Home uttara kannada news

Tag: uttara kannada news

Post
ಇಂದೂರಿನ ಜನಪದ ಕಲಾವಿದ ಸಹದೇವಪ್ಪ ನಡಗೇರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ

ಇಂದೂರಿನ ಜನಪದ ಕಲಾವಿದ ಸಹದೇವಪ್ಪ ನಡಗೇರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ

ಮುಂಡಗೋಡ ತಾಲೂಕಿನ ಇಂದೂರಿನ ಜನಪದ ಕಲಾವಿದ ಸಹದೇವಪ್ಪ ನಡಗೇರಿಯವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ‌ ಮಾಡಿ ರಾಜ್ಯ ಸರ್ಕಾರ ಇಂದು ಘೋಷಣೆ ಮಾಡಿದೆ. ಅಂದಹಾಗೆ, ಸಹದೇವಪ್ಪ ನಡಗೇರಿಯವರು ತಾಲೂಕಿನ ಹಿರಿಯ ಜನಪದ ಕಲಾವಿದರಾಗಿದ್ದು, ವಿಶೇಷ ಶೈಲಿಯ ಜನಪದ ಗೀತೆಗಳನ್ನು ಹಾಡುತ್ತ ಜನಮನ ಗೆದ್ದಿದ್ದಾರೆ. ಸದ್ಯ ಮುಂಡಗೋಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸ್ತಿರೋ ನಡಗೇರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ತಾಲೂಕಿನ ಜನರ ಹರ್ಷಕ್ಕೆ ಕಾರಣವಾಗಿದೆ. ಪಬ್ಲಿಕ್...

Post
ಮುಂಡಗೋಡ ಪಿಎಸ್ಐ ಬಸಣ್ಣನ ಎತ್ತಂಗಡಿಗೆ ಪ್ಲ್ಯಾನ್ ರೆಡಿ, ಠಾಣೆಯ ಅಂಗಳದಲ್ಲಿ ಬ್ರೋಕರುಗಳ ಮಸಲತ್ತು ನಿಜಾನಾ..?

ಮುಂಡಗೋಡ ಪಿಎಸ್ಐ ಬಸಣ್ಣನ ಎತ್ತಂಗಡಿಗೆ ಪ್ಲ್ಯಾನ್ ರೆಡಿ, ಠಾಣೆಯ ಅಂಗಳದಲ್ಲಿ ಬ್ರೋಕರುಗಳ ಮಸಲತ್ತು ನಿಜಾನಾ..?

ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರ ಎತ್ತಂಗಡಿಗೆ ಅದೊಂದು ಪಡೆ ಸನ್ನದ್ಧವಾಗಿದೆಯಂತೆ. ಅಂತಹದ್ದೊಂದು ರೂಮರ್ರು ತಾಲೂಕಿನ ತುಂಬ ಎದ್ದಿದೆ. ತಮ್ಮ ಮೂಗಿನ ನೇರಕ್ಕೆ ಕಾರ್ಯನಿರ್ವಹಿಸ್ತಿಲ್ಲ, ನಮಗೆ ಕಿಮ್ಮತ್ತು ಕೊಡ್ತಿಲ್ಲ ಅಂತಾ ಅದೊಂದು ಟೀಂ ಅದ್ಯಾರ್ಯಾರದ್ದೋ ಕಿವಿ ಕಚ್ಚಿ ಹೆಂಗಾದ್ರೂ ಸರಿ ಪಿಎಸ್ಐರನ್ನ ಇಲ್ಲಿಂದ ಎತ್ತಂಗಡಿ ಮಾಡಿಸಬೇಕು ಅನ್ನೋ ಪ್ಲ್ಯಾನ್ ಮಾಡಿಕೊಂಡಿದೆಯಂತೆ. ದಕ್ಷ ಯುವ ಪಡೆ..! ಅಂದಹಾಗೆ, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಇವತ್ತಿಗೂ ದಕ್ಷ ಯುವ ಪಡೆ ಇದೆ. ಅದ್ಯಾವನೇ ನಾಗರಿಕ ತನ್ನ ಅಳಲು ತೋಡಿಕೊಳ್ಳಲು ಠಾಣೆಯ ಮೆಟ್ಟಿಲು ಹತ್ತಿದ್ರೆ...

