ಕುಂದರ್ಗಿ ಕ್ರಾಸ್ ಬಳಿ ಬೈಕ್ ಅಪಘಾತ, ಓರ್ವ ಯುವಕನಿಗೆ ಗಂಭೀರ ಗಾಯ, ಮಾನವೀಯತೆ ತೋರಿದ ಸನವಳ್ಳಿಯ ಯುವಕರು..!

ಮುಂಡಗೋಡ ತಾಲೂಕಿನ ಕುಂದರಗಿ ಕ್ರಾಸ್ ಬಳಿ ಭೀಕರ ಅಫಘಾತವಾಗಿದೆ. ರಸ್ತೆ ತಿರುವಿನಲ್ಲಿ ಸ್ಕಿಡ್ ಆಗಿ ಬಿದ್ದು ರಸ್ತೆ ಪಕ್ಕದ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ‌ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ಗಂಭೀರವಾಗಿ ಗಾಯಗೊಂಡಿರೋ ಯುವಕನನ್ನು ಹಾವೇರಿ ಜಿಲ್ಲೆಯ ಕರ್ಜಗಿ ಸಮೀಪದ ಕಳ್ಳಿಹಾಳ ಗ್ರಾಮದವನು ಅನ್ನೋ ಮಾಹಿತಿ ಲಭ್ಯವಾಗಿದೆ. ಆದ್ರೆ ಯುವಕನ ಹೆಸರು ಇನ್ನೂ ತಿಳಿದು ಬಂದಿಲ್ಲ. ಅಪಘಾತಗೊಂಡು ಗಂಭೀರವಾಗಿ ಗಾಯಗೊಂಡು ರಸ್ತೆ ಮೇಲೆ ಬಿದ್ದಿದ್ದಾಗ, ಸನವಳ್ಳಿ ಗ್ರಾಮದ ಕೃಷ್ಟ ನಾಗಪ್ಪ ಭೋವಿ, ಹಾಗೂ ಗೌರಿಶ್ ಎನ್ನುವ ಯುವಕರು ಮಾನವೀಯತೆ ತೋರಿದ್ದಾರೆ. ಆಟೋದಲ್ಲಿ ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

ಸದ್ಯ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದ್ದು, ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!