ಮುಂಡಗೋಡ: ಬಂಜಾರಾ ಸಮುದಾಯದ ಪವಿತ್ರ ಕ್ಷೇತ್ರ ಸಂತ ಶ್ರೀ ಸೇವಾಲಾಲರ ಜನ್ಮಸ್ಥಳ ಸೂರಗೊಂಡನಕೊಪ್ಪದ ಬಾಯಾಗಢನಲ್ಲಿ RSS ನವರು ನಡೆಸುತ್ತಿರೋ ಶಿಬಿರಕ್ಕೆ ಬಂಜಾರಾ ಸಮುದಾಯದ ಕೆಲವು ಮುಖಂಡರು ವಿರೋಧ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ, ಹೀಗೆ RSS ನ ಶಿಬಿರವನ್ನು ವಿರೋಧಿಸುವುದು ಸರಿಯಲ್ಲ, ಶಿಬಿರ ನಡೆಯುವಂತಾಗಲಿ ಅಂತಾ ಮುಂಡಗೋಡಿನ ಬಂಜಾರಾ ಮುಖಂಡ, ಪಟ್ಟಣ ಪಂಚಾಯತಿ ಸದಸ್ಯ ಶೇಖರ್ ಲಮಾಣಿ ಆಗ್ರಹಿಸಿದ್ದಾರೆ. RSS ಬಗ್ಗೆ ಅರಿವಿದೆ..! ನಮಗೆ RSS ಬಗ್ಗೆ ಅರಿವಿದೆ. ದೇಶಭಕ್ತಿಯನ್ನು ಜಾಗ್ರತಗೊಳಿಸಿ, ಯುವಕರನ್ನು ದೇಶಭಕ್ತಿಯೆಡೆಗೆ ಸಂಘಟಿಸುವುದೇ RSS ಆಗಿದೆ. ನಾನೂ ಕೂಡ RSS ನ ಸಂಪೂರ್ಣ ಸಿದ್ದಾಂತಗಳನ್ನು ತಿಳಿದುಕೊಂಡಿದ್ದೇನೆ. ಹೀಗಾಗಿ, ನಮ್ಮ ಬಂಜಾರಾ ಸಮುದಾಯದವರು ಹೀಗೆ RSS ಬಗ್ಗೆ ಇಲ್ಲಸಲ್ಲದ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದ ಹೊರ ಬರಬೇಕು. ಸೂರಗೊಂಡನಕೊಪ್ಪದ ಬಾಯಗಡನಲ್ಲಿ ಶಿಬಿರ ನಡೆಯುವಂತಾಗಬೇಕು, ಆ ಶಿಬಿರಕ್ಕೆ ಯಾರೂ ವಿರೋಧ ವ್ಯಕ್ತ ಪಡಿಸಬೇಡಿ ಅಂತಾ ಬಂಜಾರಾ ಸಮುದಾಯಕ್ಕೆ ಶೇಖರ್ ಲಮಾಣಿ ಮನವಿ ಮಾಡಿದ್ದಾರೆ. ಮತಾಂತರ ತಡೆದದ್ದೇ RSS..! ಇನ್ನು ಬಂಜಾರಾ ಸಮುದಾಯದ ಬಡವರನ್ನೇ ಟಾರ್ಗೆಟ್...
Top Stories
ನಿವೃತ್ತ IPS ಅಧಿಕಾರಿ DG-IGP ಓಂ ಪ್ರಕಾಶ್ ಬರ್ಬರ ಹತ್ಯೆ..! ಪತ್ನಿಯೇ ಕೊಲೆ ಮಾಡಿರೋ ಶಂಕೆ..!
ಬೆಳ್ಳಂ ಬೆಳಿಗ್ಗೆ ಬೆಚ್ಚಿ ಬಿದ್ದ ಕಾರವಾರ, ನಗರಸಭೆಯ ಮಾಜಿ ಸದಸ್ಯನ ಭೀಕರ ಹತ್ಯೆ, ಸತೀಶ್ ಕೊಳಂಕರ್ ನ ನಡುರಸ್ತೆಯಲ್ಲೇ ಕೊಚ್ಚಿ ಕೊಲೆ..!
