯುವತಿಯನ್ನು ಪರವೀನಬಾನು ಫಕೀರ(20) ಎಂದು ತಿಳಿದು ಬಂದಿದ್ದು ಈಕೆಯು ಡಿ.4 ರಂದು ಮಧ್ಯಾಹ್ನ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋದವಳು ಈ ವರೆಗೂ ಮನೆಗೂ ಬಾರದೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾಳೆ.

ಸಾಂದರ್ಭಿಕ ಚಿತ್ರ

ತಾಲೂಕಿನ ಅಗಡಿ ಗ್ರಾಮದ ಯುವಕ ಶಾರೂಖ್ ಪಠಾಣ ಎಂಬುವನು ಕಾಣುತ್ತಿಲ್ಲ ಆತನೊಂದಿಗೆ ಹೋಗಿರಬಹುದೆಂಬ ಸಂಶಯವಿದೆ ತಮ್ಮ ಸಹೋದರಿಯನ್ನು ಹುಡಿಕಿ ಕೊಡಬೇಕೆಂದು ಯುವತಿಯ ಸಹೋದರ ಮಹ್ಮದಕಾಸಿಫ್ ರಜಾ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

error: Content is protected !!