ಕೊಪ್ಪದಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳ ಪ್ರತಿಭಟನೆ, ಬಸ್ ತಂಗುದಾಣಕ್ಕಾಗಿ ರಸ್ತೆ ತಡೆ..!


ಮುಂಡಗೋಡ ತಾಲೂಕಿನ ಕೊಪ್ಪ (ಇಂದೂರು) ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆದಿದೆ. ಗ್ರಾಮಕ್ಕೆ ಬಸ್ ತಂಗುದಾಣ ನಿರ್ಮಿಸಿ ಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಬಸ್ ತಡೆದಿದ್ದಾರೆ.

ಅಂದಹಾಗೆ, ಇಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಪ್ಪ ಗ್ರಾಮಸ್ಥರು, ವಿದ್ಯಾರ್ಥಿಗಳು ಗ್ರಾಮಕ್ಕೆ ಒಂದು ಬಸ್ ತಂಗುದಾಣದ ಕನಸು ಹೊತ್ತಿದ್ದಾರೆ. ಇದುವರೆಗೂ ಗ್ರಾಮಕ್ಕೆ ಒಂದು ಬಸ್ ತಂಗುದಾಣ ನಿರ್ಮಿಸಿಕೊಟ್ಟಿಲ್ಲ ಇಲ್ಲಿನ ಅಧಿಕಾರಿಗಳು. ದುರಂತ ಅಂದ್ರೆ ಜನಪ್ರತಿನಿಧಿಗಳಿಗೂ ಈ ಬಗ್ಗೆ ಕ್ಯಾರೇ ಇಲ್ಲ. ಹೀಗಾಗಿ, ಪ್ರತಿದಿನವೂ ಶಾಲಾಬಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಮಳೆ ಬಿಸಿಲಿನಲ್ಲಿಯೇ ಬಸ್ ಗಾಗಿ ಕಾದು ರಸ್ತೆಯ ಪಕ್ಕದಲ್ಲಿ ನಿಲ್ಲಬೇಕಿದೆ.

ಹೀಗಾಗಿ, ವಿದ್ಯಾರ್ಥಿಗಳು ಅದೆಷ್ಟೋ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಈ ಬಗ್ಗೆ ಕಣ್ಣೆತ್ತಿಯೂ ನೋಡಿಲ್ಲ. ಈ ಕಾರಣಕ್ಕಾಗಿ ಗ್ರಾಮಸ್ಥರು ಇಂದು ಪ್ರತಿಭಟನೆ ಕೈಗೊಂಡಿದ್ರು. ಮುಂಡಗೋಡ ಪಿಐ ಸಿದ್ದಪ್ಪ ಸಿಮಾನಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರ ಮನವೊಲಿಸಿ ಪ್ರತಿಭಟನೆ ತಣ್ಣಗಾಗಿಸಿದ್ರು.

error: Content is protected !!