ಮುಂಡಗೋಡ ತಾಲೂಕಿನ ಕುಂದರಗಿ ಕ್ರಾಸ್ ಬಳಿ ಭೀಕರ ಅಫಘಾತವಾಗಿದೆ. ರಸ್ತೆ ತಿರುವಿನಲ್ಲಿ ಸ್ಕಿಡ್ ಆಗಿ ಬಿದ್ದು ರಸ್ತೆ ಪಕ್ಕದ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರೋ ಯುವಕನನ್ನು ಹಾವೇರಿ ಜಿಲ್ಲೆಯ ಕರ್ಜಗಿ ಸಮೀಪದ ಕಳ್ಳಿಹಾಳ ಗ್ರಾಮದವನು ಅನ್ನೋ ಮಾಹಿತಿ ಲಭ್ಯವಾಗಿದೆ. ಆದ್ರೆ ಯುವಕನ ಹೆಸರು ಇನ್ನೂ ತಿಳಿದು ಬಂದಿಲ್ಲ. ಅಪಘಾತಗೊಂಡು ಗಂಭೀರವಾಗಿ ಗಾಯಗೊಂಡು ರಸ್ತೆ ಮೇಲೆ ಬಿದ್ದಿದ್ದಾಗ, ಸನವಳ್ಳಿ ಗ್ರಾಮದ ಕೃಷ್ಟ ನಾಗಪ್ಪ ಭೋವಿ, ಹಾಗೂ ಗೌರಿಶ್ ಎನ್ನುವ ಯುವಕರು ಮಾನವೀಯತೆ...
Top Stories
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ಓಣಿಕೇರಿಯಲ್ಲಿ ಶುಂಠಿ ಕೆಲಸಕ್ಕೆ ಬಂದಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ವಿದ್ಯುತ್ ಆಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ನಂದಿಕಟ್ಟಾದಲ್ಲಿ ಶ್ರೀರಾಮ ನವಮಿ ಸಿದ್ದತೆ, ಎಪ್ರಿಲ್ 6ರಂದು ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
Tag: crime news
ಕೋಣನಕೇರಿ ಕಬ್ಬಿನ ಫ್ಯಾಕ್ಟರಿಯಲ್ಲಿ ದಾರುಣ ಘಟನೆ, ಮಶಿನ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನ ಭಯಾನಕ ಸಾವು..!
ಶಿಗ್ಗಾವಿ: ತಾಲೂಕಿನ ಕೋಣನಕೇರಿಯ ವಿಐಎನ್ ಪಿ ಡಿಸ್ಟಿಲರೀಸ್ ಆಂಡ್ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ನ ಸಕ್ಕರೆ ಕಾರ್ಖಾನೆಯಲ್ಲಿ ದಾರುಣ ಘಟನೆ ನಡೆದಿದೆ. ಕಬ್ಬಿನ ಪುಡಿ ತುಂಬುತ್ತಿದ್ದ 19 ವರ್ಷದ ಕಾರ್ಮಿಕನೊಬ್ಬ ದಾರುಣ ಸಾವು ಕಂಡಿದ್ದಾನೆ. ಹೀಗಾಗಿ, ಸಕ್ಕರೆ ಕಾರ್ಖಾನೆ ಮಾಲೀಕ ಸೇರಿ ಆರು ಜನರ ವಿರುದ್ಧ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ಶನಿವಾರ ಸಂಜೆ..! ಅಂದಹಾಗೆ, ನಿನ್ನೆ ಶನಿವಾರ ಅಂದ್ರೆ ದಿ. 25 ರ ಸಂಜೆ 6.20 ರ ಸುಮಾರಿನಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ...
ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತ ಮಹಿಳೆ ಸೇರಿ ಇಬ್ಬರು ಸಾವು, ಪುಟ್ಟ ಮಗುವಿಗೆ ಗಾಯ..!
ಹಾವೇರಿಯಲ್ಲಿ ಭೀಕರ ರಸ್ತೆ ಆಪಘಾತವಾಗಿದೆ. ಪರಿಣಾಮ ಇಬ್ಬರು ದುರಂತ ಸಾವು ಕಂಡಿದ್ದಾರೆ. ಹಾವೇರಿ ನಗರದ ಆರ್ ಟಿ ಓ ಬೈ ಪಾಸ್ ಬಳಿ ನಡೆದಿರೋ ಆಪಘಾತದಲ್ಲಿ ಎರಡು ವರ್ಷದ ಮಗುವಿಗೂ ಗಾಯವಾಗಿದೆ. ಮಲೆಬೆನ್ನೂರಿನಿಂದ ಧಾರವಾಡಕ್ಕೆ ಹೊರಟಿದ್ದ ಕಾರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಪಲ್ಟಿಯಾಗಿದೆ. ಕಾರ್ ನಲ್ಲಿದ್ದ ಇಬ್ಬರು ದುರ್ಮರಣ ಹೊಂದಿದ್ದು, ಗಾಯಗೊಂಡಿದ್ದ ಎರಡು ವರ್ಷ ದ ಮಗು ಹುಬ್ಬಳ್ಳಿಯ ಕಿಮ್ಸ ಗೆ ರವಾನೆ ಮಾಡಲಾಗಿದೆ. ಧಾರವಾಡ ಮೂಲದ ಚೇತನಾ(35) ಸ್ಥಳದಲ್ಲೇ ಸಾವು ಕಂಡಿದ್ದರೆ, ದುಂಡೆಪ್ಪ (60), ಹಾವೇರಿ...