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಮುಂಡಗೋಡಿನಲ್ಲಿ ಮತ್ತೇ ಭಾರೀ ಮಳೆ, ಬಂಕಾಪುರ ರಸ್ತೆ ನಿವಾಸಿಗಳಿಗೆ ಮತ್ತದೇ ಗೋಳು, ಇನ್ನಾದ್ರೂ ಎಚ್ಚೆತ್ತುಕೊಳ್ಳಿ ಮಿಸ್ಟರ್ ಚೀಫ್ ಆಫೀಸರ್ರೇ.!
ಮುಂಡಗೋಡಿನಲ್ಲಿ ಮತ್ತೆ ಭಾರೀ ಮಳೆಯಾಗಿದೆ. ಬಂಕಾಪುರ ರಸ್ತೆಯಲ್ಲಿ ಮತ್ತದೇ ಗೋಳು ಎದುರಾಗಿದೆ. ಶನಿವಾರದಂತೆ ಇವತ್ತೂ ಕೂಡ ಇಲ್ಲಿನ ನಿವಾಸಿಗಳು “ಶಿವ”ರಾತ್ರಿ ಜಾಗರಣೆ ಮಾಡುವಂತಾಗಿದೆ. ಹೀಗೆ ಭಜನೆ ಮಾಡಿದ ಮೇಲಾದ್ರೂ “ಜನಪ್ರತಿನಿಧಿ” ಸಾಹೇಬ್ರುಗಳು ಈ ನಿವಾಸಿಗಳ ಗೋಳು ಕೇಳ್ತಾರಾ ಅನ್ನೋದೊಂದೇ ಸದ್ಯದ ಪ್ರಶ್ನೆಯಾಗಿದೆ. ಶನಿವಾರದಂತೆ..! ಅಸಲು, ಶನಿವಾರ ಇಂತದ್ದೇ ಮಳೆ ಧುತ್ತನೇ ಸುರಿದು ಹೋದಾಗ, ಪಾಪ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಾತ್ರೋ ರಾತ್ರಿ ಎದ್ನೊ ಬಿದ್ನೊ ಅಂತಾ ಬಂದಿದ್ರಂತೆ. ಪಾಪ ಅದೇಲ್ಲಿ ಬೆಚ್ಚಗೆ ಮಲಗಿದ್ರೋ ಏನೋ ಮಾದ್ಯಮಗಳು ಪರಿಸ್ಥಿತಿಯ ಬಗ್ಗೆ ಎಚ್ಚರಿಸಿದ್ದವು. ಅಲ್ಲದೇ ಇಲ್ಲಿನ ಬಡ ನಿವಾಸಿಗಳು ಉಗಿದು ಉಪ್ಪಿನಕಾಯಿ ಹಾಕಿದ್ರು. ಆ ಕಾರಣಕ್ಕಾಗಿ ಪಾಪ ದಡಬಡನೇ ಬಂದಿದ್ದ “ಸ್ವಾಮಿಗಳು” ಕತ್ತಲಲ್ಲೇ ಬಂದು ಅದೇನೋ ಮುಂದಿನ “ಕಠಿಣ” ವ್ಯವಸ್ಥೆಯ ಕ್ರಮಕ್ಕೆ ಮುಂದಾಗಿದ್ದಾರಂತೆ. ಪಾಪ, ಈ ಯಪ್ಪನಿಗೆ ಶನಿವಾರ ರಾತ್ರಿಯೇ ಜ್ಞಾನೋದಯವಾಗಿದ್ದು ಸಮಸ್ಯೆಯ ಪರಿಹಾರಕ್ಕಾಗಿ ರೆಡಿಯಾಗಿದ್ರಂತೆ. ಆದ್ರೆ, ಮುಹೂರ್ತಕ್ಕಾಗಿ ಜ್ಯೋತಿಷ್ಯರ ಹುಡುಕಾಟದಲ್ಲಿದ್ದಾರಂತೆ. ಇದೇಲ್ಲ ನಂಬೋದಾ..? ಅಸಲು, ಇದೇಲ್ಲ ಬರೀ ಕಣ್ಣೊರೆಸುವ ತಂತ್ರ ಅಂತಿದ್ದಾರೆ...
ಮುಂಡಗೋಡಿನಲ್ಲಿ ಭಾರಿ ಮಳೆ, ಬಂಕಾಪುರ ರಸ್ತೆ ಮೇಲೆ ಮೊಣಕಾಲಿನವರೆಗೂ ಮಳೆನೀರು..! ಮನೆಗಳಿಗೂ ಹೊಕ್ಕ ಕೊಳಚೆ ನೀರು.!
