ಹಾವೇರಿ: ಕೊರೋನಾ ಹಿನ್ನೆಲೆಯಲ್ಲಿ ಸದ್ಯ ವಿದ್ಯಾರ್ಥಿಗಳಿಗೆ ಎಲ್ಲೆಡೆಯೂ ಆನ್ ಲೈನ್ ಕ್ಲಾಸ್ ಗಳು ಚಾಲ್ತಿಯಲ್ಲಿವೆ. ಹೀಗಾಗಿ, ಪೋಷಕರು ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ರೆ ಹಾಗೆ ಮೊಬೈಲ್ ಕೊಡುವ ಮುನ್ನ ಎಚ್ಚರಿಕೆ ವಹಿಸೋದು ತುಂಬಾ ಮುಖ್ಯ, ಯಾಕಂದ್ರೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ಇಂದು ನಡೆದಿರೋ ಈ ಘಟನೆ ನಿಜಕ್ಕೂ ಭಯಾನಕ. ಏನದು ಘಟನೆ..? ಕೊರೋನಾ ಕಾಟದಿಂದ ಶಾಲೆಗಳು ತೆರೆಯದೇ ಇರೋ ಕಾರಣ ಆ ಬಾಲಕ ಮನೆಯಲ್ಲಿ ಹಾಯಾಗಿ ಎಲ್ಲಾ ಮಕ್ಕಳೊಂದಿಗೆ ಖುಷಿಯಾಗಿದ್ದ. ರಸ್ತೆಯಲ್ಲಿ ಯಾವುದೊ ಹಳೆಯ ವಸ್ತು ಸಿಕ್ಕಿತು ಅಂತಾ ಅದರೊಂದಿಗೆ ಬಾಲಕ ಆಟವಾಡ್ತಿದ್ದ ಅಷ್ಟೇ, ಕಣ್ಬಿಡುವಷ್ಟರಲ್ಲಿ ಕೈಯಲ್ಲಿದ್ದ ಹಳೆಯ ಮೊಬೈಲ್ ಬ್ಯಾಟರಿ ಸಿಡಿದು ಆ ಬಾಲಕ ಇದೀಗ ಆಸ್ಪತ್ರೆಯಲ್ಲಿ ನರಳುವಂತೆ ಮಾಡಿದೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಅಂದಹಾಗೆ, ಆ ಬಾಲಕನ ಹೆಸರು ಕಾರ್ತಿಕ್ ಕಲಾದಗಿ ಅಂತಾ. ಈತನ ಈ ಸ್ಥಿತಿಗೆ ದಾರಿಯಲ್ಲಿ ಯಾರೊ ಬಿಸಾಡಿದ್ದ ಮೊಬೈಲ್...
Top Stories
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಪೋಷಕರೇ ಗಮನಿಸಿ..! ಮೊಬೈಲ್ ನಲ್ಲಿ ಆಟವಾಡುತ್ತಿದ್ದ ಆ ಬಾಲಕನ ಸ್ಥಿತಿ ಹೇಗಾಗಿದೆ ನೋಡಿ..!
ಆ ಪ್ರಬುದ್ಧ ನಾಯಕನಿಗೆ ಇದೇಂತಾ ಗತಿ..? ಬಿಜೆಪಿ “ಬಣ” ಗುದ್ದಾಟದಲ್ಲಿ ಎಲ್ಟಿ ಪಾಟೀಲರ ದಾರಿ ಯಾವುದಯ್ಯ..?
