ಮುಂಡಗೋಡ- ತಾಲೂಕಿನ ಯುವತಿಯೋರ್ವಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಬರೆದು, ಅಶ್ಲೀಲ ವಿಡಿಯೋ, ಪೋಟೋಗಳನ್ನು ಹರಿಬಿಟ್ಟ ಬೆಂಗಳೂರಿನ ಯುವಕನನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ..

ಆರೋಪಿ

ದಿನಾಂಕ 14-12-2020 ರಂದು ಮುಂಡಗೋಡ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದ ಯುವತಿಯೋರ್ವಳು, ಯಾರೋ ಒಬ್ಬ ವ್ಯಕ್ತಿ ತನ್ನ ಬಗ್ಗೆ ಅಶ್ಲೀಲ ವಿಡಿಯೋ ಹಾಗೂ ಪೋಟೊಗಳನ್ನು ಫೇಸ್ ಬುಕ್, ವಾಟ್ಸ್ ಅಪ್, ಇನ್ ಸ್ಟ್ರಾಗ್ರಾಂ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.. ಇದ್ರಿಂದ ನನಗೆ ಹಾಗೂ ನನ್ನ ಕುಟುಂಬದ ತೇಜೋವಧೆಯಾಗುತ್ತಿದೆ.. ಹೀಗಾಗಿ, ಕ್ರಮ ಕೈಗೊಳ್ಳಿ ಅಂತಾ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಳು..
ಈ ಕುರಿತು ದೂರು ದಾಖಲಿಸಿಕೊಂಡ
ಮುಂಡಗೋಡ ಪೊಲೀಸ್ ರು ಆರೋಪಿತನ ಪತ್ತೆಗೆ ಜಾಲ ಬೀಸಿದ್ರು.. ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಯನ್ನ ಬಂಧಿಸಿ ತಂದಿದ್ದಾರೆ..
ಜೀವನಕುಮಾರ ಧನಂಜಯ (21), ಬಂಧಿತ ಯುವಕನಾಗಿದ್ದು, ಬೆಂಗಳೂರಿನ ಭಾಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.. ಮೂಲತಃ ರಾಮನಗರ ಜಿಲ್ಲೆಯ ಅಂಚೀಪುರ ಕಾಲೋನಿ ಬೈರಮಂಗಲ ಗ್ರಾಮದವನಾಗಿದ್ದು, ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದ.. ಹೀಗಾಗಿ, ಬೆಂಗಳೂರಿನಿಂದಲೇ ಬಂಧಿಸಿ ಕರೆ ತಂದಿರೋ ಮುಂಡಗೋಡ ಪೊಲೀಸ್ರು, ಆರೋಪಿಯನ್ನ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ..

ಉತ್ತರ ಕನ್ನಡ ಎಸ್ಪಿ ಶಿವ ಪ್ರಕಾಶ್ ದೇವರಾಜು, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಬದರಿನಾಥ್ ಮತ್ತು ಶಿರಸಿ ಡಿ.ಎಸ್.ಪಿ. ರವಿ ನಾಯ್ಕ್ ಮಾರ್ಗದರ್ಶನದಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಪಿಐ ಪ್ರಭುಗೌಡ ಡಿ.ಕೆ. ಹಾಗೂ ಸಿಬ್ಬಂದಿಯವರು ಆರೋಪಿತನನ್ನು ಬಂದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

error: Content is protected !!