ಮುಂಡಗೋಡ: ಪಟ್ಟಣದಲ್ಲಿ ಭಾರೀ ಮಳೆ ಸುರಿದಿದೆ. ಪರಿಣಾಮ ಇಲ್ಲಿನ ಬಂಕಾಪುರ ರಸ್ತೆಯಲ್ಲಿ ಮೊಣಕಾಲಿನವರೆಗೂ ನೀರು ನಿಂತು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ವಾಹನಗಳು ರಸ್ತೆ ಮೇಲೆ ಸಂಚರಿಸಲು ಪರದಾಡುವಂತಾಗಿದೆ. ಪಟ್ಟಣ ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿಗೆ ಇಲ್ಲಿನ ನಿವಾಸಿಗಳು ಕ್ಯಾಕರಿಸಿ ಉಗಿಯುವಂತಾಗಿದೆ. ರಸ್ತೆಯಲ್ಲಾ, ಕೆರೆ..! ಅಸಲು, ಇಂದು ಮದ್ಯಾನ ಸುರಿದ ಭಾರೀ ಮಳೆಯಿಂದ ಇಲ್ಲಿನ ಬಂಕಾಪುರ ರಸ್ತೆಯಲ್ಲಿ ಮಳೆಯ ನೀರು ತುಂಬಿ ಅದ್ವಾನವಾಗಿದೆ. ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುವಂತಾಗಿದೆ. ಮೊಣಕಾಲಿನವರೆಗೂ ಮಳೆಯ ನೀರು ತುಂಬಿದೆ. ಹೀಗಾಗಿ, ಇದೇನು ರಸ್ತೆಯೋ ಕೆರೆಯೋ ಎಂಬ ಅನುಮಾನದಲ್ಲೇ ವಾಹನ ಸವಾರರು ಪರದಾಡುವಂತಾಗಿದೆ. ಅದ್ರಲ್ಲೂ ಇಲ್ಲಿ ಹೇಗೋ ದಾಟಿ ನಡೆದರಾಯ್ತು ಅಂತಾ ಹೊರಟಿದ್ದ ವಾಹನವೊಂದು ನಟ್ಟನಡುವೆ ನೀರಲ್ಲಿ ಕೆಟ್ಟು ಪರದಾಡಿದೆ. ಇಷ್ಟಿದ್ರೂ ನಿರ್ಲಜ್ಜ ಅಧಿಕಾರಿಗಳು ತಮ್ಮ ಬೇಜವಾಬ್ದಾರಿಯಿಂದ ಎದ್ದು ಬರುತ್ತಲೇ ಇಲ್ಲ. ಮನೆಗಳಿಗೆ ಹೊಕ್ಕ ನೀರು..! ಇನ್ನು, ಮಳೆಯ ನೀರು ಬಂಕಾಪುರ ರಸ್ತೆಯ ನಿವಾಸಿಗಳಿಗೆ ಇನ್ನಿಲ್ಲದ ಪರದಾಟ ತಂದಿಟ್ಟಿದೆ. ಇಲ್ಲಿನ ಹಲವು ಮನೆಗಳಿಗೆ ನುಗ್ಗಿರೋ ಮಳೆ...
ಬಿಜೆಪಿ ಮರಾಠಾ ಮುಖಂಡ ಎಲ್ಟಿ ಪಾಟೀಲ್ ಗೆ ಒಲಿಯತ್ತಾ ಅಧ್ಯಕ್ಷಗಿರಿ..? ಅಸಲು, ಪಾಟೀಲರ ಮನದೊಳಗಿನ ನೋವು ಎಂತಾದ್ದು ಗೊತ್ತಾ..?
