ಲಂಬಾಣಿ ತಾಂಡಾಗಳ ಅಭಿವೃದ್ಧಿಗೆ ಕಟಿಬದ್ಧ: ಅರಶಿಣಗೇರಿಯಲ್ಲಿ ಸಚಿವ ಹೆಬ್ಬಾರ್ ಭರವಸೆ..!

ಮುಂಡಗೋಡ: ತಾಲೂಕಿನ ಬಂಜಾರಾ ಸಮುದಾಯದ, ಲಂಬಾಣಿ ತಾಂಡಾಗಳ ಅಮೂಲಾಗ್ರ ಬದಲಾವಣೆಗೆ, ಅಭಿವೃದ್ದಿಗೆ ನಾನು ಕಟಿಬದ್ಧವಾಗಿದ್ದೆನೆ ಅಂತಾ ಸಚಿವ ಶಿವರಾಮ್ ಹೆಬ್ಬಾರ್ ಘೋಷಿಸಿದ್ರು‌.

ಅವ್ರು ಮುಂಡಗೋಡ ತಾಲೂಕಿನ ಅರಶಿಣಗೇರಿ ಗ್ರಾಮದ ಲಂಬಾಣಿ ತಾಂಡಾದಲ್ಲಿ, ಶ್ರೀ ಸಂತ ಸೇವಾಭಾಯಾ ದೇವಸ್ಥಾನದ ಮೂರ್ತಿ ಪ್ರಟಣ ಪ್ರತಿಷ್ಟಾಪನೆ ಹಾಗೂ ನೂತನ ದೇವಾಲಯದ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು‌.

ಮುಂಡಗೋಡ ತಾಲೂಕಿನ ಪ್ರತಿಯೊಂದೂ ಲಂಬಾಣಿ ತಾಂಡಾಗಳಲ್ಲೂ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ಮುಟ್ಟುವಂತಹ ವ್ಯವಸ್ಥೆ ಮಾಡಿದ್ದೇವೆ‌. ಬಹುತೇಕ ತಾಂಡಾಗಳಲ್ಲೂ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾರ್ಯ ನಡೆದಿದೆ. ಹೀಗಾಗಿ, ಈ ಭಾಗದಲ್ಲಿ ಬಂಜಾರಾ ಸಮುದಾಯದ ತಾಂಡಾಗಳ ಸಮಗ್ರ ಅಭಿವೃದ್ಧಿಗೆ ನಾವು ಕಂಕಣಬದ್ಧರಾಗಿದ್ದೇವೆ ಅಂತಾ ಸಚಿವ್ರು ಆಶ್ವಾಸನೆ ನೀಡಿದ್ರು.

ಇನ್ನು ಮುಂದಿನ ಐದು ವರ್ಷಗಳಲ್ಲಿ ಮುಂಡಗೋಡ ತಾಲೂಕಿನ ಚಿತ್ರಣವೇ ಬದಲಾಗಲಿದೆ ಅಂತಾ ಭರವಸೆ ನೀಡಿದ ಸಚಿವರು ತಾಲೂಕಿನ ಅಭಿವೃದ್ಧಿಗೆ ತಮ್ಮೇಲ್ಲರ ಆಶೀರ್ವಾದ ಇರಬೇಕು ಅಂತಾ ತಿಳಿಸಿದ್ರು.

ಈ ವೇಳೆ ಮಾಜಿ ಜಿಪಂ ಸದಸ್ಯ ಎಲ್.ಟಿ‌.ಪಾಟೀಲ್, ಬಿಜೆಪಿ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಗುಡ್ಡಪ್ಪ ಕಾತೂರು, ಸಂತೋಷ ಸಣ್ಣಮನಿ, ಜಗಧೀಶ ಕುರುಬರ ಸೇರಿದಂತೆ ಬಂಜಾರಾ ಸಮುದಾಯದ ಮುಖಂಡರು ಭಾಗಿಯಾಗಿದ್ರು‌.

error: Content is protected !!