ವಿ.ಎಸ್.ಪಾಟೀಲ್ “ಕೈ”ವಶ ಆಗ್ತಿದ್ದಂತೆ, ತಲೆ ಕೆಳಗಾಯ್ತಾ ಲೆಕ್ಕಾಚಾರ..? ಬೆವರುತ್ತಿದೆಯಾ ಬಿಜೆಪಿ..?


ಯಲ್ಲಾಪುರ ಕ್ಷೇತ್ರದ ಬಿಜೆಪಿಗೆ ಮರ್ಮಾಘಾತವಾಗಿದೆ. ಮಾಜಿ ಶಾಸಕ ವಿ.ಎಸ್.ಪಾಟೀಲ್ ಪಕ್ಷ ತೊರೆಯೋದು ಕನ್ಫರ್ಮ್ ಆಗಿದೆ. ಬಿಜೆಪಿ ತೊರೆದು ಇನ್ನೇನು ಕಾಂಗ್ರೆಸ್ ಸೇರಲು ಪಾಟೀಲರು ತುದಿಗಾಲಲ್ಲಿ ನಿಂತಾಗಿದೆ. ಹೀಗಾಗಿ, ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಅದೊಂದು ರೀತಿಯ ಸಂಚಲನಕ್ಕೆ ಕಾರಣವಾಗಿದೆ. ವಲಸಿಗರು ಹಾಗೂ ಮೂಲ ಬಿಜೆಪಿಗರ ನಡುವಿನ ಕಾಳಗಕ್ಕೆ ರಣಾಂಗಣ ಸಿದ್ದವಾಗ್ತಿದೆ. ಇದ್ರೊಂದಿಗೆ ಕಳೆದ ನಾಲ್ಕು ತಿಂಗಳ ಹಿಂದೆಯೇ “ಪಬ್ಲಿಕ್ ಫಸ್ಟ್” ನುಡಿದಿದ್ದ ಭವಿಷ್ಯ ನಿಜವಾಗಿದೆ.


ಸಂಭಾವಿತ ರಾಜಕಾರಣಿ..!
ಅಸಲು, ವಿ.ಎಸ್.ಪಾಟೀಲ್ ಉತ್ತರ ಕನ್ನಡ ಕಂಡ ಸಂಭಾವಿತ ರಾಜಕಾರಣಿ, ಯಾವತ್ತಿಗೂ ಅಧಿಕಾರದ ದರ್ಪ ತೋರಿದವರೇ ಅಲ್ಲ. ಮಾತಿಗಿಂತ ಕೃತಿಯಲ್ಲೇ ತಾವು ಏನು ಅಂತಾ ತೋರಿಸಿಕೊಟ್ಟವರು ಇವ್ರು. ಮೊದಲ ಬಾರಿ ಶಾಸಕರಾಗಿದ್ದಾಗ, ಇಡೀ‌ ಕ್ಷೇತ್ರದಲ್ಲಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳು ಇವತ್ತಿಗೂ ಮಾದರಿ. ಹೀಗಾಗಿನೇ ಪಾಟೀಲರೆಂದ್ರೆ ಇವತ್ತಿಗೂ ಕ್ಷೇತ್ರದಲ್ಲಿ ಅಪ್ಪಿಕೊಳ್ಳುವ ಅಪ್ಪಟ ಅಭಿಮಾನಿಗಳಿದ್ದಾರೆ. ಇದು ಎಲ್ರಿಗೂ ಗೊತ್ತು. ಈ ಕಾರಣಕ್ಕಾಗೇ ಪಾಟೀಲರು ಕಳೆದ ಚುನಾವಣೆಯಲ್ಲಿ ಸೋತು ಗೆದ್ದಿದ್ದರು. ಪಕ್ಷಕ್ಕಾಗಿ ತಮ್ಮ ಕ್ಷೇತ್ರವನ್ನೇ ತ್ಯಾಗ ಮಾಡಿದ್ದರು.