ಭಟ್ಕಳ ಹಾಡುವಳ್ಳಿಯ ನಾಲ್ವರ ಮರ್ಡರ್ ಕೇಸ್: ಹತ್ಯೆ ಮಾಡಿದ್ದ ಆರೋಪಿ ಯಾರು ಗೊತ್ತಾ..?
ಭಟ್ಕಳ: ತಾಲೂಕಿನ ಹಾಡುವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಭೀಕರ ಹತ್ಯೆಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಗಿಳಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರಿಗೆ ಬಹುಮುಖ್ಯ ಸುಳಿವು ಲಭ್ಯವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆಗಂತುಕ ಕೊಲೆಯಾದವರ ಸಂಬಂಧಿಯೇ ಆಗಿದ್ದಾನೆ ಅಂತಿದೆ ಪೊಲೀಸ್ ಮೂಲಗಳು. ಹೌದು, ಭಟ್ಕಳ ತಾಲೂಕಿನ ಹಾಡುವಳ್ಳಿ ಒಣಿಬಾಗಿಲು ನಿವಾಸಿ ಶಂಭು ಭಟ್ (70), ಅವರ ಪತ್ನಿ ಮಾದೇವಿ ಭಟ್(60), ಅವರ ಮಗ ರಾಘು (ರಾಜು ಭಟ್) (40)...
ಭಟ್ಕಳದ ಹಾಡವಳ್ಳಿಯಲ್ಲಿ ಭೀಕರ ಕೊಲೆ, ಒಂದೇ ಕುಟುಂಬದ ನಾಲ್ವರ ಹತ್ಯೆ, ಹಾಡಹಗಲೇ ನಡೀತು ಭಯಾನಕ ಕೃತ್ಯ..!
ಭಟ್ಕಳ: ನಿಜಕ್ಕೂ ಭಟ್ಕಳ ತಾಲೂಕು ಬೆಚ್ಚಿ ಬಿದ್ದಿದೆ. ತಾಲೂಕಿನ ಹಾಡವಳ್ಳಿ ಗ್ರಾಮದಲ್ಲಿ ಹಾಡಹಗಲೇ ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಇಡಿ ಇಡಿಯಾಗಿ ನಾಲ್ವರನ್ನು ಬಲಿ ಪಡೆಯಲಾಗಿದೆ. ಹೀಗಾಗಿ, ಆ ಪ್ರದೇಶದಲ್ಲಿ ಈಗ ರಕ್ತ ಸಿಕ್ತ ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹಾಡವಳ್ಳಿ ಗ್ರಾಮದ ಶಂಭು ಹೆಗಡೆ (65) ಆತನ ಪತ್ನಿ ಮಾದೇವಿ ಹೆಗಡೆ (40) ಮಗ ರಾಜೀವ್ ಹೆಗಡೆ (34) ಕುಸುಮಾ ಹೆಗಡೆ (30) ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಇನ್ನು ಶವಗಳು ಮನೆಯ ಹೊರಗಡೆ...
ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲಾಗದೇ ಒಂದೇ ಕುಟುಂಬದ ಮೂವರು ಆತ್ಮಹತ್ಯೆ..! ಎಲ್ಲಿ ಗೊತ್ತಾ..?
ಸವಣೂರಿನಲ್ಲಿ ಕರುಳು ಹಿಂಡುವ, ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಸಾಲಮಾಡಿ ಮಗಳಮದುವೆ ಮಾಡಿದ್ದ ದಂಪತಿಗಳು ಸಾಲ ತೀರಿಸಲಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ, ತಂದೆ, ತಾಯಿಯ ಸಾವು ಕಂಡ ಮಗಳೂ ಕೂಡ ನೇಣಿಗೆ ಶರಣಾಗಿದ್ದಾಳೆ. ಇದ್ರೊಂದಿಗೆ ಒಂದೇ ಕುಟುಂಬ ಮೂವರು ಸಾವಿನ ಹಾದಿ ಹಿಡಿದಿದ್ದಾರೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ಘಟಮೆ ನಡೆದಿದೆ. ತಂದೆ ಹನುಮಂತಗೌಡ ಪಾಟೀಲ (54) ತಾಯಿ ಲಲಿತಾ ಪಾಟೀಲ(50) ಮತ್ತು ಮಗಳು ನೇತ್ರಾ ಪಾಟೀಲ(22) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲ...