Post
ಕಾತೂರು ಅರಣ್ಯದ ಆ ಪ್ರದೇಶದಲ್ಲಿ ಸಿಕ್ಕಿದ್ದು 12 ಬುಡುಚಿಗಳಂತೆ..! ಎಲ್ಲದಕ್ಕೂ FIR ಆಗಿದೆಯಂತೆ, ಹಾಗಿದ್ರೆ ಈ ಪ್ರಶ್ನೆಗಳಿಗೆ ಉತ್ತರಿಸೋರ್ಯಾರು RFO ಸಾಹೇಬ್ರೆ..?

ಕಾತೂರು ಅರಣ್ಯದ ಆ ಪ್ರದೇಶದಲ್ಲಿ ಸಿಕ್ಕಿದ್ದು 12 ಬುಡುಚಿಗಳಂತೆ..! ಎಲ್ಲದಕ್ಕೂ FIR ಆಗಿದೆಯಂತೆ, ಹಾಗಿದ್ರೆ ಈ ಪ್ರಶ್ನೆಗಳಿಗೆ ಉತ್ತರಿಸೋರ್ಯಾರು RFO ಸಾಹೇಬ್ರೆ..?

ಮುಂಡಗೋಡ: ಕಾತೂರು ಅರಣ್ಯ ವ್ಯಾಪ್ತಿಯಲ್ಲಿ ಮರಗಳ ಮಾರಣಹೋಮದ ಸುದ್ದಿ ಪಬ್ಲಿಕ್ ಫಸ್ಟ್ ನಲ್ಲಿ ಬಿತ್ತರಿಸಿದ್ದೇ ತಡ, ಕಾತೂರಿನ RFO ಸಾಹೇಬ್ರು ಉರಿದುಬಿದ್ದಿದ್ದಾರಂತೆ‌‌. ಅದೇಲ್ಲ ಬುಡುಚಿಗಳು ಹಳೆಯವು, ಅದರ ಮೇಲೆ ಈಗಾಗಲೇ ಕೇಸು ದಾಖಲಿಸಲಾಗಿದೆ ಅಂತೇಲ್ಲ ಬುಸುಗುಟ್ಟಿದ್ದಾರಂತೆ. ಆದ್ರೆ, ಒಂದು ಮಾತ್ರ ಅರ್ಥವಾಗ್ತಿಲ್ಲ. ಈ ಅರಣ್ಯ ಇಲಾಖೆಯ ಅಧಿಕಾರಿಗಳು ಕೇವಲ ಎಫ್ ಐ ಆರ್ ಗಷ್ಟೇ ಸೀಮಿತವಾಗಿಬಿಟ್ರಾ..? ಅಥವಾ ಅರಣ್ಯದಲ್ಲಿ ರಕ್ಷಣೆಯ ಜವಾಬ್ದಾರಿಯನ್ನೇ ಮರೆತ್ರಾ..? ಈ ಪ್ರಶ್ನೆ ಸದ್ಯ ಪರಿಸರ ಪ್ರಿಯರಿಗೆ ಕಾಡ್ತಿದೆ. 12 FIR ಆಗಿದೆಯಂತೆ..! ನಂಗೆ...

Post
ಕಾತೂರು ಅರಣ್ಯದಲ್ಲಿ ಮರಗಳ ಮಾರಣಹೋಮ, ಕಾಡಲ್ಲಿ ಕಂಡದ್ದು ಸಾಲು ಮರಗಳ ಹೆಣ..! ಅಸಲು, ಅಧಿಕಾರಿಗಳೇ ಇಲ್ಲಿ ಅಕ್ರಮ ದಂಧೆಗೆ ಇಳಿದು ಬಿಟ್ರಾ..?

ಕಾತೂರು ಅರಣ್ಯದಲ್ಲಿ ಮರಗಳ ಮಾರಣಹೋಮ, ಕಾಡಲ್ಲಿ ಕಂಡದ್ದು ಸಾಲು ಮರಗಳ ಹೆಣ..! ಅಸಲು, ಅಧಿಕಾರಿಗಳೇ ಇಲ್ಲಿ ಅಕ್ರಮ ದಂಧೆಗೆ ಇಳಿದು ಬಿಟ್ರಾ..?

