ಶಿರಸಿ: ಮನೆ ಗೋಡೆ ಕುಸಿದು ಮೈಮೇಲೆ ಬಿದ್ದ ಪರಿಣಾಮ ವಿಶೇಷ ಚೇತನ ಮಹಿಳೆಯೊರ್ವಳು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗುಡ್ನಾಪುರದ ಮುಂಡಗೆಹಳ್ಳಿಯಲ್ಲಿ ನಡೆದಿದೆ.
ಗುಡ್ನಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಗೆಹಳ್ಳಿಯ 45 ವರ್ಷ ವಯಸ್ಸಿನ ಯಶೋಧಾ ಬಂಗಾರಿ ಗೌಡ ಮೃತಪಟ್ಟ ವಿಶೇಷ ಚೇತನ ಮಹಿಳೆ. ಈಕೆ ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಳೆಯದಾಗಿದ್ದ ಗೋಡೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾವಿಸಿ ಬಂದ್ರು ಸಚಿವ್ರು..!
ಮದಹಾಗೆ, ಬನವಾಸಿ ಭಾಗದಲ್ಲಿ ಇಂದು ಕಾರ್ಯಕ್ರಮದ ನಿಮಿತ್ತ ಹಾಜರಿದ್ದ ಸಚಿವ ಶಿವರಾಮ್ ಹೆಬ್ಬಾರ್, ಮಹಿಳೆ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಬಂದ್ರು. ಅಕ್ಷರಶಃ ಕಣ್ಣೀರಲ್ಲಿ ಮುಳುಗಿ ಹೋಗಿದ್ದ ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವನದ ಮಾತು ಹೇಳಿದ್ರು. ಕುಟುಂಬದ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ್ರು, ನಾನು ನಿಮ್ಮ ಜೊತೆಲಿದ್ದಿನಿ ಭಯ ಪಡಬೇಡಿ ಅಂತಾ ದೈರ್ಯ ತುಂಬಿದ್ರು.
ಜಸ್ಟ್ 48 ಗಂಟೆ ಸಮಯ ಕೊಡಿ..!
ಮನೆಯ ಯಜಮಾನಿಯನ್ನು ಕಳೆದುಕೊಂಡು ಕಣ್ಣೀರಾಗಿದ್ದ ಇಡೀ ಕುಟುಂಬಕ್ಕೆ ಸಾಂತ್ವನದ ಜೊತೆ ಪರಿಹಾರದ ಭರವಸೆ ನೀಡಿದ ಸಚಿವ್ರು, ಮುಂದಿನ 48 ಗಂಟೆಗಳಲ್ಲಿ ಸರ್ಕಾರದಿಂದ 7 ಲಕ್ಷ ಪರಿಹಾರ ಒದಗಿಸುವ ಭರವಸೆ ನೀಡಿದ್ರು.
ಇನ್ನು ಕುಟುಂಬದ ಹಿರಿಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಶಿವರಾಮ ಹೆಬ್ಬಾರ್, ಘಟನೆಗೆ ತೀರಾ ವಿಷಾದ ವ್ಯಕ್ತಪಡಿಸಿದ್ರು. ಅಮಾಯಕ ಹೆಣ್ಣು ಮಗಳು ಬಲಿಯಾಗಿದ್ದಾಳೆ. ಎರಡು ದಿನದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಗೋಡೆ ಬಿದ್ದಿದ್ದು, ಅವರಿಗೆ ನೂತನ ಮನೆ ಕಟ್ಟಿಸಿಕೊಡುತ್ತೇನೆ ಅಂದ್ರು.