ಮುಂಡಗೋಡ ತಾಲೂಕಿನ ಮರಾಠಾ ಮುಖಂಡ, ತಾಲೂಕಿನ ಬಿಜೆಪಿ ನಾಯಕ, ಎಲ್. ಟಿ. ಪಾಟೀಲ್ ಒಳಗೊಳಗೆ ಕಿಚ್ಚು ಹೊತ್ತಿಸಿಕೊಂಡು ಕೂತಿದ್ದಾರೆ. ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯ ಸದ್ಯದ ಸ್ಥಿತಿಗತಿಗಳ ಬಗ್ಗೆ ಆತಂಕಗೊಂಡಿದ್ದಾರೆ. ಜೊತೆಗೆ ಸದ್ಯ ಖಾಲಿಯಿರೋ NWKSRTC ಅಧ್ಯಕ್ಷಗಿರಿ ದಕ್ಕದೇ ಹೋದ್ರೆ ಬಿಜೆಪಿಗೆ ಠಕ್ಕರ್ ಕೊಡುವ ಸಾತ್ವಿಕ ಎಚ್ಚರಿಕೆ ನೀಡಿದ್ದಾರೆ. ಕ್ಷೇತ್ರದ ಬಿಜೆಪಿ ಸಂಕಷ್ಟದಲ್ಲಿ..! ಅಸಲು, ಬಿಜೆಪಿ ಮುಖಂಡ ಎಲ್.ಟಿ.ಪಾಟೀಲರೇ ನೇರವಾಗಿ ಪಬ್ಲಿಕ್ ಫಸ್ಟ್ ಎದುರು ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ಶಿವರಾಮ್ ಹೆಬ್ಬಾರ್ ಪಡೆಯೊಳಗೇ ಗುರುತಿಸಿಕೊಂಡಿರೋ ಎಲ್ಟಿ ಪಾಟೀಲರು ಅದ್ಯಾಕೋ ಎನೋ ಸದ್ಯದ ಬಿಜೆಪಿಯೊಳಗಿನ ನೆಗೆಟಿವ್ ಅಂಶಗಳನ್ನು ಬಾಯಿಬಿಟ್ಟಿದ್ದಾರೆ. ಹೀಗೇ ಮುಂದುವರೆದ್ರೆ ಬರುವ ಚುನಾವಣೆಯಲ್ಲಿ ಬಿಜೆಪಿಗೆ ನೆಲೆ ಸಿಗೋದೇ ಕಷ್ಟ ಅಂತಿದ್ದಾರೆ. ಅಸಲು, ಇಂತಹದ್ದೊಂದು ಮನದಾಳದ ನೋವು ಮತ್ತು ಆಕ್ರೋಶ ಹೊರಹಾಕುವ ಹಿಂದೆ ಎಲ್ಟಿ ಪಾಟೀಲರು ಅನುಭವಿಸಿರೋ ಒಳಗೊಳಗಿನ ನಿರ್ಲಕ್ಷ ಹಾಗೂ ಕೆಲವೇ ಕೆಲವು ನಾಯಕರೆನಿಸಿಕೊಂಡವರ ಹುಂಬ ರಾಜಕೀಯ ಕಾರಣವಾಗ್ತಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಬರೀ ಬ್ರಷ್ಟಾಚಾರ..! ನಿಜ ಅಂದ್ರೆ, ಯಲ್ಲಾಪುರ...
ಗುಂಜಾವತಿ ಬಳಿ ಬೈಕ್ ಹಾಗೂ ಕಾರ್ ನಡುವೆ ಡಿಕ್ಕಿ, ಬೈಕ್ ಸವಾರ ಗಂಭೀರ..! ರಸ್ತೆಯಲ್ಲೇ ಬಿದ್ದು ಒದ್ದಾಡಿದ ಗಾಯಾಳು..!
ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯ ಗುಂಜಾವತಿ ಮೈನಳ್ಳಿ ಬಳಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದೆ. ಕಾರ್ ಹಾಗೂ ಬೈಕ್ ನಡುವೆ ಸಂಭವಿಸಿದ ದುರಂತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಗಂಗಾರಾಮ ರಾಮು ಎಡಗೆ (20) ಗಂಭೀರ ಗಾಯಗೊಂಡ ಬೈಕ್ ಸವಾರನಾಗಿದ್ದು. ಮುಂಡಗೋಡ ಕಡೆಯಿಂದ ಯಲ್ಲಾಪುರ ಕಡೆಗೆ ಹೊರಟಿದ್ದ KA-03 MV-6816 ನೋಂದಣಿ ಸಂಖ್ಯೆಯ ಕಾರ್ ಹಾಗೂ ಗುಂಜಾವತಿ ಸಮೀಪದ ಬೆಂಡಿಕಟ್ಟಾ ಕಡೆಯಿಂದ ಗದ್ದೆಗೆ ಹೊರಟಿದ್ದ ಬೈಕ್ ನಡುವೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರ್ ನಲ್ಲಿನ ಏರ್ ಬ್ಯಾಗ್ ಓಪನ್ ಆಗಿದ್ದು ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಇನ್ನು ಘಟನೆ ನಡೆದು ಒಂದು ಗಂಟೆ ಕಳೆಯುತ್ತ ಬಂದರೂ ಗಾಯಾಳು ಬೈಕ್ ಸವಾರನನ್ನು ಆಸ್ಪತ್ರೆಗೆ ಸಾಗಿಸಿರಲಿಲ್ಲ. ಆ ನಂತರದಲ್ಲಿ, 108 ಅಂಬ್ಯುಲೆನ್ಸ್ ಗೆ ಸ್ಥಳೀಯರು ಕರೆಮಾಡಿದ ನಂತರ ಸ್ಥಳಕ್ಕೆ ಆಗಮಿಸಿದ 108 ಅಂಬ್ಯುಲೆನ್ಸ್ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದೆ. ಹೀಗಾಗಿ, ಗಾಯಾಳು ನೋವಿನಿಂದ ನರಳುತ್ತಿದ್ದ ದೃಷ್ಯ ಕಂಡು ಬಂತು. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು...
ಪಾಟೀಲರಿಂದ ಕಿತ್ತುಕೊಂಡ ಅಧ್ಯಕ್ಷಗಿರಿ ಯಾರ ಪಾಲು..? ಮರಾಠಾ ಮುಖಂಡನಿಗೆ ಒಲಿಯತ್ತಾ ಪಟ್ಟ..? ಐರ್ಲ್ಯಾಂಡನಲ್ಲೇ ರೆಡಿಯಾಯ್ತಾ ಪ್ಲ್ಯಾನ್..?
ಯಲ್ಲಾಪುರ ಕ್ಷೇತ್ರದ ಬಿಜೆಪಿ ರಾಜಕೀಯ ಪಡಸಾಲೆಯಲ್ಲಿ ಗುದುಮುರುಗಿ ಬಿದ್ದಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ವಿ.ಎಸ್.ಪಾಟೀಲರನ್ನು ಅನಾಮತ್ತಾಗಿ ಕಿತ್ತು ಹಾಕಿದ ನಂತರ, ಕ್ಷೇತ್ರದ ಬಿಜೆಪಿ ಅಂಗಳದಲ್ಲಿ ಭಾರೀ ಲೆಕ್ಕಾಚಾರಗಳು ಗರಿಗೆದರಿವೆ. ಪಾಟೀಲರ ಅಷ್ಟೂ ಮಜಕೂರಗಳಿಂದ ಕ್ಷೇತ್ರದ ಬಿಜೆಪಿಗೆ ಆಗಿರೋ, ಆಗಲಿರೋ ಡ್ಯಾಮೇಜ್ ಕಂಟ್ರೋಲ್ ಗೆ ಅದೊಂದು ಪ್ಲ್ಯಾನ್ ಸಾಗರದಾಚೆಗಿನ ಐರ್ಲೆಂಡ್ ನಲ್ಲಿಯೇ ರೆಡಿಯಾಗ್ತಿದೆಯಾ..? ಹೌದು ಅಂತಿದೆ ಅದೊಂದು ಮೂಲ..! ಅದೊಂದು ಫ್ಯಾಕ್ಟರ್..? ನಿಮಗೆ, 2018 ರ ವಿಧಾನಸಭಾ ಚುನಾವಣೆಯ ಒಂದಿಷ್ಟು ರಣರೋಚಕ ಸಂಗತಿ ಹೇಳಲೇಬೇಕಿದೆ. ಅವತ್ತು ಬಿಜೆಪಿ ಅಭ್ಯರ್ಥಿಯಾಗಿದ್ದ ವಿ.ಎಸ್.ಪಾಟೀಲ್, ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಿವರಾಮ್ ಹೆಬ್ಬಾರ್ ವಿರುದ್ಧ ಕೂದಲೆಳೆ ಅಂತರದಿಂದ ಸೋತು ಮನೆ ಹಿಡಿಯುವಂತಾಗಿತ್ತು. ಅಸಲಿಗೆ, ಅವತ್ತು ವಿ.ಎಸ್.ಪಾಟೀಲರ ಸೋಲಿನ ಹಿಂದೆ ಅದೊಂದು ಫ್ಯಾಕ್ಟರ್ ಇನ್ನಿಲ್ಲದಂತೆ ಕೆಲಸ ಮಾಡಿತ್ತು ಅನ್ನೋದು ಖುದ್ದು ಪಾಟೀಲರಿಗೂ ಅರ್ಥವಾಗಿತ್ತು. ಆ ಹೊತ್ತಲ್ಲಿ ಅದೊಂದು ಪ್ರಬಲ ಸಮುದಾಯ ಬಿಜೆಪಿಗೆ ಇನ್ನಿಲ್ಲದಂತೆ ಗುದ್ದು ಕೊಟ್ಟಿತ್ತು. ಯಡಿಯೂರಪ್ಪನವರ ಅದ್ಯಾವುದೋ ಒಂದು ಮಾತು ಆ ಸಮುದಾಯದ...