“ನಾನು ಬಿಜೆಪಿಗೆ ಬಂದು ತಪ್ಪು ಮಾಡಿಬಿಟ್ನಾ..?” ಇಂತಹದ್ದೊಂದು ಪ್ರಶ್ನೆ ಬಹುಶಃ ಆ ನಾಯಕನಿಗೆ ಅನ್ನಿಸಿದೆಯೆನೋ.. ಯಾಕಂದ್ರೆ, ಮುಂಡಗೋಡ ತಾಲೂಕಿನ ಒಂದು ಪ್ರಬಲ ಸಮುದಾಯದ ನಾಯಕ ಈಗ ದಾರಿ ಕಾಣದಂತಾಗಿದ್ದಾರೆ. ಒಂದುವೇಳೆ ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ಇಷ್ಟೋತ್ತಿಗಾಗಲೇ ಇಡೀ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಹುಶಃ ಕಾಂಗ್ರೆಸ್ MLA ಅಭ್ಯರ್ಥಿ ಅಂತಾ ಪತಾಕೆ ಹಾರಿಸ್ತಿದ್ದರೇನೋ…! ಅಂತವರು ಈಗ ಬಿಜೆಪಿಯಲ್ಲಿ ಎಲ್ಲೊ ಒಂದು ಕಡೆ ಸೈಡ್ ಲೈನ್ ಆಗ್ತಿದಾರಾ..? ಈ ಪ್ರಶ್ನೆ ಸದ್ಯದ ಬಲು ಚರ್ಚಿತ ವಿಷಯ. ಹೌದು, ಮುಂಡಗೋಡ ತಾಲೂಕಿನಲ್ಲಿ ಅಂತಹದ್ದೊಂದು ಚಾರ್ಮು ಇವತ್ತಿಗೂ ಉಳಿಸಿಕೊಂಡು ಬಂದಿರೋ ಆ ಮುಖಂಡ ಈಗ ಮಮ್ಮಲ ಮರುಗುತ್ತಿದ್ದಾರೆ. ಯಾಕಂದ್ರೆ, ಕಾಂಗ್ರೆಸ್ ಪಡಸಾಲೆಯಲ್ಲಿ ತಾಲೂಕಿನ ಮಟ್ಟಿಗೆ ಪ್ರಶ್ನಾತೀತ ನಾಯಕ ಅಂತಾ ಕರೆಸಿಕೊಂಡು ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡು, ಉಳಿಸಿಕೊಂಡು ಬಂದಿದ್ದ ಎಲ್.ಟಿ.ಪಾಟೀಲ್ ಈಗ ಅದ್ಯಾಕೋ ಏನೋ ಬಿಜೆಪಿ ಅಂಗಳದಲ್ಲಿ ಸಿಕ್ಕು ನಲುಗುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದೆ. ಅದೊಂದು ಕಾಲವಿತ್ತು..! ನಿಜ, ಮುಂಡಗೋಡ ತಾಲೂಕಿನ ರಾಜಕೀಯ ಪಡಸಾಲೆಯಲ್ಲಿ ಪಾಟೀಲರದ್ದೇ...
SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಣೆ..!
ಮುಂಡಗೋಡ: ಜು,19 ರಿಂದ ನಡೆಯಲಿರುವ SSLC ಪರೀಕ್ಷೆಗೆ ಹಾಜರಾಗೋ ಮಕ್ಕಳಿಗೆ ಹಾಗೂ ಸಿಬ್ಬಂದಿಗಳಿಗೆ ಎರಡು ಪದರುಗಳಿರುವ ಮಾಸ್ಕ್ ಗಳನ್ನು ಸರಕಾರಿ ನೌಕರರ ಸಂಘ ತಾಲೂಕಾ ಘಟಕದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಯಿತು. ಕೊವೀಡ-19 ಸಂಕಷ್ಟದ ನಡುವೆಯೂ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಬರೆಯುತ್ತಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಹಾಗೂ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೂ ಪ್ರಯೋಜನವಾಗಲಿ ಅಂತಾ, ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನಲ್ಲಿ ಈ ಬಾರಿ ಸುಮಾರು 1440 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ, ನೌಕರರ ಸಂಘದ ಅಧ್ಯಕ್ಷ ದಯಾನಂದ ನಾಯ್ಕ, ಕಾರ್ಯದರ್ಶಿ ಗಣೇಶ, ಖಜಾಂಚಿ ವೀಣಾ ರಾಠೋಡ, ಉಪಾಧ್ಯಕ್ಷ ವಸಂತ್ ರಾಠೋಡ,ಸುರೇಶ್ ಪುಜಾರ, ಸುಬಾಷ್ ಡೊರಿ, ಹನಮಂತ ತಳವಾರ, ನಾಗರಾಜ ನಾಯ್ಕ, ಅಶೋಕ ಗುಡಿಸಾಗರ, ಖಜಾನೆ ಅಧಿಕಾರಿ ರಝಿಯಾ ಬೇಗ, ಗದಿಗೆಪ್ಪ, ಪ್ರಶಾಂತ ಸಾವಳಗಿ ಸೇರಿ ಮುಂತಾದವರು ಭಾಗಿಯಾಗಿದ್ದರು.
