ಮಳಗಿ ಟ್ರಾಕ್ಟರ್ ಪಲ್ಟಿ, ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು, ಅಷ್ಟಕ್ಕೂ ಈ ಸಾವಿಗೆ ಯಾರು ಹೊಣೆ..? ಪ್ರಿನ್ಸಿಪಾಲಾ..? ಅಥವಾ ಅತಿಥಿ ಶಿಕ್ಷಕನಾ..?

ಮುಂಡಗೋಡ ತಾಲೂಕಿನ ಮಳಗಿಯಲ್ಲಿ ವಿದ್ಯಾರ್ಥಿಗಳನ್ನು ಪಿಕ್ ನಿಕ್ ಗೆ ಕರೆದೊಯ್ಯುತ್ತಿದ್ದ ಟ್ರಾಕ್ಟರ್ ಪಲ್ಟಿಯಾದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಶಿರಸಿ TSS ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಅನ್ನೊ ಮಾಹಿತಿ ಲಭ್ಯವಾಗಿದೆ.

ಮಳಗಿ ಸಮೀಪದ ಕಲ್ಲಹಕ್ಕಲ ಗ್ರಾಮದ ಕಾವ್ಯ ಬರಮಪ್ಪ ಬ್ಯಾಡಗಿ(17) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಟ್ರಾಕ್ಟರ್ ಪಲ್ಟಿಯಾದ ಹಿನ್ನೆಲೆಯಲ್ಲಿ ಕಾವ್ಯಾಗೆ ಗಂಭೀರ ಗಾಯವಾಗಿತ್ತು. ಹೀಗಾಗಿ, ಶಿರಸಿಯ TSS ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕಾವ್ಯಾ ಮೃತಪಟ್ಟಿದ್ದಾಳೆ ಅಂತಾ ಮಾಹಿತಿ ಲಭ್ಯವಾಗಿದೆ. ಇನ್ನು ಮೃತ ವಿದ್ಯಾರ್ಥಿನಿಯ ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ.

ಅತಿಥಿ ಉಪನ್ಯಾಸಕನೇ ಚಾಲಕನಾ..?
ಅಂದಹಾಗೆ, ಕಾಲೇಜು ಹುಡುಗರನ್ನ ಪಿಕ್ ನಿಕ್ ಅಂತಾ ಜಾಲಿಯಾಗಿ ಕರೆದುಕೊಂಡು ಹೋಗಿದ್ದ ಕಾಲೇಜಿನವರು, ಟ್ರಾಕ್ಟರ್ ನಲ್ಲಿ ಹೊಸತನದ ಸವಾರಿ ಮಾಡಿಸಲು ಪ್ಲ್ಯಾನ್ ಮಾಡಿದ್ದರು. ಹೀಗಾಗಿ, ಎರಡೆರಡು ಟ್ರಾಕ್ಟರ್ ಮೂಲಕ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ತೀರ್ಮಾನಿಸಿದ್ದರಂತೆ. ಹೀಗಾಗಿ, ಸದ್ಯ ಪಲ್ಟಿಯಾಗಿ ಅಪಘಾತವಾಗಿರೋ ಟ್ರಾಕ್ಟರ್ ಗೆ ಚಾಲಕನಾಗಿ ಅದೇ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿದ್ದವ ಸ್ಟೇರಿಂಗ್ ಹಿಡಿದಿದ್ದ. ಹೀಗಾಗಿ, ಥೇಟು ರೇಸಿನಲ್ಲಿ ಟ್ರಾಕ್ಟರ್ ಓಡಿಸುವಂತೆ ಓಡಿಸಿದ್ದನಂತೆ. ಈ ಕಾರಣಕ್ಕಾಗೇ ಅವೇರಡೂ ಟ್ರಾಕ್ಟರ್ ಗಳೂ ಕೂಡ ನಾ ಮುಂದು ತಾಮುಂದು ಅಂತಾ ಸ್ಪರ್ಧೆಗಿಳಿದಿದ್ದವಂತೆ. ಆದ್ರೆ, ಈ ಅತಿಥಿ ಉಪನ್ಯಾಸಕ ನಾನೇ ಮುಂದು ಅಂತಾ ಓವರ್ ಟೇಕ್ ಮಾಡಲು ಹೋಗಿ ಇಂತಹದ್ದೊಂದು ಅಪಘಾತಕ್ಕೆ ಕಾರಣವಾಗಿದ್ದಾನೆ ಅಂತಾ ಜನ ಮಾತಾಡಿಕೊಳ್ತಿದಾರೆ.

ಕ್ರಮವಾಗಲಿ..!
ಅಸಲು, ಈ ಕಾಲೇಜಿನ ಪ್ರಿನ್ಸಿಪಾಲರಿಗೆ ಬುದ್ದಿ ಬೇಡವಾ..? ಟ್ರಾಕ್ಟರ್ ಟ್ರೇಲರಿ‌ನಲ್ಲಿ ಅಷ್ಟೇಲ್ಲ ವಿದ್ಯಾರ್ಥಿಗಳನ್ನ ಮೂಟೆ ತುಂಬಿದ ಹಾಗೆ ತುಂಬಿ ಪಿಕ್ನಿಕ್ ಅಂತಾ ಹೊರಟಿದ್ದವರಿಗೆ ತಲೆಯಲ್ಲಿ ಏನು ತುಂಬಿತ್ತು..? ಇಡೀ ಕಾಲೇಜಿನ ಆಡಳಿತ ವರ್ಗವೇ ಈ ಘಟನೆಗೆ ಕಾರಣ ಅಲ್ವಾ..? ಹಾಗಿದ್ರೆ ಯಾರ ಮೇಲೆ ಏನೇನು ಕ್ರಮ..? ಅಷ್ಟಕ್ಕೂ ಈ ಸಾವಿಗೆ ಯಾರು ಹೊಣೆ..? ಸಂಬಂಧಪಟ್ಟವರು ಉತ್ತರಿಸಲೇಬೇಕಿದೆ.

error: Content is protected !!