  ಮುಂಡಗೋಡ ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿಗಳು ಅದೇನು ಕಡೆದು ಗುಡ್ಡೆ ಹಾಕ್ತಿದಾರೋ ಗೊತ್ತಿಲ್ಲ. ಇಲ್ಲಿ‌ನ ಅರಣ್ಯ ಸಂಪತ್ತು ಹಾಡಹಗಲೇ ಲೂಟಿಯಾಗ್ತಿದೆ‌. ಅದ್ರಲ್ಲೂ ಕಾತೂರ ಭಾಗದಲ್ಲಿ ನಿತ್ಯವೂ ನೂರಾರು ಮರಗಳು ಉಸಿರು ಚೆಲ್ಲುತ್ತಿವೆ. ಅಸಲು, ಇದೇಲ್ಲ ಖುದ್ದು ಅರಣ್ಯ ಇಲಾಖೆಯ ಕೆಲ ಬ್ರಷ್ಟ ಕಾರಬಾರಿಗಳ ನೆರಳಲ್ಲೇ ನಡೀತಿದೆ ಅನ್ನೋದು ಬಹುದೊಡ್ಡ ದುರಂತ. ಸಾಲು ಸಾಲು ಮಾರಣಹೋಮ..! ನಿಜ ಅಂದ್ರೆ ಕಾತೂರು ಅರಣ್ಯ ವ್ಯಾಪ್ತಿಯ ಹಲವು ಕಡೆಗಳಲ್ಲಿ ಹಾಡಹಗಲೇ ಅಮೂಲ್ಯ ಅರಣ್ಯ ಸಂಪತ್ತು ಕೊಳ್ಳೆ ಹೊಡೆಯಲಾಗ್ತಿದೆ. ಕೋಡಂಬಿ...

Post
ದಕ್ಷ ಎಸ್ಪಿ ಮೇಡಂ ಎತ್ತಂಗಡಿಗೆ ಮುಹೂರ್ತ ಫಿಕ್ಸ್..? ಉಸ್ತುವಾರಿ “ಕೋಟಾ” ದಡಿ “ವಿಷ್ಣು” ವರ್ಧನವಾ..? ಅಷ್ಟಕ್ಕೂ,ದಕ್ಷತೆಗೆ ಇಷ್ಟೆನಾ ಬೆಲೆ..?

ದಕ್ಷ ಎಸ್ಪಿ ಮೇಡಂ ಎತ್ತಂಗಡಿಗೆ ಮುಹೂರ್ತ ಫಿಕ್ಸ್..? ಉಸ್ತುವಾರಿ “ಕೋಟಾ” ದಡಿ “ವಿಷ್ಣು” ವರ್ಧನವಾ..? ಅಷ್ಟಕ್ಕೂ,ದಕ್ಷತೆಗೆ ಇಷ್ಟೆನಾ ಬೆಲೆ..?

ಉತ್ತರ ಕನ್ನಡ ಕಂಡ ದಕ್ಷ ಐಪಿಎಸ್ ಅಧಿಕಾರಿ, ಎಸ್ಪಿ ಡಾ. ಸುಮನಾ ಪೆನ್ನೇಕರ್ ಮೇಡಂ ವರ್ಗಾವಣೆ ಆಗೋದು ಬಹುತೇಕ ಫಿಕ್ಸ್ ಆಗಿದೆಯಂತೆ. ಇದೇ ಡಿಸೆಂಬರ್ ಅಂತ್ಯದ ಹೊತ್ತಿಗೆ ಸುಮನಾ ಮೇಡಮ್ಮಿಗೆ ಜಿಲ್ಲೆಯಿಂದ ಎತ್ತಂಗಡಿ ಮಾಡೋಕೆ ಅದೊಂದು “ಕೂಟ” ನಿದ್ದೆಗೆಟ್ಟು ಓಡಾಡ್ತಿದೆ ಅನ್ನೋದು ಸದ್ಯದ ಸುದ್ದಿ. ದಕ್ಷ, ಖಡಕ್ ಪೊಲೀಸ್ ಅಧಿಕಾರಿಣಿ ಸುಮನಾ ಪೆನ್ನೇಕರ್ ಜಾಗಕ್ಕೆ “ಉಸ್ತುವಾರಿ” ಗಳ ಖಾಸಾ ಶಿಷ್ಯರೊಬ್ಬರನ್ನು ಪ್ರತಿಷ್ಟಾಪಿಸಲು ಮುಹೂರ್ತವೂ ಪಿಕ್ಸ್ ಆಗಿದೆಯಂತೆ. “ವಿಷ್ಣು” ವರ್ಧನವಾ..? ಈ ಮೊದಲು ಉಡುಪಿ ಜಿಲ್ಲೆಯ ಎಸ್ಪಿಯಾಗಿ‌ ಕಾರ್ಯನಿರ್ವಹಿಸಿದ್ದ...