ಉತ್ತರ ಕನ್ನಡ ಎಸ್ಪಿ ಶಿವಪ್ರಕಾಶ್ ದೇವರಾಜು ವರ್ಗಾವಣೆ, ವರ್ತಿಕಾ ಕಟಿಯಾರ್ ನೂತನ ಎಸ್ಪಿ..!
ಬೆಂಗಳೂರು : ರಾಜ್ಯ ಸರ್ಕಾರದಿಂದ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದೆ. ಈ ಕುರಿತಂತೆ ಸರ್ಕಾರ ಆದೇಶ ಹೊರಡಿಸಿದ್ದು, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಂತ ಶಿವ ಪ್ರಕಾಶ್ ದೇವರಾಜು ಅವರನ್ನು ಎತ್ತಂಗಡಿ ಮಾಡಿದ್ದು, ಅವರ ಜಾಗಕ್ಕೆ ವರ್ತಿಕಾ ಕಟಿಯಾರ್ ಅವರನ್ನು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕ ಮಾಡಿದೆ. ಇನ್ನು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಂತ ದಿವ್ಯಾ ಶರಾ ಥಾಮಸ್ ಅವರನ್ನು ವರ್ಗಾವಣೆ ಮಾಡಿ, ಅವರ ಜಾಗಕ್ಕೆ ನೂತನ ಎಸ್ಪಿಯಾಗಿ ಸಂಗೀತಾ ಜಿ ಅವರನ್ನು ನೇಮಿಸಿದೆ. ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಂತ ಅನುಪಮ್ ಅಗರ್ವಾಲ್ ಅವರನ್ನು ಎತ್ತಂಗಡಿ ಮಾಡಿದ್ದು, ಅವರ ಜಾಗಕ್ಕೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹೆಚ್ ಡಿ ಆನಂದ್ ಕುಮಾರ್ ಅವರನ್ನು ನೇಮಕ ಮಾಡಿದೆ.
ಕೇಳಿದ್ದು 48 ಗಂಟೆ ಟೈಮ್, ಆದ್ರೆ ಮನೆಬಾಗಿಲಿಗೇ ಬಂದಿದ್ದು 16 ಗಂಟೆಯಲ್ಲೇ..! ಇದು ಹೆಬ್ಬಾರ್ ಸ್ಟೈಲ್..!!
ಶಿರಸಿ : ಸಚಿವ ಶಿವರಾಮ್ ಹೆಬ್ಬಾರ್ ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ. ಶಿರಸಿ ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಿಗೆಹಳ್ಳ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಘಟನೆ ನಡೆದು ಕೇವಲ 16 ಗಂಟೆಯೊಳಗೆ ನೊಂದ ಕುಟುಂಬಕ್ಕೆ ಪರಿಹಾರದ ಮೊತ್ತ ತಲುಪಿಸಿದ್ದಾರೆ. 48 ಅಲ್ಲ 16 ಗಂಟೆ..! ಅಂದಹಾಗೆ, ನಿನ್ನೆ ಮಂಗಳವಾರ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಯಶೋದಾ ಬಂಗಾರಿ ಗೌಡ ಮೃತಪಟ್ಟಿದ್ರು. ಅದ್ಯಾವುದೋ ಬೇರೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದ ಸಚಿವ ಶಿವರಾಮ್ ಹೆಬ್ಬಾರ್ ಕಾರ್ಯಕ್ರಮ ಮೊಟಕುಗೊಳಿಸಿ ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ರು, ಸಾಂತ್ವನ ಹೇಳಿದ್ರು. ಮುಂದಿನ 48 ಗಂಟೆಯೊಳಗೆ ಪರಿಹಾರದ ಹಣ ಕೈಗಿಡುತ್ತೇನೆ ಅಂತಾ ಮಾತು ಕೊಟ್ಟಿದ್ರು.. ಆ ಮಾತಿನಂತೆ ಇಂದು ಖುದ್ದಾಗಿ ತೆರಳಿ ನೊಂದ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರದ ಚೆಕ್ ನೀಡಿದ್ದಾರೆ. ಇದೇ ಅಲ್ವಾ ಭರವಸೆ..? ನಿಜ, ಯಲ್ಲಾಪುರ ಕ್ಷೇತ್ರದಲ್ಲಿ ಇದೊಂದೇ ಪ್ರಕರಣವಲ್ಲ, ಬದಲಾಗಿ ಕ್ಷೇತ್ರದಲ್ಲಿ ಕಳೆದ ಬಾರಿ...