ಮುಂಡಗೋಡ ಬಳಿ ಬೈಕ್- ಕಾರ್ ನಡುವೆ ಮುಖಾಮುಕಿ ಡಿಕ್ಕಿ, ಲಕ್ಕೊಳ್ಳಿಯ ಬೈಕ್ ಸವಾರ ಗಂಭೀರ..!
ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ಹೊಂಡಾ ಶೋ ರೂಂ ಬಳಿ ಭೀಕರ ಅಪಘಾತವಾಗಿದೆ. ಕಾರ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಮುಂಡಗೋಡ ತಾಲೂಕಿನ ಲಕ್ಕೊಳ್ಳಿ ಗ್ರಾಮದ ಮಹೇಶ್ ಪುಂಡಲೀಕ್ ಅರ್ಕಸಾಲಿ(53) ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳು ಸ್ಥಿತಿ ಚಿಂತಾಜನಕವಾಗಿದ್ದು ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಿಒಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಶಿರಸಿ ಕಡೆಯಿಂದ ಬರುತ್ತಿದ್ದ ಕಾರ್ ಹಾಗೂ ಮುಂಡಗೋಡ ಕಡೆಯಿಂದ ಹೊರಟಿದ್ದ ಬೈಕ್ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನು ಗಾಯಾಳುಗಳನ್ನು 108 ಅಂಬ್ಯಲೆನ್ಸ್ ಸಿಬ್ಬಂದಿಗಳಾದ ಧನರಾಜ್ ಹಾಗೂ ಚಾಲಕ ಕೆಂಚೇಶ್ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಮುಂಡಗೋಡ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿ.ಎಸ್.ಪಾಟೀಲ್ “ಕೈ”ವಶ ಆಗ್ತಿದ್ದಂತೆ, ತಲೆ ಕೆಳಗಾಯ್ತಾ ಲೆಕ್ಕಾಚಾರ..? ಬೆವರುತ್ತಿದೆಯಾ ಬಿಜೆಪಿ..?
ಯಲ್ಲಾಪುರ ಕ್ಷೇತ್ರದ ಬಿಜೆಪಿಗೆ ಮರ್ಮಾಘಾತವಾಗಿದೆ. ಮಾಜಿ ಶಾಸಕ ವಿ.ಎಸ್.ಪಾಟೀಲ್ ಪಕ್ಷ ತೊರೆಯೋದು ಕನ್ಫರ್ಮ್ ಆಗಿದೆ. ಬಿಜೆಪಿ ತೊರೆದು ಇನ್ನೇನು ಕಾಂಗ್ರೆಸ್ ಸೇರಲು ಪಾಟೀಲರು ತುದಿಗಾಲಲ್ಲಿ ನಿಂತಾಗಿದೆ. ಹೀಗಾಗಿ, ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಅದೊಂದು ರೀತಿಯ ಸಂಚಲನಕ್ಕೆ ಕಾರಣವಾಗಿದೆ. ವಲಸಿಗರು ಹಾಗೂ ಮೂಲ ಬಿಜೆಪಿಗರ ನಡುವಿನ ಕಾಳಗಕ್ಕೆ ರಣಾಂಗಣ ಸಿದ್ದವಾಗ್ತಿದೆ. ಇದ್ರೊಂದಿಗೆ ಕಳೆದ ನಾಲ್ಕು ತಿಂಗಳ ಹಿಂದೆಯೇ “ಪಬ್ಲಿಕ್ ಫಸ್ಟ್” ನುಡಿದಿದ್ದ ಭವಿಷ್ಯ ನಿಜವಾಗಿದೆ. ಸಂಭಾವಿತ ರಾಜಕಾರಣಿ..! ಅಸಲು, ವಿ.ಎಸ್.