Post
ಅರೆಬೈಲು ಘಾಟಿನಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲೇ ರಾಬರಿ, ಕಾರು ಅಡ್ಡಗಟ್ಟಿ ದೋಚಿದ್ದು ಎಷ್ಟು ಕೋಟಿ ಗೊತ್ತಾ..?

ಅರೆಬೈಲು ಘಾಟಿನಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲೇ ರಾಬರಿ, ಕಾರು ಅಡ್ಡಗಟ್ಟಿ ದೋಚಿದ್ದು ಎಷ್ಟು ಕೋಟಿ ಗೊತ್ತಾ..?

ಯಲ್ಲಾಪುರ ಅರೆಬೈಲ್ ಘಾಟಿನಲ್ಲಿ ಭಯಾನಕ ರಾಬರಿ ನಡೆದಿದೆ‌. ಕಾರಲ್ಲಿ ತೆರಳುತ್ತಿದ್ದವರನ್ನ ಥೇಟು ಸಿನಿಮಾ ಸ್ಟೈಲಿನಲ್ಲೇ ಅಡ್ಡಗಟ್ಟಿ ಕೋಟಿ ಕೋಟಿ ಹಣ ಎಗರಿಸಿಕೊಂಡು ಹೋಗಿದ್ದಾರೆ ಖದೀಮರು. ಜೊತೆಗೆ ಕಾರನ್ನೂ ಬಿಡದೇ ರಾಬರಿ ಮಾಡಿದ್ದಾರೆ ಆಗಂತುಕರು‌. ಹೀಗಾಗಿ, ಈ ಪ್ರಕರಣವೀಗ ಇಡೀ ಯಲ್ಲಾಪುರದ ಮಂದಿಯ ನಿದ್ದೆಗೆಡಿಸಿದೆ. ಹೇಗಾಯ್ತು..? ಅವತ್ತು ಅಕ್ಟೋಬರ್ ಒಂದನೇ ತಾರೀಖು, ಶನಿವಾರ ರಾತ್ರಿ ನಡೆದ ಘಟನೆ ಇದು. ಬೆಳಗಾವಿಯಿಂದ ಯಲ್ಲಾಪುರ ಮಾರ್ಗವಾಗಿ ಕೇರಳಕ್ಕೆ ಚಿನ್ನ ಖರೀದಿಗಾಗಿ ಹೊರಟಿದ್ದವರನ್ನು ಅನಾಮತ್ತಾಗಿ ರಾಬರಿ ಮಾಡಲಾಗಿದೆ. ಚಿನ್ನ ಖರೀದಿಗಾಗಿ ಸ್ವಿಪ್ಟ್ ಕಾರಲ್ಲಿ...

Post
ಗಾಂಜಾ ಮಾರಾಟ ಮಾಡುವ ವ್ಯಕ್ತಿಯನ್ನು, ಸಿನಿಮಿಯ ರೀತಿ ಬಂಧಿಸಿದ ಪೊಲೀಸ್ರು..!

ಗಾಂಜಾ ಮಾರಾಟ ಮಾಡುವ ವ್ಯಕ್ತಿಯನ್ನು, ಸಿನಿಮಿಯ ರೀತಿ ಬಂಧಿಸಿದ ಪೊಲೀಸ್ರು..!