ಜುಲೈ 17 ರವರೆಗೆ ಭಾರೀ ಮಳೆ ಮುನ್ಸೂಚನೆ..! ಕರಾವಳಿಯಲ್ಲಿ ಆರೆಂಜ್ ಅಲರ್ಟ್..!!
ಬೆಂಗಳೂರು : ರಾಜ್ಯದ ಕರಾವಳಿ, ಒಳನಾಡು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕಳೆದೆರಡು ದಿನ ಗಳಿಂದಲೂ ಭಾರೀ ಮಳೆ ಸುರಿಯುತ್ತಿದ್ದು, ಕರಾವಳಿ ಭಾಗದಲ್ಲಿ ಜುಲೈ 17ರ ವರೆಗೂ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಭಾರೀ ಮಳೆ ಸುರಿಯಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಅಲ್ಲದೇ ಮಲೆನಾಡಿನ ಜಿಲ್ಲೆಗಳಾದ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಜುಲೈ 15 ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಬಾರಿ ವಾಡಿಕೆಯಂತೆ ಮಳೆಯಾಗಿಲ್ಲ. ಆದ್ರೆ ಜುಲೈ ತಿಂಗಳಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ಮಳೆ ಯ ಆರ್ಭಟ ಇನ್ನಷ್ಟು ದಿನಗಳ ವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ನಾಡದೋಣಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆಯನ್ನು ನೀಡಲಾಗಿದೆ. ಕರಾವಳಿ ಹಾಗೂ...
ಮನೆ ಗೋಡೆ ಕುಸಿದು ಮೃತಪಟ್ಟ ಮಹಿಳೆಯ ಬಡ ಕುಟುಂಬದ ಕಣ್ಣೀರು ಒರೆಸಿದ ಸಚಿವ..! ಮಾನವೀಯತೆ ಅಂದ್ರೆ ಇದೇ ಅಲ್ವಾ..?
ಶಿರಸಿ: ಮನೆ ಗೋಡೆ ಕುಸಿದು ಮೈಮೇಲೆ ಬಿದ್ದ ಪರಿಣಾಮ ವಿಶೇಷ ಚೇತನ ಮಹಿಳೆಯೊರ್ವಳು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗುಡ್ನಾಪುರದ ಮುಂಡಗೆಹಳ್ಳಿಯಲ್ಲಿ ನಡೆದಿದೆ. ಗುಡ್ನಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಗೆಹಳ್ಳಿಯ 45 ವರ್ಷ ವಯಸ್ಸಿನ ಯಶೋಧಾ ಬಂಗಾರಿ ಗೌಡ ಮೃತಪಟ್ಟ ವಿಶೇಷ ಚೇತನ ಮಹಿಳೆ. ಈಕೆ ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಳೆಯದಾಗಿದ್ದ ಗೋಡೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧಾವಿಸಿ ಬಂದ್ರು ಸಚಿವ್ರು..! ಮದಹಾಗೆ, ಬನವಾಸಿ ಭಾಗದಲ್ಲಿ ಇಂದು ಕಾರ್ಯಕ್ರಮದ ನಿಮಿತ್ತ ಹಾಜರಿದ್ದ ಸಚಿವ ಶಿವರಾಮ್ ಹೆಬ್ಬಾರ್, ಮಹಿಳೆ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಬಂದ್ರು. ಅಕ್ಷರಶಃ ಕಣ್ಣೀರಲ್ಲಿ ಮುಳುಗಿ ಹೋಗಿದ್ದ ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವನದ ಮಾತು ಹೇಳಿದ್ರು. ಕುಟುಂಬದ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ್ರು, ನಾನು ನಿಮ್ಮ ಜೊತೆಲಿದ್ದಿನಿ ಭಯ ಪಡಬೇಡಿ ಅಂತಾ ದೈರ್ಯ ತುಂಬಿದ್ರು. ಜಸ್ಟ್ 48 ಗಂಟೆ...
ಹೀಗೆ ಹುಲಿರಾಯ ಹೆಜ್ಜೆ ಹಾಕಿದ್ದು ಬೆಡಸಗಾಂವ್ ಅರಣ್ಯದಲ್ಲಾ..?
ಮುಂಡಗೋಡ: ತಾಲೂಕಿನ ಬೆಡಸಗಾಂವ ಅರಣ್ಯ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷವಾಗಿದೆ ಅಂತಾ ಹೇಳಲಾದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಡಲ್ಲಿ ನಿರ್ಭಿಡೆಯಿಂದ ಓಡಾಡುತ್ತಿರೋ ಹುಲಿರಾಯ ಘರ್ಜನೆ ಮೊಳಗಿಸಿದ್ದಾನೆ. ಆದ್ರೆ ಈ ವಿಡಿಯೋ ಮುಂಡಗೋಡ ತಾಲೂಕಿ ಬೆಡಸಗಾಂವ್ ಅರಣ್ಯ ಪ್ರದೇಶದಲ್ಲಿಯದೋ ಅಥವಾ ಬೇರೆ ಕಡೆಯದ್ದೋ ಸ್ಪಷ್ಟವಾಗಿಲ್ಲ. ಅದ್ರೆ ಸಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಮಾತ್ರ ಹರಿದಾಡುತ್ತಿದೆ.
ಆ ಹುಬ್ಬಳ್ಳಿ ಹುಡುಗನ ಮರ್ಡರ್ ಹಿಂದೆ ಇದ್ದಿದ್ದು “ಗಾಜಿನ ಪುರಾಣ”
ಹುಬ್ಬಳ್ಳಿ: ಆ ಯುವಕ ತನ್ನ ಮುಂದಿನ ಬದುಕಿನ ಬಗ್ಗೆ ಸಾವಿರಾರು ಕನಸು ಕಂಡವನು. ಪ್ರತಿಷ್ಠಿತ ಮನೆತನದಲ್ಲಿ ಹುಟ್ಟಿದ್ದ ಆ ಯುವಕ ಗೆಳೆಯರ ಜೊತೆ ಎಂಜಾಯ್ ಮಾಡುತ್ತಾ ಮನೆಯ ಮುದ್ದು ಮಗನಾಗಿದ್ದವನು. ಆದ್ರೆ ಆ ಯುವಕನ ಮೇಲೆ ಅದಾಗಲೇ ಒಂದು ಗ್ಯಾಂಗ್ ನ ಕಣ್ಣು ಬಿದ್ದಿತ್ತು. ನಿನ್ನೆ ಯುವಕನ ಜೊತೆ ಸಣ್ಣದಾಗಿ ಜಗಳ ಮಾಡಿದ್ದ ಆ ಗ್ಯಾಂಗ್ ಸದ್ದಿಲ್ಲದೆ ಯುವಕನ ಪ್ರಾಣ ತಿಂದು ಹಾಕಿದೆ. ಸ್ಮಾರ್ಟ್ ಹುಡುಗ ಕಣ್ರಿ..! ಆಸ್ಪತ್ರೆಯ ಎದುರು ನಿಂತಿರೋ ನೂರಾರು ಜನರು..ಶವಾಗರದ ಬಳಿ ಬಂದು ಗೆಳೆಯನನ್ನ ಕೊನೆಯದಾಗಿ ನೋಡಬೇಕು ಅಂತ ಕಾಯುತ್ತಿರುವ ಸ್ನೇಹಿತರು. ಹೌದು ಹುಬ್ಬಳ್ಳಿಯ ಕಿಮ್ಸ್ ನ ಶವಾಗಾರದ ಬಳಿ ಇವರೆಲ್ಲ ಹೀಗೆ ಜಮಾಯಿಸೋಕೆ ಕಾರಣವೇ ಹೀಗೆ ಫೋಟೋದಲ್ಲಿ ಸ್ಮಾರ್ಟ್ ಆಗಿ ಡಿಫರೆಂಟ್ ಡಿಫರೆಂಟ್ ಪೋಸ್ ಕೊಟ್ಟಿರುವ ಹುಬ್ಬಳ್ಳಿಯ ಅಮರ ಕಾಲೋನಿ ನಿವಾಸಿ ಅಭಿಷೇಕ ರುದ್ರಗೌಡ ಪಾಟೀಲನ ಶವ ಕೊನೆಯದಾಗಿ ನೋಡೋಕೆ.. ಹೇಗಾಯ್ತು ಮರ್ಡರ್..? ನಿನ್ನೆ ಸಂಜೆ ಮನೆಯಲ್ಲಿದ್ದ ಅಭಿಷೇಕನ್ನ ಮೂವರು ಹಂತಕರು ಹೊರಗೆ ಕರೆದಿದ್ದಾರೆ. ಹೊರ...
ಪವಾಡ ಮಾಡಿ ವಂಚಿಸುತ್ತಿದ್ದ ಡೋಂಗಿ ಬಾಬಾಗೆ ಹೇಗೇಲ್ಲ ಥಳಿಸಿದ್ರು ಗೊತ್ತಾ..?
ಗದಗ: ಆತ ಪವಾಡ ಪುರುಷನಂತೆ. ಸುಡುವ ಎಣ್ಣೆಯಲ್ಲಿ ಕೈ ಇಟ್ಟರೂ ಆತನ ಕೈ ಸುಡುತ್ತಿರಲಿಲ್ಲ, ಕೊತಕೊತ ಕುದಿಯುವ ಬಿಸಿ ತುಪ್ಪವನ್ನ ಬರಿಗೈಲಿ ಹಿಡಿದು ಎಲ್ಲರ ಹುಬ್ಬೇರಿಸುತ್ತಿದ್ದನಂತೆ. ಇವುಗಳ ಮೂಲಕ ಜನರಿಂದ ಸಾವಿರ ಸಾವಿರ ರೂ. ಹಣ ವಸೂಲಿ ಮಾಡ್ತಿದ್ದನಂತೆ. ಸಾಲದು ಅಂತ ಹಿಂದೂ ದೇವರುಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನಂತೆ. ಅದೇನೋ ಗೊತ್ತಿಲ್ಲ ಇವತ್ತು ಇವನ ಗ್ರಹಚಾರ ನೆಟ್ಟಗಿರಲಿಲ್ಲ. ಹೊಡಿ ಮಗಾ, ಹೊಡಿ ಮಗಾ..! ಕಪಾಳಕ್ಕೆ ಹೊಡೆಯುವನು ಒಬ್ಬ, ಇನ್ನೊಬ್ಬ ಎಳೆದು ಒದಿತಿದ್ದ. ಮತ್ತೋರ್ವಳು ಹಾದಿಯೊಳಗೆ ಪಟ ಪಟ ಅಂತ ಮುಖಕ್ಕೆ ಭಾರಿಸುತ್ತಿದ್ದಳು. ಅಯ್ಯೋ ಕೈ ಮುಗಿತಿನಿ ಬಿಟ್ಟು ಬಿಡಿ ಕೈ ಮುಗಿತಿನಿ ಅಂತ ಒದೆತಿನ್ನುತ್ತಿದ್ದ ಬಾಬಾ ಹೇಳ್ತಿದ್ದ. ಘಟನೆ ಎಲ್ಲಿ..? ಅಂದಹಾಗೆ ಇವೆಲ್ಲ ದೃಶ್ಯ ಕಂಡು ಬಂದಿದ್ದು ಗದಗನಲ್ಲಿ.. ಹೌದು. ಪವಾಡಗಳ ಹೆಸರಲ್ಲಿ ವಂಚನೆ ಮಾಡುತ್ತಿದ್ದ ನಕಲಿ ಬಾಬಾ ಒಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಗದಗ ನಗರದ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ಘಟನೆ ನಡೆದಿದ್ದು ಡೋಂಗಿ ಬಾಬಾ ಆಸೀಫ್ ಜಾಗಿರದಾರ್...