ಮುಂಡಗೋಡ: ಮಾಜಿ ಜಿ.ಪಂ.ಸದಸ್ಯ ಎಲ್.ಟಿ. ಪಾಟೀಲ ಅವರ 65ನೇ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದಿಂದ ಪಟ್ಟಣದ ದೇಶಪಾಂಡೆ ನಗರದರಲ್ಲಿರುವ ಜ್ಞಾನ ಪ್ರಜ್ಞಾ ಅಂದ ಮಕ್ಕಳ ಶಾಲೆಯಲ್ಲಿ ಹುಟ್ಟು ಹಬ್ಬವನ್ನು ಶನಿವಾರ ಆಚರಿಸಲಾಯಿತು.
ಈ ವೇಳೆ ಎಲ್.ಟಿ.ಪಾಟೀಲ ಮಾತನಾಡಿ, 84 ಲಕ್ಷ ಜೀವ ರಾಶಿಯನ್ನು ದಾಟಿ ಮಾನವನಾಗಿ ಜನಿಸುತ್ತೇವೆ. ಹುಟ್ಟು ಮತ್ತು ಸಾವಿನ ಮಧ್ಯೆ ನಾವೇನು ಸಾಧಿಸುತ್ತೇವೆ’ ಎಂಬುವುದು ಮುಖ್ಯವಾಗಿದೆ. ದೇವರು ನಿಮ್ಮೆಲ್ಲರ ಬಾಳಿನಲ್ಲಿ ಪ್ರಜ್ವಲ ಶಕ್ತಿ ನೀಡಲಿ ಎಂದು ಅಂದ ಮಕ್ಕಳಿಗೆ ಹಾರೈಸಿ, ಅಂದ ಮಕ್ಕಳಿಗೆ ಇಷ್ಟ ಆಗುವ ಅಡುಗೆ ಮಾಡಿಸಿ ಬಡಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯ ಎಲ್.ಟಿ.ಪಾಟೀಲ ಅವರಿಗೆ ಜ್ಞಾನ ಪ್ರಜ್ಞಾ ಅಂದ ಮಕ್ಕಳ ಶಾಲೆಯ ಮುಖ್ಯೋಪಧ್ಯಾಯರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಎಲ್.ಟಿ. ಪಾಟೀಲ ಅಭಿಮಾನಿಗಳು ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.