ಶಿಗ್ಗಾವಿ: ತಾಲೂಕಿನ ಕೋಣನಕೇರಿಯ
ವಿಐಎನ್ ಪಿ ಡಿಸ್ಟಿಲರೀಸ್ ಆಂಡ್ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ನ ಸಕ್ಕರೆ ಕಾರ್ಖಾನೆಯಲ್ಲಿ ದಾರುಣ ಘಟನೆ ನಡೆದಿದೆ. ಕಬ್ಬಿನ ಪುಡಿ ತುಂಬುತ್ತಿದ್ದ 19 ವರ್ಷದ ಕಾರ್ಮಿಕನೊಬ್ಬ ದಾರುಣ ಸಾವು ಕಂಡಿದ್ದಾ‌ನೆ.
ಹೀಗಾಗಿ, ಸಕ್ಕರೆ ಕಾರ್ಖಾನೆ ಮಾಲೀಕ ಸೇರಿ ಆರು ಜನರ ವಿರುದ್ಧ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆ ಶನಿವಾರ ಸಂಜೆ..!
ಅಂದಹಾಗೆ, ನಿನ್ನೆ ಶನಿವಾರ ಅಂದ್ರೆ ದಿ. 25 ರ ಸಂಜೆ 6.20 ರ ಸುಮಾರಿನಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ದುಂಢಸಿ ಗ್ರಾಮದ 19 ವರ್ಷ ಕಾರ್ಮಿಕ ನವೀನ್ ಬಸಪ್ಪ ಚಲವಾದಿ ಎಂಬುವವನು ಕಬ್ಬಿನ ಪುಡಿ ತುಂಬುವ ಕೆಲಸ ಮಾಡುತ್ತಿದ್ದ, ಈ ವೇಳೆ ಆಕಸ್ಮಿಕವಾಗಿ ಯಂತ್ರದ ಬೆಲ್ಟ್ ಗೆ ಕಾರ್ಮಿಕನ ಕೈ ತಗುಲಿ ಇಡಿ ಇಡಿಯಾಗಿ ದೇಹವನ್ನೇ ಆಕ್ರಮಿಸಿಕೊಂಡಿದೆ. ಪರಿಣಾಮ ಕೈ ಕಾಲುಗಳು ತುಂಡು ತುಂಡಾಗಿ ಭಯಾನಕ ರೀತಿಯಲ್ಲಿ ಸಾವು ಕಂಡಿದ್ದಾನೆ. ಹೀಗಾಗಿ, ಮೃತ ಕಾರ್ಮಿಕನ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.

ಸುರಕ್ಷಾ ಕ್ರಮವೇ ಇರಲಿಲ್ಲವಂತೆ..!
ಇನ್ನು, ಕಾರ್ಮಿಕನ ದುರಂತ ಸಾವಿಗೆ ಸಂಬಂಧಿಸಿದಂತೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ರವಿವಾರ ಮದ್ಯಾಹ್ನ ಪ್ರಕರಣ ದಾಖಲಾಗಿದ್ದು, ಎಫ್ ಐಆರ್ ನಲ್ಲಿ ನಮೂದಿಸಿದ ಪ್ರಕಾರ ಫ್ಯಾಕ್ಟರಿಯಲ್ಲಿ ಈ ಸಾವು ಸಂಭವಿಸಲು ನೇರ ಕಾರಣವೇ ಸುರಕ್ಷತಾ ಕ್ರಮ ವಹಿಸದಿರುವುದು. ಬೆಲ್ಟ್ ತಾಕದಂತೆ ಸುರಕ್ಷಾ ಕವಚ ಹಾಕಿಲ್ಲದಿರುವುದು ದುರ್ಘಟನೆಗೆ ಕಾರಣ ಅಂತಾ ನಮೂದಿಸಲಾಗಿದೆ. ಈ ಕಾರಣಕ್ಕಾಗೇ ಕಾರ್ಖಾನೆ ಮಾಲೀಕ ಸೇರಿ ಆರು ಜನರ ಮೇಲೆ ಕೇಸ್ ದಾಖಲಿಸಲಾಗಿದೆ.

ಯಾರ ಯಾರ ಮೇಲೆ ಕೇಸ್..?
ಅಂದಹಾಗೆ, ಬಂಕಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, 1.ಪ್ಯಾಕ್ಟರಿ ಮಾಲೀಕರು,
2.ಮಂಜುನಾಥ, ಮುಖ್ಯ ಜನರಲ್ ಮ್ಯಾನೇಜರ್ 3. ಬಸವರಾಜ ತಂದೆ ಬಸಪ್ಪ 4.ಉಮೇಶ ತಂದೆ ನಿಂಗಪ್ಪ ಸುರವೇ, 5. ವಿಶ್ವನಾಥ ಎ.ಎಸ್. ಶಿವಾಜಪ್ಪ
6 ಆಕಾಶ ಶಿವಾಜಿ ಧರ್ಮೋಜಿ ಎಂಬುವವರ ಮೇಲೆ ಕೇಸು ದಾಖಲಿಸಿಲಾಗಿದೆ.

ಒಟ್ನಲ್ಲಿ, ಇತ್ತಿಚೆಗಷ್ಟೇ ಸಿಎಂ ಬಸವರಾಜ್ ಬೊಮ್ಮಾಯಿಯವರು ಉದ್ಘಾಟಿಸಿದ್ದ ಸಕ್ಕರೆ ಕಾರ್ಖಾನೆಯಲ್ಲಿ ಯುವ ಕಾರ್ಮಿಕ ದುರಂತ ಸಾವು ಕಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

error: Content is protected !!