ಹಳಿಯಾಳ: ಗಾಂಜಾ ಮಾರಾಟ ಮಾಡಲು ಪಟ್ಟಣಕ್ಕೆ ಬರುತ್ತಿದ್ದ ವ್ಯಕ್ತಿಯನ್ನು ಸಿನಿಮಿಯ ರೀತಿಯಲ್ಲಿ ಟ್ರೇಸ್ ಮಾಡಿ ಹಿಡಿದಿದ್ದಾರೆ ಹಳಿಯಾಳ ಪೊಲೀಸ್ರು. ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದು ಕಲ್ಲಯ್ಯ ಚಂಬಯ್ಯ ಗುಡಿ ಎಂಬುವನೇ ಗಾಂಜಾ ಸಾಗಿಸುತ್ತಿದ್ದ ಆರೋಪಿಯಾಗಿದ್ದಾನೆ. ಅಂದಹಾಗೆ, ಹಳಿಯಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸದ್ಯ ನವರಾತ್ರಿಯ ಸಂಭ್ರಮ ಜೋರಾಗಿದೆ. ಗ್ರಾಮಗಳಲ್ಲಿ ದಸರಾ ಹಬ್ಬದ ನಿಮಿತ್ಯ ದುರ್ಗಾದೌಡ್ ಮೆರೆವಣಿಗೆ ಸಂಭ್ರಮದಿಂದ ನಡೆಯುತ್ತಿದೆ. ಹೀಗಾಗಿ ದುರ್ಗಾ ದೌಡ್ ಮೆರವಣಿಗೆಯ ಬಂದೋಬಸ್ತ್ ಗಾಗಿ ತೆರಳಿದ್ದ ಹಳಿಯಾಳ ಪಿಎಸ್ ಐ ವಿನೋದ್ ರೆಡ್ಡಿ ಹಾಗೂ...

Post
ಅ.28 ಕ್ಕೆ ಗ್ರಾಪಂ ಉಪಚುನಾವಣೆ ದಿನಾಂಕ ಫಿಕ್ಸ್, ಮುಂಡಗೋಡಿನ ಪಾಳಾ ಪಂಚಾಯತಿ 1ಸ್ಥಾನಕ್ಕೆ ಚುನಾವಣೆ

ಅ.28 ಕ್ಕೆ ಗ್ರಾಪಂ ಉಪಚುನಾವಣೆ ದಿನಾಂಕ ಫಿಕ್ಸ್, ಮುಂಡಗೋಡಿನ ಪಾಳಾ ಪಂಚಾಯತಿ 1ಸ್ಥಾನಕ್ಕೆ ಚುನಾವಣೆ

ಬೆಂಗಳೂರು: ರಾಜ್ಯದಲ್ಲಿ ಖಾಲಿಯಾಗಿರುವ ಗ್ರಾಮ ಪಂಚಾಯತಿ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 28 ರಂದು ಗ್ರಾಮ ಪಂಚಾಯತಿ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. 2022 ಅಗಷ್ಟ ನಿಂದ, 2022ರ ನವೆಂಬರ್ ತಿಂಗಳವರೆಗಿನ ಅವಧಿಯಲ್ಲಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ / ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ,...

Post
ಶಿರಸಿಯಲ್ಲಿ NIA ದಾಳಿ, ಓರ್ವ SDPI ಮುಖಂಡನ ಬಂಧನ, ಬಂಧಿತ ತನ್ನ ಮನೆಯ ಗೋಡೆಯ ಮೇಲೆ ಏನೇಲ್ಲ ಬರೆದಿದ್ದ ಗೊತ್ತಾ..?

ಶಿರಸಿಯಲ್ಲಿ NIA ದಾಳಿ, ಓರ್ವ SDPI ಮುಖಂಡನ ಬಂಧನ, ಬಂಧಿತ ತನ್ನ ಮನೆಯ ಗೋಡೆಯ ಮೇಲೆ ಏನೇಲ್ಲ ಬರೆದಿದ್ದ ಗೊತ್ತಾ..?

