Home mundgod news

Tag: mundgod news

Post
ಮಾಜಿ ಜಿಪಂ ಸದಸ್ಯ ಎಲ್.ಟಿ.ಪಾಟೀಲ್ ಹುಟ್ಟು ಹಬ್ಬ, ಅಂಧ ಮಕ್ಕಳ ಜೊತೆ ಹುಟ್ಟಿದ ದಿನದ ಸಂಭ್ರಮ..!

ಮಾಜಿ ಜಿಪಂ ಸದಸ್ಯ ಎಲ್.ಟಿ.ಪಾಟೀಲ್ ಹುಟ್ಟು ಹಬ್ಬ, ಅಂಧ ಮಕ್ಕಳ ಜೊತೆ ಹುಟ್ಟಿದ ದಿನದ ಸಂಭ್ರಮ..!

ಮುಂಡಗೋಡ: ಮಾಜಿ ಜಿ.ಪಂ.ಸದಸ್ಯ ಎಲ್‌.ಟಿ. ಪಾಟೀಲ ಅವರ 65ನೇ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದಿಂದ ಪಟ್ಟಣದ ದೇಶಪಾಂಡೆ ನಗರದರಲ್ಲಿರುವ ಜ್ಞಾನ ಪ್ರಜ್ಞಾ ಅಂದ ಮಕ್ಕಳ ಶಾಲೆಯಲ್ಲಿ ಹುಟ್ಟು ಹಬ್ಬವನ್ನು ಶನಿವಾರ ಆಚರಿಸಲಾಯಿತು. ಈ ವೇಳೆ ಎಲ್‌.ಟಿ.ಪಾಟೀಲ ಮಾತನಾಡಿ, 84 ಲಕ್ಷ ಜೀವ ರಾಶಿಯನ್ನು ದಾಟಿ ಮಾನವನಾಗಿ ಜನಿಸುತ್ತೇವೆ. ಹುಟ್ಟು ಮತ್ತು ಸಾವಿನ ಮಧ್ಯೆ ನಾವೇನು ಸಾಧಿಸುತ್ತೇವೆ’ ಎಂಬುವುದು ಮುಖ್ಯವಾಗಿದೆ. ದೇವರು ನಿಮ್ಮೆಲ್ಲರ ಬಾಳಿನಲ್ಲಿ ಪ್ರಜ್ವಲ ಶಕ್ತಿ ನೀಡಲಿ ಎಂದು ಅಂದ ಮಕ್ಕಳಿಗೆ ಹಾರೈಸಿ, ಅಂದ...

Post
ಮುಂಡಗೋಡಿನಲ್ಲೊಂದು ಅಮಾನುಷ ಘಟನೆ..! ಹಸುಗೂಸನ್ನು ರಸ್ತೆಯಲ್ಲಿ ಎಸೆದು ಹೋದ್ಲಾ ಮಾಹಾತಾಯಿ?

ಮುಂಡಗೋಡಿನಲ್ಲೊಂದು ಅಮಾನುಷ ಘಟನೆ..! ಹಸುಗೂಸನ್ನು ರಸ್ತೆಯಲ್ಲಿ ಎಸೆದು ಹೋದ್ಲಾ ಮಾಹಾತಾಯಿ?

 ಮುಂಡಗೋಡ ಪಟ್ಟಣದ ಹೊರವಲಯದ ನೂರಾನಿ ಗಲ್ಲಿಯ ಹತ್ತಿರ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಯಾರೋ ಆಗಷ್ಟೇ ಹೆರಿಗೆ ಮಾಡಿಸಿ, ಅಥವಾ ಗರ್ಭಪಾತ ಮಾಡಿಸಿ ಬಾಕ್ಸ್ ನಲ್ಲಿ ಶಿಶುವನ್ನು ಎಸೆದು ಹೋಗಿದ್ದಾರೆ. ರಕ್ತಸಿಕ್ತವಾಗಿದ್ದ ಶಿಶುವನ್ನು ನಾಯಿಗಳು ಎಳೆದಾಡಿ ಕಚ್ಚಿ ಹಾಕಿವೆ. ಹೀಗಾಗಿ, ಶಿಶು ಮರಣಹೊ‌ಂದಿದ್ದು ರಸ್ತೆಯಲ್ಲಿ ಅನಾಥವಾಗಿ ಬಿದ್ದಿದೆ. ಅಬಾರ್ಷನ್ ಮಾಡಿದ್ರಾ..? ಅಸಲು, ರಸ್ತೆಯ ಮೇಲೆ ರಕ್ತಸಿಕ್ತವಾಗಿ ಬಿದ್ದಿದ್ದ ಶಿಶುವನ್ನು ನೋಡಿದ್ರೆ, ಅಬಾರ್ಷನ್ ಮಾಡಿಸಿರಬಹುದಾ ಅನ್ನೋ ಅನುಮಾನವಿದೆ. ಅಲ್ಲದೆ, ಅನೈತಿಕತೆಗೆ ಹುಟ್ಟಿದ ಬೇಡವಾದ ಕಂದಮ್ಮನನ್ನು ಹೀಗೆ ಅಮಾನುಷವಾಗಿ...

