ಮುಂಡಗೋಡ ಪಟ್ಟಣದ ಹೊರವಲಯದ ನೂರಾನಿ ಗಲ್ಲಿಯ ಹತ್ತಿರ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಯಾರೋ ಆಗಷ್ಟೇ ಹೆರಿಗೆ ಮಾಡಿಸಿ, ಅಥವಾ ಗರ್ಭಪಾತ ಮಾಡಿಸಿ ಬಾಕ್ಸ್ ನಲ್ಲಿ ಶಿಶುವನ್ನು ಎಸೆದು ಹೋಗಿದ್ದಾರೆ. ರಕ್ತಸಿಕ್ತವಾಗಿದ್ದ ಶಿಶುವನ್ನು ನಾಯಿಗಳು ಎಳೆದಾಡಿ ಕಚ್ಚಿ ಹಾಕಿವೆ. ಹೀಗಾಗಿ, ಶಿಶು ಮರಣಹೊಂದಿದ್ದು ರಸ್ತೆಯಲ್ಲಿ ಅನಾಥವಾಗಿ ಬಿದ್ದಿದೆ.
ಅಬಾರ್ಷನ್ ಮಾಡಿದ್ರಾ..?
ಅಸಲು, ರಸ್ತೆಯ ಮೇಲೆ ರಕ್ತಸಿಕ್ತವಾಗಿ ಬಿದ್ದಿದ್ದ ಶಿಶುವನ್ನು ನೋಡಿದ್ರೆ, ಅಬಾರ್ಷನ್ ಮಾಡಿಸಿರಬಹುದಾ ಅನ್ನೋ ಅನುಮಾನವಿದೆ. ಅಲ್ಲದೆ, ಅನೈತಿಕತೆಗೆ ಹುಟ್ಟಿದ ಬೇಡವಾದ ಕಂದಮ್ಮನನ್ನು ಹೀಗೆ ಅಮಾನುಷವಾಗಿ ಬೀಸಾಕಿ ಹೋದ್ರಾ ಕಟುಕರು ಅನ್ನೋ ಅನುಮಾನ ಶುರುವಾಗಿದೆ. ಒಟ್ನಲ್ಲಿ ದಾರಿಹೋಕರು ರಸ್ತೆಯಲ್ಲಿ ಬಿದ್ದಿದ್ದ ಕಂದಮ್ಮನನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮುಂದಿನ ಕ್ರಮ ಕೈಗೊಂಡಿದ್ದಾರೆ.