ಹಾವೇರಿಯಲ್ಲಿ ಭೀಕರ ರಸ್ತೆ ಆಪಘಾತವಾಗಿದೆ. ಪರಿಣಾಮ ಇಬ್ಬರು ದುರಂತ ಸಾವು ಕಂಡಿದ್ದಾರೆ‌. ಹಾವೇರಿ ನಗರದ ಆರ್ ಟಿ ಓ ಬೈ ಪಾಸ್ ಬಳಿ ನಡೆದಿರೋ ಆಪಘಾತದಲ್ಲಿ ಎರಡು ವರ್ಷದ ಮಗುವಿಗೂ ಗಾಯವಾಗಿದೆ.

ಮಲೆಬೆನ್ನೂರಿನಿಂದ ಧಾರವಾಡಕ್ಕೆ ಹೊರಟಿದ್ದ ಕಾರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಪಲ್ಟಿಯಾಗಿದೆ. ಕಾರ್ ನಲ್ಲಿದ್ದ ಇಬ್ಬರು ದುರ್ಮರಣ ಹೊಂದಿದ್ದು, ಗಾಯಗೊಂಡಿದ್ದ ಎರಡು ವರ್ಷ ದ ಮಗು ಹುಬ್ಬಳ್ಳಿಯ ಕಿಮ್ಸ ಗೆ ರವಾನೆ ಮಾಡಲಾಗಿದೆ.

ಧಾರವಾಡ ಮೂಲದ ಚೇತನಾ(35) ಸ್ಥಳದಲ್ಲೇ ಸಾವು ಕಂಡಿದ್ದರೆ, ದುಂಡೆಪ್ಪ (60), ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಸಾವು ಕಂಡಿದ್ದಾರೆ. ಮಾರುತಿ ಎಕ್ಸ್ಪ್ರೆಸ್ ಕಾರ್ ನಲ್ಲಿ ಧಾರವಾಡ ಕ್ಕೆ ಹೊರಟಿದ್ದ ಒಂದೇ ಕುಟುಂಬದ ಸದಸ್ಯರುಬ ಇವರಾಗಿದ್ದು, ಇನ್ನುಳಿದ ನಾಲ್ಕು ಜನ್ರಿಗೆ ಸಣ್ಣಪುಟ್ಟ ಗಾಯವಾಗಿದೆ. ಹಾವೇರಿ ರೂರಲ್ ಟ್ರಾಫಿಕ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

error: Content is protected !!