Post
ಕೊಪ್ಪದಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳ ಪ್ರತಿಭಟನೆ, ಬಸ್ ತಂಗುದಾಣಕ್ಕಾಗಿ ರಸ್ತೆ ತಡೆ..!

ಕೊಪ್ಪದಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳ ಪ್ರತಿಭಟನೆ, ಬಸ್ ತಂಗುದಾಣಕ್ಕಾಗಿ ರಸ್ತೆ ತಡೆ..!

 ಮುಂಡಗೋಡ ತಾಲೂಕಿನ ಕೊಪ್ಪ (ಇಂದೂರು) ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆದಿದೆ. ಗ್ರಾಮಕ್ಕೆ ಬಸ್ ತಂಗುದಾಣ ನಿರ್ಮಿಸಿ ಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಬಸ್ ತಡೆದಿದ್ದಾರೆ. ಅಂದಹಾಗೆ, ಇಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಪ್ಪ ಗ್ರಾಮಸ್ಥರು, ವಿದ್ಯಾರ್ಥಿಗಳು ಗ್ರಾಮಕ್ಕೆ ಒಂದು ಬಸ್ ತಂಗುದಾಣದ ಕನಸು ಹೊತ್ತಿದ್ದಾರೆ. ಇದುವರೆಗೂ ಗ್ರಾಮಕ್ಕೆ ಒಂದು ಬಸ್ ತಂಗುದಾಣ ನಿರ್ಮಿಸಿಕೊಟ್ಟಿಲ್ಲ ಇಲ್ಲಿನ ಅಧಿಕಾರಿಗಳು. ದುರಂತ ಅಂದ್ರೆ ಜನಪ್ರತಿನಿಧಿಗಳಿಗೂ ಈ...

Post
ಸಿಂಗನಳ್ಳಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ್ನಾ SSLC ವಿದ್ಯಾರ್ಥಿ..?

ಸಿಂಗನಳ್ಳಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ್ನಾ SSLC ವಿದ್ಯಾರ್ಥಿ..?

ಮುಂಡಗೋಡ; ತಾಲೂಕಿನ ಸಿಂಗನಳ್ಳಿಯಲ್ಲಿ SSLC ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದಾನೆ ಅನ್ನೊ ಮಾಹಿತಿ ಲಭ್ಯವಾಗಿದೆ. ತಮ್ಮದೇ ಗದ್ದೆಯಲ್ಲಿನ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ದುರಂತ ಅಂತ್ಯ ಕಂಡಿದ್ದಾನೆ ಅಂತಾ ಹೇಳಲಾಗಿದೆ. ಹೀಗಾಗಿ, ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ. ಸಿಂಗನಳ್ಳಿ ಗ್ರಾಮದ ಸುಪ್ರೀತ್ ಫಕ್ಕಿರಪ್ಪ ತಲ್ಲಳ್ಳಿ(16) ಎಂಬುವ ವಿದ್ಯಾರ್ಥಿಯೇ ನೇಣಿಗೆ ಶರಣಾಗಿದ್ದಾನೆ. ಈತ ನಿನ್ನೆ ರಾತ್ರಿಯೋ ಅಥವಾ ಇಂದು ಬೆಳಗಿನ ಜಾವದಲ್ಲೋ, ತಮ್ಮದೇ ಜಮೀನಿನಲ್ಲಿ ಇರುವ ಮಾವಿನ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ....

Post
ಮಳಗಿ ಟ್ರಾಕ್ಟರ್ ಪಲ್ಟಿ, ಕಾಲೇಜಿನ ಅತಿಥಿ ಉಪನ್ಯಾಸಕನ ಮೇಲೆ ಕೇಸು, ಹಾಗಿದ್ರೆ ಯಾರು ಈತ ಗೊತ್ತಾ..?

ಮಳಗಿ ಟ್ರಾಕ್ಟರ್ ಪಲ್ಟಿ, ಕಾಲೇಜಿನ ಅತಿಥಿ ಉಪನ್ಯಾಸಕನ ಮೇಲೆ ಕೇಸು, ಹಾಗಿದ್ರೆ ಯಾರು ಈತ ಗೊತ್ತಾ..?

ಮುಂಡಗೋಡ: ತಾಲೂಕಿನ ಮಳಗಿಯಲ್ಲಿ ಟ್ರಾಕ್ಟರ್ ಪಲ್ಟಿಯಾದ ಘಟನೆಗೆ ಸಂಬಂಧಿಸಿದಂತೆ ಟ್ರಾಕ್ಟರ್ ಚಾಲಕನ ಮೇಲೆ ಕೇಸು ದಾಖಲಾಗಿದೆ. ಮಳಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕನ ಮೇಲೆ ಕೇಸು ಜಡಿಯಲಾಗಿದೆ. ಮಹೇಂದ್ರ ಫಕ್ಕೀರಪ್ಪ ಬನವಾಸಿ ಎಂಬುವ ಶಿಕ್ಷಕನೇ ಈ ಘಟ‌ನೆಯ ಪ್ರಮುಖ ಆರೋಪಿಯಾಗಿದ್ದಾ‌ನೆ. ಅಂದಹಾಗೆ, ನಿನ್ನೆ ಮಳಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಪಿಕ್ನಿಕ್ ಗೆ ಅಂತಾ ಹೊರಟಿದ್ದ ವಿದ್ಯಾರ್ಥಿಗಳು ಅಪಘಾತಕ್ಕೀಡಾಗಿ ಆಸ್ಪತ್ರೆ ಪಾಲಾಗಿದ್ರು‌. ಅದ್ರಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಕಾವ್ಯ ಬರಮಪ್ಪ ಬ್ಯಾಡಗಿ(17) ಚಿಕಿತ್ಸೆ ಫಲಿಸದೇ...

Post
ಮಳಗಿ ಟ್ರಾಕ್ಟರ್ ಪಲ್ಟಿ, ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು, ಅಷ್ಟಕ್ಕೂ ಈ ಸಾವಿಗೆ ಯಾರು ಹೊಣೆ..? ಪ್ರಿನ್ಸಿಪಾಲಾ..? ಅಥವಾ ಅತಿಥಿ ಶಿಕ್ಷಕನಾ..?

ಮಳಗಿ ಟ್ರಾಕ್ಟರ್ ಪಲ್ಟಿ, ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು, ಅಷ್ಟಕ್ಕೂ ಈ ಸಾವಿಗೆ ಯಾರು ಹೊಣೆ..? ಪ್ರಿನ್ಸಿಪಾಲಾ..? ಅಥವಾ ಅತಿಥಿ ಶಿಕ್ಷಕನಾ..?

ಮುಂಡಗೋಡ ತಾಲೂಕಿನ ಮಳಗಿಯಲ್ಲಿ ವಿದ್ಯಾರ್ಥಿಗಳನ್ನು ಪಿಕ್ ನಿಕ್ ಗೆ ಕರೆದೊಯ್ಯುತ್ತಿದ್ದ ಟ್ರಾಕ್ಟರ್ ಪಲ್ಟಿಯಾದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಶಿರಸಿ TSS ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಅನ್ನೊ ಮಾಹಿತಿ ಲಭ್ಯವಾಗಿದೆ. ಮಳಗಿ ಸಮೀಪದ ಕಲ್ಲಹಕ್ಕಲ ಗ್ರಾಮದ ಕಾವ್ಯ ಬರಮಪ್ಪ ಬ್ಯಾಡಗಿ(17) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಟ್ರಾಕ್ಟರ್ ಪಲ್ಟಿಯಾದ ಹಿನ್ನೆಲೆಯಲ್ಲಿ ಕಾವ್ಯಾಗೆ ಗಂಭೀರ ಗಾಯವಾಗಿತ್ತು. ಹೀಗಾಗಿ, ಶಿರಸಿಯ TSS ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕಾವ್ಯಾ ಮೃತಪಟ್ಟಿದ್ದಾಳೆ ಅಂತಾ ಮಾಹಿತಿ ಲಭ್ಯವಾಗಿದೆ. ಇನ್ನು ಮೃತ ವಿದ್ಯಾರ್ಥಿನಿಯ...

