ಅಗಡಿ ಮಿಲ್ ಬಳಿ ಬೈಕ್ ಅಪಘಾತ, ಓರ್ವ ಯುವಕನಿಗೆ ಗಾಯ, ಆಸ್ಪತ್ರೆಗೆ ರವಾನೆ..!

ಮುಂಡಗೋಡ ತಾಲೂಕಿನ ಅಗಡಿ ಮಿಲ್ ಬಳಿ ಮತ್ತೊಂದು ಬೈಕ್ ಅಪಘಾತವಾಗಿದೆ. ಪರಿಣಾಮ ಓರ್ವ ಯುವಕನಿಗೆ ಗಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿವೆ.

ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದ ಮಲ್ಲಿಕಜಾನ್ ವಾಲೀಕಾರ್ ಎಂಬುವವನೇ ಬೈಕ್‌ಅಪಘಾತದಲ್ಲಿ ಗಾಯಗೊಂಡ ಯುವಕನಾಗಿದ್ದಾನೆ. ಈತ ಅಗಡಿ ಸಮೀಪದ ಪೆಟ್ರೊಲ್ ಬಂಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಇಂದು ಕೆಲಸ ಮುಗಿಸಿ ಹೊರಟಿದ್ದಾಗ ಘಟನೆ ನಡೆದಿದೆ.

ಇನ್ನು ಗಾಯಾಳುವನ್ನು ಅಂಬುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!