ಪಾಟೀಲ್ ಉತ್ತರ ಕನ್ನಡ ಕಂಡ ಸಂಭಾವಿತ ರಾಜಕಾರಣಿ, ಯಾವತ್ತಿಗೂ ಅಧಿಕಾರದ ದರ್ಪ ತೋರಿದವರೇ ಅಲ್ಲ. ಮಾತಿಗಿಂತ ಕೃತಿಯಲ್ಲೇ ತಾವು ಏನು ಅಂತಾ ತೋರಿಸಿಕೊಟ್ಟವರು ಇವ್ರು. ಮೊದಲ ಬಾರಿ ಶಾಸಕರಾಗಿದ್ದಾಗ, ಇಡೀ ಕ್ಷೇತ್ರದಲ್ಲಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳು ಇವತ್ತಿಗೂ ಮಾದರಿ. ಹೀಗಾಗಿನೇ ಪಾಟೀಲರೆಂದ್ರೆ ಇವತ್ತಿಗೂ ಕ್ಷೇತ್ರದಲ್ಲಿ ಅಪ್ಪಿಕೊಳ್ಳುವ ಅಪ್ಪಟ ಅಭಿಮಾನಿಗಳಿದ್ದಾರೆ. ಇದು ಎಲ್ರಿಗೂ ಗೊತ್ತು. ಈ ಕಾರಣಕ್ಕಾಗೇ ಪಾಟೀಲರು ಕಳೆದ ಚುನಾವಣೆಯಲ್ಲಿ ಸೋತು ಗೆದ್ದಿದ್ದರು. ಪಕ್ಷಕ್ಕಾಗಿ ತಮ್ಮ ಕ್ಷೇತ್ರವನ್ನೇ ತ್ಯಾಗ ಮಾಡಿದ್ದರು....
ವಿ.ಎಸ್.ಪಾಟೀಲರಿಂದ NWKSRTC ಅಧ್ಯಕ್ಷ ಸ್ಥಾನ ಕಿತ್ತುಕೊಂಡ ಸಿಎಂ, ಅಷ್ಟಕ್ಕೂ, ಪಾಟೀಲ್ರು ಏನಂದ್ರು..?
ಮುಂಡಗೋಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸ್ಥಾನದಿಂದ ವಿ.ಎಸ್.ಪಾಟೀಲ್ ರನ್ನು ಔಟ್ ಮಾಡಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಬಿಜೆಪಿ ಮಾಜಿ ಶಾಸಕ ಹಾಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿದ್ದ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಗೊಳ್ಳುವ ತೀರ್ಮಾನ ಕೈಗೊಂಡಿದ್ರು. ಹೀಗಾಗಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲೂ ಮುಂದಾಗಿದ್ರು. ಆದ್ರೆ ಇವತ್ತು ಏಕಾಏಕಿ ಸಿಎಂ ಬಸವರಾಜ್ ಬೊಮ್ಮಾಯಿ ಅಧ್ಯಕ್ಷ ಸ್ಥಾನದಿಂದ ವಿ.ಎಸ್.ಪಾಟೀಲರನ್ನು ಕೆಳಗಿಳಿಸಿ ಆದೇಶ ಹೊರಡಿಸಿದ್ದಾರೆ. ವಿ.ಎಸ್.ಪಾಟೀಲ್ ಫಸ್ಟ್ ರಿಯಾಕ್ಷನ್..! ಇನ್ನು, ವಿ.ಎಸ್.ಪಾಟೀಲರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಸಿರೋ ಆದೇಶಕ್ಕೆ ಸಂಬಂಧಿಸಿದಂತೆ ಪಾಟೀಲರು ಪಬ್ಲಿಕ್ ಫಸ್ಟ್ ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು. ನಾನು ಈಗಾಗಲೇ ರಾಜೀನಾಮೆ ನೀಡಲು ರೆಡಿಯಿದ್ದಿನಿ ಅಂತಾ ಮೊದಲೇ ತಿಳಿಸಿದ್ದೆ. ಅಷ್ಟೊತ್ತಿಗಾಗಲೇ ಸಿಎಂ ಇಂತಹ ತೀರ್ಮಾನ ಪಡೆದಿದ್ದು ಸರಿಯಲ್ಲ ಅಂತಾ ತಿಳಿಸಿದ್ರು. ಒಬ್ಬ ಮಾಜಿ ಶಾಸಕನಿಗೆ ಬಿಜೆಪಿ ಈ ರೀತಿ ಮಾಡತ್ತೆ ಅಂತಾ ಅಂದುಕೊಂಡಿರಲಿಲ್ಲ ಅಂತಾ ಖೇದ ವ್ಯಕ್ತಪಡಿಸಿದ್ರು.