ಶಿರಸಿ: ರಾಜ್ಯದ ವಿವಿಧೆಡೆ ರಾಷ್ಟ್ರೀಯ ತನಿಖಾ ಪಡೆಗಳಿಂದ ದಾಳಿಯಾಗಿದೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲೂ ಎನ್‌ಐಎ ಹಾಗೂ ಐಬಿ ತಂಡದಿಂದ ದಾಳಿ ನಡೆದಿದೆ. ಪರಿಣಾಮ, ಶಿರಸಿ ತಾಲೂಕಿನ ಟಿಪ್ಪು ನಗರದಲ್ಲಿ ಸ್ಥಳೀಯ ಪೊಲೀಸರ ಸಹಾಯದಿಂದ ಓರ್ವ ಎಸ್ಡಿಪಿಐ ಮುಖಂಡನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎಸ್ಡಿಪಿಐ ಮುಖಂಡ ಹಝೀಝ್ ಅಬ್ದುಲ್ ಶುಕುರ್ ಹೊನ್ನಾವರ್ (45) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಬೆಳಿಗ್ಗೆ 3.30ರಿಂದಲೇ ಹಝೀಝ್ ಮನೆಯ ಮೇಲೆ ದಾಳಿ ನಡೆಸಲು ಪೊಲೀಸರ ದಂಡೇ ನೆರೆದಿತ್ತು ಆದ್ರೆ ಬೆಳ್ಳಂ ಬೆಳಿಗ್ಗೆ...

Post
ಬರಗೆಟ್ಟವನ ಲಂಚದಾಸೆಗೆ ಬೀದಿಗೆ ಬಿದ್ಲಾ ಆ ವೃದ್ದೆ..? ಅಸಲು, ಆ ವೃದ್ದೆಗೆ ಆಗಿರೋ ಅನ್ಯಾಯ ಎಂಥಾದ್ದು ಗೊತ್ತಾ..?

ಬರಗೆಟ್ಟವನ ಲಂಚದಾಸೆಗೆ ಬೀದಿಗೆ ಬಿದ್ಲಾ ಆ ವೃದ್ದೆ..? ಅಸಲು, ಆ ವೃದ್ದೆಗೆ ಆಗಿರೋ ಅನ್ಯಾಯ ಎಂಥಾದ್ದು ಗೊತ್ತಾ..?

 ಮುಂಡಗೋಡ: ಪ್ರಿಯ ವೀಕ್ಷಕರೇ, ನಿನ್ನೆ ನಿಮಗೆ ಮುಂಡಗೋಡ ತಾಲೂಕಿನಲ್ಲಿ ಬಡವ್ರಿಗೆ ಹಂಚಿಕೆಯಾಗೋ ಮನೆಗಳಲ್ಲಿ ನಡೆಯುತ್ತಿರೋ ಎತ್ತುವಳಿ ಪುರಾಣದ ಬಗ್ಗೆ ಹೇಳಿದ್ವಿ. ನೊಂದ ಸಂತ್ರಸ್ಥ ಕುಟುಂಬಗಳ ಆರ್ತನಾದ ಕೇಳಿಸಿದ್ವಿ. ಇವತ್ತೂ ಕೂಡ ಅದರದ್ದೇ ಮುಂದುವರಿದ ಭಾಗವಾಗಿ ಅದೊಂದು ಮನಕಲುಕುವ ಹಕೀಕತ್ತು ತಮ್ಮ ಮುಂದೆ ಇಡ್ತಿದಿವಿ. ರೊಕ್ಕ ಗಳಿಸಲೆಂದೇ ಬಾಯ್ತೆರೆದು ಕೂತಿರೋ, ಮನುಷ್ಯತ್ವವನ್ನೇ ಮರೆತಿರೋ ಕೆಲವು ಸರ್ಕಾರಿ ಸಿಬ್ಬಂದಿಗಳು ಹೇಗೇಲ್ಲ ಅಮಾನುಷವಾಗಿ ನಡೆದುಕೊಳ್ತಾರೆ ಅನ್ನೋದನ್ನ ಇವತ್ತು ಹೇಳ್ತಿವಿ.  ವೇದಿಕೆಯಷ್ಟೇ..! ಯಸ್, ನಾವೀಗ ಮುಂಡಗೋಡಿನ ತಹಶೀಲ್ದಾರ್ ಕಚೇರಿಯ ಅವನೊಬ್ಬನ...

error: Content is protected !!