ಮುಂಡಗೋಡ ತಾಲೂಕಿನ ಬಾಚಣಕಿ ಬಳಿ ನ್ಯಾಸರ್ಗಿ ಕ್ರಾಸ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿ, ತನ್ನ ಅಂಗಡಿಯಲ್ಲೆ ಮದ್ಯ ಕುಡಿಯಲು ಅನುವು ಮಾಡಿಕೊಟ್ಟು ಕೋವಿಡ್ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ವ್ಯಕ್ತಿಯೋರ್ವನ ಮೇಲೆ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಚಣಕಿ ಗ್ರಾಮದ ನಾಗರಾಜ್ ದೊಡ್ಡ ಹನ್ಮಂತಪ್ಪ ವಡ್ಡರ ಎಂಬುವವನೇ ಆರೋಪಿಯಾಗಿದ್ದಾನೆ.. ಈತ ತನ್ನ ಚಹಾ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ, ಅಲ್ಲದೇ ಅಲ್ಲಿಯೇ ಮಧ್ಯ ಕುಡಿಯಲು ಜನರಿಗೆ ಅವಕಾಶ ನೀಡುತ್ತಿದ್ದ.
ಹೀಗಾಗಿ ಮುಂಡಗೋಡ ಕ್ರೈಂ ಪಿಎಸ್ ಐ ಎನ್.ಡಿ.ಜಕ್ಕಣ್ಣವರ್ ದಾಳಿ ನಡೆಸಿ ಚಹಾ ಅಂಗಡಿಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ವಿವಿಧ ಕಂಪನಿಯ ಮದ್ಯ ಹಾಗೂ 215 ರೂ ನಗದು ಜಪ್ತಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ.