ಮುಂಡಗೋಡ; ತಾಲೂಕಿನ ಸಿಂಗನಳ್ಳಿಯಲ್ಲಿ SSLC ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದಾನೆ ಅನ್ನೊ ಮಾಹಿತಿ ಲಭ್ಯವಾಗಿದೆ. ತಮ್ಮದೇ ಗದ್ದೆಯಲ್ಲಿನ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ದುರಂತ ಅಂತ್ಯ ಕಂಡಿದ್ದಾನೆ ಅಂತಾ ಹೇಳಲಾಗಿದೆ. ಹೀಗಾಗಿ, ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ.
ಸಿಂಗನಳ್ಳಿ ಗ್ರಾಮದ ಸುಪ್ರೀತ್ ಫಕ್ಕಿರಪ್ಪ ತಲ್ಲಳ್ಳಿ(16) ಎಂಬುವ ವಿದ್ಯಾರ್ಥಿಯೇ ನೇಣಿಗೆ ಶರಣಾಗಿದ್ದಾನೆ. ಈತ ನಿನ್ನೆ ರಾತ್ರಿಯೋ ಅಥವಾ ಇಂದು ಬೆಳಗಿನ ಜಾವದಲ್ಲೋ, ತಮ್ಮದೇ ಜಮೀನಿನಲ್ಲಿ ಇರುವ ಮಾವಿನ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.