ಮೂಲೆಗುಂಪು..!
ಅಂದಹಾಗೆ, ಯಾವಾಗ, ವಿ.ಎಸ್.ಪಾಟೀಲರು ಬದಲಾದ ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ಕ್ಷೇತ್ರ ಬಿಟ್ಟುಕೊಟ್ಟರೋ ಅವಾಗಲೇ ಕ್ಷೇತ್ರದಲ್ಲಿ ಇನ್ನಿಲ್ಲದ “ದಬ್ಬಾ”ಳಿಕೆ ಅನುಭವಿಸಬೇಕಾಯ್ತು. ಹಾಗಂತ ಖುದ್ದು ಪಾಟೀಲರೇ ನೋವಿನಲ್ಲಿ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ನಿಂದ ಜಂಪ್ ಮಾಡಿ ಬಿಜೆಪಿ ಪಡಸಾಲೆ ಸೇರಿಕೊಂಡಿದ್ದ ಶಿವರಾಮ್ ಹೆಬ್ಬಾರ್ ಗೆ ಯಲ್ಲಾಪುರ ಕ್ಷೇತ್ರ ಬಿಟ್ಟು ಕೊಡಬೇಕಾಯ್ತು. ಆದ್ರೆ, ಹಾಗೆ ಕ್ಷೇತ್ರ ಬಿಟ್ಟುಕೊಟ್ಟ ನಂತ್ರ ಪಾಟೀಲರಿಗೆ ಸಿಗಬೇಕಾದ ಯಾವ ಗೌರವಗಳೂ ಸಿಗಲೇ ಇಲ್ವಂತೆ. ಪಾಟೀಲರಿಗೆ ಹೋಗಲಿ, ಪಾಟೀಲರ ಬೆಂಬಲಿಗರಿಗೂ ಸದ್ಯದ ಬಿಜೆಪಿ ವಲಸಿಗ ಬಳಗ ಕವಡೆ ಕಾಸಿನ ಕಿಮ್ಮತ್ತೂ ನೀಡಲಿಲ್ಲವಂತೆ. ಹೀಗಾಗಿ, ಇಲ್ಲಿದ್ರೆ ಸರಿಯಿರಲ್ಲ ಅಂತಾ ಬೆಂಬಲಿಗರ ಹಾಗೂ ಅಭಿಮಾನಿಗಳ ಜೊತೆ ಪಕ್ಷ ಬಿಡುವ ದೊಡ್ಡ ತೀರ್ಮಾನ ಕೈಗೊಳ್ಳುವ ಅನಿವಾರ್ಯತೆಗೆ ಬಂದಿದ್ದಾರೆ.

ದೊಡ್ಡ ಹೊಡೆತ..!
ನಿಜ ಅಂದ್ರೆ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯ ಸದ್ಯದ ಪರಿಸ್ಥಿತಿ ತೀರ ಅನ್ನುವಷ್ಟು ಕೆಟ್ಟು ಹೋಗಿದೆ. ಅದೇಷ್ಟೋ ಅತೃಪ್ತ ಆತ್ಮಗಳು ಅಂತಹದ್ದೊಂದು ಸಮಯಕ್ಕಾಗಿ‌ ಕಾದು ಕುಳಿತಿವೆ. ಹೆಬ್ಬಾರ್ ಪಡೆ ಅದೇನೇ ತಿಪ್ಪರಲಾಗ ಹಾಕಿದ್ರು ಬರುವ ಚುನಾವಣೆಯಲ್ಲಿ “ಗೆಲುವು” ಸುಲಭದ ಮಾತಾಗಿ ಉಳಿದಿಲ್ಲ‌. ಹಣದಿಂದಲೇ ಎಲ್ಲಾ ಅನ್ನುವ ಕಾಲವೂ ಈಗ ವರ್ಕೌಟ್ ಆಗುವ ಯಾವ ಲಕ್ಷಣಗಳೂ ಇಲ್ಲ. ಇದು ರಾಜ್ಯ ಬಿಜೆಪಿ ನಡೆಸಿರೋ ಮೂರು ಮೂರು ಸರ್ವೆಗಳಲ್ಲೂ ಮನದಟ್ಟಾಗಿದೆ. ಅಸಲು, ಇಲ್ಲಿನ ಮತದಾರ ಬದಲಾವಣೆ ಬಯಸುತ್ತಿರೋ ಸೂಚನೆ ಸಿಕ್ಕಿದೆ. ಹೀಗಾಗಿ, ವಿ.ಎಸ್.ಪಾಟೀಲರು ಬಿಜೆಪಿ ತೊರೆದಿದ್ದು ಮತ್ತಷ್ಟು ಹೊಡೆತ ಕೊಟ್ಟಿದೆ.