Post
ಮಳಗಿಯಲ್ಲಿ ಪಿಕ್ ನಿಕ್ ಗೆ ಹೊರಟಿದ್ದ ಟ್ರಾಕ್ಟರ್ ಪಲ್ಟಿ, 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗಾಯ..!

ಮಳಗಿಯಲ್ಲಿ ಪಿಕ್ ನಿಕ್ ಗೆ ಹೊರಟಿದ್ದ ಟ್ರಾಕ್ಟರ್ ಪಲ್ಟಿ, 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗಾಯ..!

 ಮುಂಡಗೋಡ ತಾಲೂಕಿನ ಮಳಗಿಯಲ್ಲಿ ವಿದ್ಯಾರ್ಥಿಗಳನ್ನು ಪಿಕ್ ನಿಕ್ ಗೆ ಕರೆದೊಯ್ಯುತ್ತಿದ್ದ ಟ್ರಾಕ್ಟರ್ ಪಲ್ಟಿಯಾಗಿದೆ‌. ಪರಿಣಾಮ ಟ್ರಾಕ್ಟರಿನಲ್ಲಿದ್ದ ಸುಮಾರು 40-45 ವಿದ್ಯಾರ್ಥಿನಿಯರಿಗೆ ಗಾಯವಾಗಿದೆ. ಅದ್ರಲ್ಲಿ, ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಪಿಕ್ ನಿಕ್ ಗೆ ಹೊರಟಿದ್ದರು..! ಇಂದು ಮಳಗಿಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಟ್ರಾಕ್ಟರ್ ಮೂಲಕ ಪಿಕ್ ನಿಕ್ ಗೆ ಅಂತಾ ಮಳಗಿಯಿಂದ ಕೊಳಗಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪಿಕ್ ನಿಕ್ ಮುಗಿಸಿಕೊಂಡು ವಾಪಸ್ ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾಗಿದೆ ಎನ್ನಲಾಗಿದೆ....

Post
ಮುಂಡಗೋಡ ಹೊರವಲಯದಲ್ಲಿ ಭೀಕರ ಅಪಘಾತ, ಸ್ಕಾರ್ಪಿಯೋ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮುಂಡಗೋಡ ಹೊರವಲಯದಲ್ಲಿ ಭೀಕರ ಅಪಘಾತ, ಸ್ಕಾರ್ಪಿಯೋ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮುಂಡಗೋಡ: ಹೊರವಲಯದ ಶಿರಸಿ ರಸ್ತೆಯಲ್ಲಿ ಭೀಕರ ಅಪಘಾತವಾಗಿದೆ. ಓವರ್ ಟೇಕ್ ಮಾಡಲು ಹೋದ ಸ್ಕಾರ್ಪಿಯೊ ಬೈಕ್ ಗೆ ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಶಿರಸಿ ರಸ್ತೆಯ ದೇಶಪಾಂಡೆ ರೂಡಿಸೇಟಿ ಕಚೇರಿ ಬಳಿ ಘಟನೆ ನಡೆದಿದೆ. ಶಿರಸಿ ಕಡೆಯಿಂದ ಮುಂಡಗೋಡು ಕಡೆಗೆ ಬರುತ್ತಿದ್ದ ಬೈಕ್ ಗೆ, ಅದೇ ಮಾರ್ಗವಾಗಿ ಹೊರಟಿದ್ದ ಸ್ಕಾರ್ಪಿಯೊ ಕಾರು ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ‌. ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ. ಆದ್ರೆ, ಬೈಕ್ ಮಾಲೀಕ ಧಾರವಾಡ ಜಿಲ್ಲೆಯ...

Post
ಬಾಚಣಕಿ ಡ್ಯಾಂ ನಲ್ಲಿ ಭಾರೀ ದುರಂತ, ನೀರಲ್ಲಿ ಮುಳುಗಿ ಇಬ್ಬರು ಲಾಮಾಗಳ ದಾರುಣ ಸಾವು..!

ಬಾಚಣಕಿ ಡ್ಯಾಂ ನಲ್ಲಿ ಭಾರೀ ದುರಂತ, ನೀರಲ್ಲಿ ಮುಳುಗಿ ಇಬ್ಬರು ಲಾಮಾಗಳ ದಾರುಣ ಸಾವು..!

ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ಭಾರೀ ದುರಂತ ಸಂಭವಿಸಿದೆ. ಈಸಲು ತೆರಳಿದ್ದ ಇಬ್ಬರು ಟಿಬೇಟಿಯನ್ ಬೌದ್ದ ಸನ್ಯಾಸಿಗಳು ನೀರು ಪಾಲಾಗಿದ್ದಾರೆ. ಇಬ್ಬರೂ ಬಾಚಣಕಿ ಜಲಾಶಯದಲ್ಲಿ ಮುಳುಗಿ ಸಾವು ಕಂಡಿದ್ದಾರೆ‌. ಬೆಳಿಗ್ಗೆಯಿಂದಲೇ ಬಾಚಣಕಿ ಜಲಾಶಯಕ್ಕೆ ಈಸಲು ಬಂದಿದ್ದ ಬೌದ್ದ ಸನ್ಯಾಸಿಗಳು ಜಲಾಶಯದಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಈ ವೇಳೆ ಟಿಬೇಟಿಯನ್ ಲಾಮಾಗಳು ಶವಗಳನ್ನು ಪೊಲೀಸರಿಗೆ ಗೊತ್ತಾಗದಂತೆ ಎಸ್ಕೇಪ್ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಆದ್ರೆ ಸ್ಥಳೀಯರು ಗಮನಿಸಿ ಮುಂಡಗೋಡ ಪೋಲಿಸರ ಗಮನಕ್ಕೆ ತಂದಿದ್ದಾರೆ. ಹೀಗಾಗಿ, ಸದ್ಯ ಒಂದು ಶವ ಬಾಚಣಕಿ...

Post
ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ರಾಮನಗರಕ್ಕೆ ವರ್ಗ, ಯಲ್ಲಾಲಿಂಗ ಮುಂಡಗೋಡಿಗೆ ನೂತನ ಪಿಎಸ್ಐ

ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ರಾಮನಗರಕ್ಕೆ ವರ್ಗ, ಯಲ್ಲಾಲಿಂಗ ಮುಂಡಗೋಡಿಗೆ ನೂತನ ಪಿಎಸ್ಐ

ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ವರ್ಗಾವಣೆಯಾಗಿದ್ದಾರೆ. ಕಳೆದ ಮೂರು ವರ್ಷದಿಂದ ಮುಂಡಗೋಡ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದ ಬಸವರಾಜ್, ರಾಮನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಅಂದಹಾಗೆ, ಮುಂಡಗೋಡ ಠಾಣೆಗೆ ನೂತನ ಪಿಎಸ್ಐ ಆಗಿ ಎಲ್ಲಾಲಿಂಗ ಸಾಹೆಬ್ರು ಜಾಯಿನ್ ಆಗಿದ್ದಾರೆ. ಅಸಲು ಬಸವರಾಜ್ ಮಬನೂರು, ಮುಂಡಗೋಡ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ನಿಷ್ಟೆಯ ಕಾರ್ಯ ನಿರ್ವಹಿಸಿದ್ದರು. ಕೊರೋನಾ ಲಾಕಡೌನ್ ಸಂದರ್ಭದಲ್ಲಿ ತಾಲೂಕಿನಲ್ಲಿ ಯುವ ಪಡೆಯೊಂದಿಗೆ ಕೈ ಜೋಡಿಸಿ, ಹಲವು ಸಾಮಾಜಿಕ ಕಳಕಳಿಯ ಕಾರ್ಯ ನಿರ್ವಹಿಸಿದ್ದರು.  

error: Content is protected !!