ಇಂದೂರು ಪ್ರಾಥಮಿಕ ಶಾಲೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ: CCTV ಕ್ಯಾಮೆರಾ ಕದ್ದೊಯ್ದ ಕಳ್ಳರು..!

ಮುಂಡಗೋಡ: ತಾಲೂಕಿನ ಇಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಇಂದೂರು ಗ್ರಾಮವನ್ನು ವಿಶೇಷ ಕಂಟೈನ್ ಮೆಂಟ್ ವಲಯವನ್ನಾಗಿ ಮಾಡಿ, ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಹೀಗಾಗಿ ಇದೇ ಸಮಯವನ್ನೇ ಉಪಯೋಗಿಸಿಕೊಂಡಿರೋ ಕಳ್ಳರು, ಶಾಲೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ..

ಅಂದಹಾಗೆ, ಶಾಲೆಯ ವರಾಂಡದಲ್ಲಿ ಹಾಕಲಾಗಿದ್ದ ಎರಡು CCTV ಕ್ಯಾಮೆರಾಗಳನ್ನು ಕಿತ್ತೊಯ್ದಿರೋ ಕಳ್ಳರು, ಶಾಲೆಯ 5 ಕೊಠಡಿಗಳ ಬಾಗಿಲಿಗೆ ಹಾಕಿದ್ದ ಬೀಗ ಮುರಿದಿದ್ದಾರೆ, ಅಲ್ದೆ ಬಾತ್ ರೂಮಿನ ಬೀಗವನ್ನೂ ಮುರಿದಿದ್ದಾರೆ. ಆದ್ರೆ ಯಾವುದೇ ವಸ್ತುಗಳನ್ನೂ ಮುಟ್ಟಿಲ್ಲ.

ಇನ್ನು ಶುಕ್ರವಾರ ಅಂಗನವಾಡಿ ಕಾರ್ಯಕರ್ತೆ ಶಾಲೆಯ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಶಾಲಾ ಆಡಳಿತ ಸಮಿತಿಗೆ ಮಾಹಿತಿ ನೀಡಿದಾಗ, SDMC ಅಧ್ಯಕ್ಷ ಹಾಗೂ ಗ್ರಾಮಸ್ಥರು ಬಂದು ಪರಿಶೀಲಿಸಿದ್ದಾರೆ. ಆ ನಂತರ ಮುಂಡಗೋಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

error: Content is protected !!