ಅಗಡಿ ಸಮೀಪದ ನೆಲ್ಲಿಹರವಿ ಕ್ರಾಸ್ ಬಳಿ ಭೀಕರ ಅಪಘಾತ, ನಂದಿಕಟ್ಟಾದ ಇಬ್ಬರು ಸೇರಿ, ನಾಲ್ವರಿಗೆ ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಗಡಿಭಾಗ ಅಗಡಿ ಮಿಲ್ ಸಮೀಪದ ನೆಲ್ಲಿಹರವಿ ಕ್ರಾಸ್ ಬಳಿ ಭೀಕರ ಅಪಘಾತವಾಗಿದೆ. ಪರಿಣಾಮ ನಾಲ್ವರಿಗೆ ಗಂಭೀರ ಗಾಯವಾಗಿದೆ. ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಘಟನೆ ನಡೆದಿದೆ. ಅಗಡಿ ಶಾಂತಿನಗರದ ಸುರೇಶ್ ಎಂಬುವ ಯುವಕ, ನಂದಿಕಟ್ಟಾ ಗ್ರಾಮದ ಮಹಮದ್ ದುಂಡಸಿ (37), ಈಸಾಕ್ ಯಲ್ಲಾಪುರ (35) ಇಬ್ಬರು ಯುವಕರಿಗೆ ಹಾಗೂ ಕಲಘಟಗಿ ತಾಲೂಕಿನ ಓರ್ವ ಯುವಕನಿಗೆ ಗಂಭೀರ ಗಾಯವಾಗಿದೆ. ನೆಲ್ಲಿಹರವಿ ಕ್ರಾಸ್ ಬಳಿ ಘಟನೆ ನಡೆದಿದ್ದು, ಸ್ಥಳೀಯರು ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ....
ಅಗಡಿ ಮಿಲ್ ಬಳಿ ಬೈಕ್ ಅಪಘಾತ, ಓರ್ವ ಯುವಕನಿಗೆ ಗಾಯ, ಆಸ್ಪತ್ರೆಗೆ ರವಾನೆ..!
ಮುಂಡಗೋಡ ತಾಲೂಕಿನ ಅಗಡಿ ಮಿಲ್ ಬಳಿ ಮತ್ತೊಂದು ಬೈಕ್ ಅಪಘಾತವಾಗಿದೆ. ಪರಿಣಾಮ ಓರ್ವ ಯುವಕನಿಗೆ ಗಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿವೆ. ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದ ಮಲ್ಲಿಕಜಾನ್ ವಾಲೀಕಾರ್ ಎಂಬುವವನೇ ಬೈಕ್‌ಅಪಘಾತದಲ್ಲಿ ಗಾಯಗೊಂಡ ಯುವಕನಾಗಿದ್ದಾನೆ. ಈತ ಅಗಡಿ ಸಮೀಪದ ಪೆಟ್ರೊಲ್ ಬಂಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಇಂದು ಕೆಲಸ ಮುಗಿಸಿ ಹೊರಟಿದ್ದಾಗ ಘಟನೆ ನಡೆದಿದೆ. ಇನ್ನು ಗಾಯಾಳುವನ್ನು ಅಂಬುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್ ಆಗಿ ಗಾಯಗೊಂಡಿದ್ದ ಅಗಡಿಯ ಯುವಕ ಸಾವು..!
ಮುಂಡಗೋಡ ತಾಲೂಕಿನ ಕಲಘಟಗಿ ರಸ್ತೆಯ ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡಿದ್ದ ಅಗಡಿಯ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸಂಜು ಸಿದ್ದಪ್ಪ ಗಳಗಿ (23) ಮೃತಪಟ್ಟ ಯುವಕನಾಗಿದ್ದಾನೆ. ಈತ ಮೊನ್ನೆ ಶಿವರಾತ್ರಿಯ ದಿನ ಗದ್ದೆಗೆ ಹೋಗಿ ವಾಪಸ್ ಅಗಡಿ ಕಡೆಗೆ ಬರುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದಿದ್ದ. ಪರಿಣಾಮ ಯುವಕನ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ...
ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್, ಅಗಡಿಯ ಯುವಕನಿಗೆ ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಕಲಘಟಗಿ ರಸ್ತೆಯಲ್ಲಿ ಅಪಘಾತವಾಗಿದೆ. ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್ ಆಗಿ ಬಿದ್ದು ಅಗಡಿಯ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಂಜು ಸಿದ್ದಪ್ಪ ಗಳಗಿ (23) ಗಂಭೀರ ಗಾಯಗೊಂಡ ಯುವಕನಾಗಿದ್ದಾನೆ. ಈತ ಗದ್ದೆಗೆ ಹೋಗಿ ವಾಪಸ್ ಅಗಡಿಗೆ ಬರುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾನೆ. ಪರಿಣಾಮ ಯುವಕನ ತಲೆಗೆ ಪೆಟ್ಟಾಗಿದ್ದು, ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು...