ಶಿರಸಿ : ಸಚಿವ ಶಿವರಾಮ್ ಹೆಬ್ಬಾರ್ ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ. ಶಿರಸಿ ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಿಗೆಹಳ್ಳ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಘಟನೆ ನಡೆದು ಕೇವಲ 16 ಗಂಟೆಯೊಳಗೆ ನೊಂದ ಕುಟುಂಬಕ್ಕೆ ಪರಿಹಾರದ ಮೊತ್ತ ತಲುಪಿಸಿದ್ದಾರೆ.
48 ಅಲ್ಲ 16 ಗಂಟೆ..!
ಅಂದಹಾಗೆ, ನಿನ್ನೆ ಮಂಗಳವಾರ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಯಶೋದಾ ಬಂಗಾರಿ ಗೌಡ ಮೃತಪಟ್ಟಿದ್ರು. ಅದ್ಯಾವುದೋ ಬೇರೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದ ಸಚಿವ ಶಿವರಾಮ್ ಹೆಬ್ಬಾರ್ ಕಾರ್ಯಕ್ರಮ ಮೊಟಕುಗೊಳಿಸಿ ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ರು, ಸಾಂತ್ವನ ಹೇಳಿದ್ರು. ಮುಂದಿನ 48 ಗಂಟೆಯೊಳಗೆ ಪರಿಹಾರದ ಹಣ ಕೈಗಿಡುತ್ತೇನೆ ಅಂತಾ ಮಾತು ಕೊಟ್ಟಿದ್ರು.. ಆ ಮಾತಿನಂತೆ ಇಂದು ಖುದ್ದಾಗಿ ತೆರಳಿ ನೊಂದ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರದ ಚೆಕ್ ನೀಡಿದ್ದಾರೆ.
ಇದೇ ಅಲ್ವಾ ಭರವಸೆ..?
ನಿಜ, ಯಲ್ಲಾಪುರ ಕ್ಷೇತ್ರದಲ್ಲಿ ಇದೊಂದೇ ಪ್ರಕರಣವಲ್ಲ, ಬದಲಾಗಿ ಕ್ಷೇತ್ರದಲ್ಲಿ ಕಳೆದ ಬಾರಿ ಸಿಡಿಲಿಗೆ ಬಲಿಯಾಗಿ ನೊಂದಿದ್ದ ಕುಟುಂಬಗಳಿಗೂ ತಕ್ಷಣವೇ ಸ್ಪಂಧಿಸಿದ್ದ ಸಚಿವರ ಕಾರ್ಯಕ್ಕೆ ಕ್ಷೇತ್ರಾಧ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು. ಕ್ಷೇತ್ರದ ಯಾವುದೇ ಮೂಲೆಯಲ್ಲಿ ಇಂತಹ ದುರ್ಘಟನೆ ನಡೆದಾಗ ಅಲ್ಲಿ ಜಾತಿ, ಮತ, ಪಕ್ಷಗಳ ಬೇಧ ಮರೆತು ತಕ್ಷಣವೇ ಹಾಜರಾಗುವ ಸಚಿವರು ಸ್ಪಂಧಿಸುತ್ತಾರೆ. ಅಧಿಕಾರಿಗಳ ಪಡೆಗೆ ತಕ್ಷಣವೇ ಎಚ್ಚರಪಡಿಸುತ್ತಾರೆ. ಪರಿಹಾರಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿಸಿಕೊಡುತ್ತಾರೆ. ಹೀಗಾಗಿ, ಒಂದರ್ಥದಲ್ಲಿ “ನಮ್ಮವರೇ” ಅನ್ನುವಂತಾಗಿದ್ದಾರೆ ಅಂತಾ ಜನ ಹೇಳ್ತಿದಾರೆ.
ಅಧಿಕಾರಿಗಳೂ ಅಲರ್ಟ್..!
ಅಂದಹಾಗೆ, ಕೊರೋನಾ ಸಂದರ್ಭದಲ್ಲೇ ಆಗಿರಲಿ, ಪ್ರವಾಹದ ಸಂದರ್ಭದಲ್ಲೇ ಆಗಿರಲಿ, ಪ್ರಕೃತಿ ವಿಕೋಪದ ಸಂದರ್ಭಗಳಲ್ಲೇ ಆಗಿರಲಿ ಸಚಿವ ಹೆಬ್ಬಾರ್ ಫುಲ್ ಅಲರ್ಟ್ ಆಗಿರ್ತಾರೆ. ಹೀಗಾಗಿ, ಕ್ಷೇತ್ರದ ಬಹುತೇಕ ಅಧಿಕಾರಿಗಳೂ ಕೂಡ ಹೆಬ್ಬಾರ್ ಗರಡಿಯಲ್ಲಿ ಮೈ ಚಳಿ ಬಿಟ್ಟು ಕೆಲಸ ಮಾಡ್ತಿದ್ದಾರಂತೆ. “ನಾಳೆ ಬಾ” ಅನ್ನೋ ಬೋರ್ಡ್ ಈಗ ಸರ್ಕಾರಿ ಕಚೇರಿಗಳಿಂದ ತೆರವುಗೊಳಿಸಲಾಗಿದೆ ಅಂತಾ ಸಾರ್ವಜನಿಕರು ಒಂದಿಷ್ಟು ನೆಮ್ಮದಿ ಪಡುವಂತಾಗಿದೆ.