ಮುಂಡಗೋಡಿನಲ್ಲಿ ಉತ್ತರ ಕನ್ನಡ ಖಡಕ್ ಎಸ್ಪಿ ಎಂ. ನಾರಾಯಣ್ ನೇತೃತ್ವದಲ್ಲಿ ನಡೆದಿದ್ದ ಸಮರ, ಕೊನೆಗೂ ಮುಂಡಗೋಡಿನ ಮೀಟರ್ ಬಡ್ಡಿ ಮಾಫಿಯಾ ಥರಗುಟ್ಟುವಂತೆ ಮಾಡಿದೆ. ನಿನ್ನೆಯಷ್ಟೇ ಹಲವು ಜನ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ನಂತರದಲ್ಲಿ ಮುಂಡಗೋಡಿನ NMD ಗ್ರೂಪ್ ನ ಜಮೀರ್ ಅಹ್ಮದ್ ದರ್ಗಾವಾಲೆ ಕೋರ್ಟಿಗೆ ಶರಣಾಗಿದ್ದಾನೆ ಅಂತಾ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ತಪ್ಪಿಸಿಕೊಂಡಿದ್ನಾ..?
ಸೋಮವಾರ ತಡರಾತ್ರಿ ಪೊಲೀಸ್ರು ನಡೆಸಿದ್ದ ದಾಳಿ ವೇಳೆ, ಪೊಲೀಸರ ಕೈಗೆ ಸಿಗದೆ ಈತ ತಪ್ಪಿಸಿಕೊಂಡಿದ್ದ ಅಂತ ಹೇಳಲಾಗಿತ್ತು. ಹೀಗಾಗಿ, NMD ಜಮೀರ್ ಗಾಗಿ ತೀವ್ರ ಹುಡುಕಾಟ ನಡೆಸಿದ್ದ ಪೊಲೀಸ್ರು, ಹೇಗಾದ್ರೂ ಸರಿ ಆತನನ್ನು ಬಂಧಿಸುವ ಪಣ ತೊಟ್ಟಿದ್ದರು ಎನ್ನಲಾಗಿದೆ. ಹೀಗಾಗಿ, ಇದನ್ನರಿತ ಜಮೀರ್ ಅಹ್ಮದ್ ದರ್ಗಾವಾಲೆ ಈಗಷ್ಟೆ ಮುಂಡಗೋಡ ಕೋರ್ಟಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಈತನ ಮೇಲೆ 4 ಕೇಸು..?
ಅಂದಹಾಗೆ, ಇತ್ತಿಚೆಗಷ್ಟೇ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ,ಕಿಡ್ನಾಪ್ ಕೇಸಲ್ಲಿ ಕಿಡ್ನಾಪ್ ಆಗಿದ್ದವನೇ ಈ ಜಮೀರ್ ಅಹ್ಮದ್ ದರ್ಗಾವಾಲೆ, ಪೊಲೀಸ್ ಮೂಲಗಳು ನೀಡಿದ ಮಾಹಿತಿಯಂತೆ, ಈತನ ಮೇಲೆ ಈಗಾಗಲೇ ನಾಲ್ಕು ಪ್ರಕರಣಗಳು ದಾಖಲಾಗಿವೆಯಂತೆ. ಹೀಗಾಗಿ, ಈತನನ್ನು ಅರೆಸ್ಟ್ ಮಾಡಲು ಇಡೀ ಪೊಲೀಸ್ ಟೀಂ ಕಾದು ಕುಳಿತಿತ್ತು ಎನ್ನಲಾಗಿದ್ದು, ಅದನ್ನರಿತ NMD ಜಮೀರ್ ಅಹ್ಮದ್ ದರ್ಗಾವಾಲೆ ಡೈರೆಕ್ಟಾಗಿ ಕೋರ್ಟಿಗೆ ಶರಣಾಗಿದ್ದಾನೆ ಅಂತಾ ತಿಳಿದು ಬಂದಿದೆ.
ಇನ್ನೂ ಹಲವರಿಗಾಗಿ ಶೋಧ..!?
ಅಸಲು, ಸದ್ಯ ಮುಂಡಗೋಡಿನ ಮೀಟರ್ ಬಡ್ಡಿ ದಂಧೆಯಲ್ಲಿ ಹಲವರು ತಲೆಮರಿಸಿಕೊಂಡಿದ್ದು, ಅವರಿಗಾಗಿಯೂ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಉಳಿದವರ ಹೆಡೆಮುರಿ ಕಟ್ಟೋದೂ ಕೂಡ ಗ್ಯಾರಂಟಿ ಎನ್ನುವ ಮಾತು ಕೇಳಿ ಬಂದಿದೆ.