ಅಗಡಿ ಸಮೀಪದ ನೆಲ್ಲಿಹರವಿ ಕ್ರಾಸ್ ಬಳಿ ಭೀಕರ ಅಪಘಾತ, ನಂದಿಕಟ್ಟಾದ ಇಬ್ಬರು ಸೇರಿ, ನಾಲ್ವರಿಗೆ ಗಂಭೀರ ಗಾಯ..!

ಮುಂಡಗೋಡ ತಾಲೂಕಿನ ಗಡಿಭಾಗ ಅಗಡಿ ಮಿಲ್ ಸಮೀಪದ ನೆಲ್ಲಿಹರವಿ ಕ್ರಾಸ್ ಬಳಿ ಭೀಕರ ಅಪಘಾತವಾಗಿದೆ. ಪರಿಣಾಮ ನಾಲ್ವರಿಗೆ ಗಂಭೀರ ಗಾಯವಾಗಿದೆ. ಬೈಕ್ ಗಳ‌ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಘಟನೆ ನಡೆದಿದೆ.

ಅಗಡಿ ಶಾಂತಿನಗರದ ಸುರೇಶ್ ಎಂಬುವ ಯುವಕ, ನಂದಿಕಟ್ಟಾ ಗ್ರಾಮದ ಮಹಮದ್ ದುಂಡಸಿ (37), ಈಸಾಕ್ ಯಲ್ಲಾಪುರ (35) ಇಬ್ಬರು ಯುವಕರಿಗೆ ಹಾಗೂ ಕಲಘಟಗಿ ತಾಲೂಕಿನ ಓರ್ವ ಯುವಕನಿಗೆ ಗಂಭೀರ ಗಾಯವಾಗಿದೆ. ನೆಲ್ಲಿಹರವಿ ಕ್ರಾಸ್ ಬಳಿ ಘಟನೆ ನಡೆದಿದ್ದು, ಸ್ಥಳೀಯರು ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ.

 

error: Content is protected !!