ಟಿಬೇಟಿಯನ್ ಕಾಲೋನಿಯಲ್ಲಿ ಗಾಂಜಾ ಘಾಟು, ನಶೆಗಾಗಿ ಇಲ್ಲಿ ಏನೇಲ್ಲ ಬಳಸ್ತಾರೆ ಗೊತ್ತಾ..?
ಮುಂಡಗೋಡ: ಟಿಬೇಟಿಯನ್ ಕಾಲೋನಿಯಲ್ಲಿ ಸ್ವಾತಂತ್ರೋತ್ಸವದ 75 ನೇ ಅಮೃತ ಮಹೋತ್ಸವದ ದಿನವೇ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ರು. ಅವತ್ತು ಬರೋಬ್ಬರಿ 84 ಸಾವಿರ ಮೌಲ್ಯದ 6 ಕೆಜಿ ತೂಗುವ ಹಸಿ ಹಸಿ ಗಾಂಜಾ ವಶಕ್ಕೆ ಪಡೆದಿದ್ರು. ಅಸಲು, ಅವತ್ತು ಹಾಗೆ ಗಾಂಜಾದೊಂದಿಗೆ ಪೊಲೀಸರ ಬಲೆಗೆ ಬಿದ್ದಿದ್ದವನು ಟಿಬೇಟಿಗನಾಗಿದ್ದ. ನಶೆಯ ಜಗತ್ತಿನ ಎಜೆಂಟ್ ಆಗಿದ್ದ. ಇದ್ರೊಂದಿಗೆ, ಮುಂಡಗೋಡಿನ ಟಿಬೇಟಿಯನ್ ಕಾಲೋನಿಯಲ್ಲಿ ನಶೆಯ ಗುಂಗು ಹಿಡಿಸುವವನಾಗಿದ್ದ. ನಿಜ ಅಂದ್ರೆ…. ಟಿಬೇಟಿಯನ್ ಕಾಲೋನಿಯ ಗಲ್ಲಿಗಳಲ್ಲಿ ಕಾಲಿಟ್ರೆ ಆಮ್ಲಜನಕ ಅದೇಷ್ಟು ಸಿಗತ್ತೋ ಗೊತ್ತಿಲ್ಲ. ಆದ್ರೆ, ಸಿಗರೇಟಿನ ಘಮ್ಮು ವಾಸನೆ ಗಬ್ಬೆಬ್ಬಿಸಿರತ್ತೆ. ಇಲ್ಲಿ ಹೈಸ್ಕೂಲಿಗೆ ಹೋಗುವ ಕೆಲವು ವಿದ್ಯಾರ್ಥಿಗಳೂ ಕೂಡ ಮಾದಕ ಜಗತ್ತಿನ ದಾಸರಾಗಿರ್ತಾರೆ ಅನ್ನೋದು ದುರಂತ. ಅಸಲಿಗೆ, ಟಿಬೇಟಿಗರಲ್ಲಿ ಹಿರಿಯರು ಶ್ರಮ ಜೀವಿಗಳಾಗಿರ್ತಾರೆ. ಬೆಳಗಾಯಿತೆಂದ್ರೆ ಕೆಲಸ ಕೆಲಸ ಅಂತಾ ಬೆವರು ಹರಿಸೋರೂ ಇರ್ತಾರೆ. ಆದ್ರೆ, ಇಲ್ಲಿನ ಕೆಲ ಯುವ ಪಡೆ ಮಾತ್ರ ನಶೆಯ ಗುಂಗಿನಲ್ಲೇ ತೇಲಾಡುವ ಚಟ ಹಚ್ಚಿಕೊಂಡಿದೆ ಎನ್ನುವ ಮಾತುಗಳಿವೆ. ಈ ಕಾರಣಕ್ಕಾಗೇ,...