ಮುಂಡಗೋಡ: ಜು,19 ರಿಂದ ನಡೆಯಲಿರುವ SSLC ಪರೀಕ್ಷೆಗೆ ಹಾಜರಾಗೋ ಮಕ್ಕಳಿಗೆ ಹಾಗೂ ಸಿಬ್ಬಂದಿಗಳಿಗೆ ಎರಡು ಪದರುಗಳಿರುವ ಮಾಸ್ಕ್ ಗಳನ್ನು ಸರಕಾರಿ ನೌಕರರ ಸಂಘ ತಾಲೂಕಾ ಘಟಕದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಯಿತು.
ಕೊವೀಡ-19 ಸಂಕಷ್ಟದ ನಡುವೆಯೂ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಬರೆಯುತ್ತಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಹಾಗೂ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೂ ಪ್ರಯೋಜನವಾಗಲಿ ಅಂತಾ, ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನಲ್ಲಿ ಈ ಬಾರಿ ಸುಮಾರು 1440 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ, ನೌಕರರ ಸಂಘದ ಅಧ್ಯಕ್ಷ ದಯಾನಂದ ನಾಯ್ಕ, ಕಾರ್ಯದರ್ಶಿ ಗಣೇಶ, ಖಜಾಂಚಿ ವೀಣಾ ರಾಠೋಡ, ಉಪಾಧ್ಯಕ್ಷ ವಸಂತ್ ರಾಠೋಡ,ಸುರೇಶ್ ಪುಜಾರ, ಸುಬಾಷ್ ಡೊರಿ, ಹನಮಂತ ತಳವಾರ, ನಾಗರಾಜ ನಾಯ್ಕ, ಅಶೋಕ ಗುಡಿಸಾಗರ, ಖಜಾನೆ ಅಧಿಕಾರಿ ರಝಿಯಾ ಬೇಗ, ಗದಿಗೆಪ್ಪ, ಪ್ರಶಾಂತ ಸಾವಳಗಿ ಸೇರಿ ಮುಂತಾದವರು ಭಾಗಿಯಾಗಿದ್ದರು.