ಅದೃಷ್ಟ ಖುಲಾಯಿಸತ್ತಾ..?
ಅಷ್ಟಕ್ಕೂ, ವಿ.ಎಸ್.ಪಾಟೀಲರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರೋ ಹಿಂದೆ ಸಾಕಷ್ಟು ಲೆಕ್ಕಾಚಾರಗಳಿವೆ. ಕ್ಷೇತ್ರದಲ್ಲಿ ಪ್ರಬಲವಾಗಿರೋ ಲಿಂಗಾಯತ ಮತಗಳು ಈ ಬಾರಿ ಬಿಜೆಪಿಗೆ ದಕ್ಕುವ ಯಾವ ಸಾಧ್ಯತೆಗಳೂ ಉಳಿದಿಲ್ಲ. ಯಾಕಂದ್ರೆ, ಈಗಾಗಲೇ ಕ್ಷೇತ್ರದ, ಅದ್ರಲ್ಲೂ ಮುಂಡಗೋಡ ತಾಲೂಕಿನ ಹಳ್ಳಿಗಳಲ್ಲಿ ವಿ.ಎಸ್.ಪಾಟೀಲರು ನಡೆದ ಹೆಜ್ಜೆಗಳಲ್ಲಿ ಹೆಜ್ಜೆ ಇಡುವ ತೀರ್ಮಾನ ಆಗಿಬಿಟ್ಟಿದೆ. ಅಸಲು, ಪಾಟೀಲರ ಚಾಣಾಕ್ಷತನ ಭಾರೀ ಕೆಲಸ ಮಾಡಿದೆ. ಕಾಂಗ್ರೆಸ್ ಸೇರುವ ತೀರ್ಮಾನ ಯಾವಾಗ ಮೊಳಕೆಯೊಡೆಯಿತೋ ಆ ಕ್ಷಣವೇ ಒಳಗೊಳಗೇ ಕ್ಷೇತ್ರದ ಪ್ರತೀ ಹಳ್ಳಿಗಳ ಅಂಗಳಕ್ಕೂ ಕಾಲಿಟ್ಟಿದ್ದಾರೆ ಪಾಟೀಲರು. ಯಾರಿಗೂ ನಿಲುಕದ, ಖುದ್ದು ಹೆಬ್ಬಾರ್ ಅಕ್ಕಪಕ್ಕದಲ್ಲೇ ಇರೋ ಅದೇಷ್ಟೋ ಅತೃಪ್ತರು ಪಾಟೀಲರೊಂದಿಗೆ “ಆಂತರ್ಯದ” ಬೆಂಬಲ ಕೊಟ್ಟಾಗಿದೆ. ಬಲ ತುಂಬಿಯಾಗಿದೆ. ಜೊತೆಗೆ ಅನುಕಂಪದ ಬಹುದೊಡ್ಡ ಬಲ ಪಾಟೀಲರ ಬೆನ್ನಿಗಿದೆ. ಹೀಗಾಗಿನೇ ವಿ.ಎಸ್.ಪಾಟೀಲರು ಕಾಂಗ್ರೆಸ್ ಸೇರುವ ಬಹುದೊಡ್ಡ ತೀರ್ಮಾನಕ್ಕೆ ಬಂದು‌ ನಿಂತಿದ್ದಾರೆ. ಒಂದು ವೇಳೆ, ಪಾಟೀಲರು ಕಾಂಗ್ರೆಸ್ ಟಿಕೆಟ್ ಸಿಕ್ಕು ಕಣದಲ್ಲಿ ಸೆಡ್ಡು ಹೊಡೆದ್ರೆ ಮುಗೀತು ಬಹುತೇಕ ಅದೃಷ್ಟ ಖುಲಾಯಿಸಿದಂತೆಯೇ ಅನ್ನೊ ಮಾತುಗಳೂ ಕೇಳಿ ಬರ್ತಿದೆ.

ಅದೇನೇ ಇರಲಿ, ಬರುವ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರ ಹೈ ವೋಲ್ಟೇಜ್ ಕಣವಾಗೋದ್ರಲ್ಲಿ ಎರಡು ಮಾತೇ ಇಲ್ಲ. ಅದೇನೇ ತಿಪ್ಪರಲಾಗ ಹಾಕಿದ್ರೂ ಬಿಜೆಪಿಯನ್ನು ಬಿಜೆಪಿಗರೇ ಕಟ್ಟಿ ಹಾಕುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗುತ್ತಿದೆ.

error: Content is protected !!