ಮುಂಡಗೋಡ ತಾಲೂಕಿನ ಮರಾಠಾ ಮುಖಂಡ, ತಾಲೂಕಿನ ಬಿಜೆಪಿ ನಾಯಕ, ಎಲ್. ಟಿ. ಪಾಟೀಲ್ ಒಳಗೊಳಗೆ ಕಿಚ್ಚು ಹೊತ್ತಿಸಿಕೊಂಡು ಕೂತಿದ್ದಾರೆ. ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯ ಸದ್ಯದ ಸ್ಥಿತಿಗತಿಗಳ ಬಗ್ಗೆ ಆತಂಕಗೊಂಡಿದ್ದಾರೆ. ಜೊತೆಗೆ ಸದ್ಯ ಖಾಲಿಯಿರೋ NWKSRTC ಅಧ್ಯಕ್ಷಗಿರಿ ದಕ್ಕದೇ ಹೋದ್ರೆ ಬಿಜೆಪಿಗೆ ಠಕ್ಕರ್ ಕೊಡುವ ಸಾತ್ವಿಕ ಎಚ್ಚರಿಕೆ ನೀಡಿದ್ದಾರೆ.
ಕ್ಷೇತ್ರದ ಬಿಜೆಪಿ ಸಂಕಷ್ಟದಲ್ಲಿ..!
ಅಸಲು, ಬಿಜೆಪಿ ಮುಖಂಡ ಎಲ್.ಟಿ.ಪಾಟೀಲರೇ ನೇರವಾಗಿ ಪಬ್ಲಿಕ್ ಫಸ್ಟ್ ಎದುರು ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ಶಿವರಾಮ್ ಹೆಬ್ಬಾರ್ ಪಡೆಯೊಳಗೇ ಗುರುತಿಸಿಕೊಂಡಿರೋ ಎಲ್ಟಿ ಪಾಟೀಲರು ಅದ್ಯಾಕೋ ಎನೋ ಸದ್ಯದ ಬಿಜೆಪಿಯೊಳಗಿನ ನೆಗೆಟಿವ್ ಅಂಶಗಳನ್ನು ಬಾಯಿಬಿಟ್ಟಿದ್ದಾರೆ. ಹೀಗೇ ಮುಂದುವರೆದ್ರೆ ಬರುವ ಚುನಾವಣೆಯಲ್ಲಿ ಬಿಜೆಪಿಗೆ ನೆಲೆ ಸಿಗೋದೇ ಕಷ್ಟ ಅಂತಿದ್ದಾರೆ. ಅಸಲು, ಇಂತಹದ್ದೊಂದು ಮನದಾಳದ ನೋವು ಮತ್ತು ಆಕ್ರೋಶ ಹೊರಹಾಕುವ ಹಿಂದೆ ಎಲ್ಟಿ ಪಾಟೀಲರು ಅನುಭವಿಸಿರೋ ಒಳಗೊಳಗಿನ ನಿರ್ಲಕ್ಷ ಹಾಗೂ ಕೆಲವೇ ಕೆಲವು ನಾಯಕರೆನಿಸಿಕೊಂಡವರ ಹುಂಬ ರಾಜಕೀಯ ಕಾರಣವಾಗ್ತಿದೆಯಾ ಅನ್ನೋ ಅನುಮಾನ ಶುರುವಾಗಿದೆ.
ಬರೀ ಬ್ರಷ್ಟಾಚಾರ..!
ನಿಜ ಅಂದ್ರೆ, ಯಲ್ಲಾಪುರ ಕ್ಷೇತ್ರದಲ್ಲಿ ಅದ್ರಲ್ಲೂ ಮುಂಡಗೋಡ ತಾಲೂಕಿನಲ್ಲಿ ಬ್ರಷ್ಟಾಚಾರವನ್ನು ಪೋಶಿಸಲಾಗ್ತಿದೆಯಂತೆ. ಹಾಗಂತ ಎಲ್ಟಿ ಪಾಟೀಲರು ನೇರವಾಗಿ ಹೇಳ್ತಿದಾರೆ. ತಾಲೂಕಿನ ಸರ್ಕಾರಿ ಕಛೇರಿಗಳಲ್ಲಿ ಬ್ರಷ್ಟಾಚಾರ ತಾಂಡವವಾಡ್ತಿದೆ. ಅದ್ರಲ್ಲೂ ಹೆಬ್ಬಾರ್ ನೆರಳಲ್ಲೇ ತಮ್ಮ ಬೇಳೆ ಬೇಯಿಸಿಕೊಳ್ಳೊ ಕೆಲವು ನಾಯಕರೆನಿಸಿಕೊಂಡವರು ಬರೀ ದುಡ್ಡು ಮಾಡಲು ನಿಂತಿದ್ದಾರೆ. ಅದನ್ನ ನಾನು ಸಾಕಷ್ಟು ಬಾರಿ ಹೆಬ್ಬಾರ್ ಸಾಹೇಬ್ರ ಗಮನಕ್ಕೆ ತಂದಿದ್ದೇನೆ, ಆದ್ರೆ ಅದ್ಯಾಕೋ ಗೊತ್ತಿಲ್ಲ ಸಾಹೇಬ್ರೂ ಕೂಡ ಮೌನವಾಗಿದ್ದಾರೆ ಅಂತಾ ನೋವು ವ್ಯಕ್ತ ಪಡಿಸ್ತಿದಾರೆ. ಹೀಗೇ ಆದ್ರೆ ಬರುವ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಭಾರೀ ತೊಡಕಾಗಲಿದೆ ಅನ್ನೋ ಸೂಕ್ಷ್ಮ ಎಚ್ಚರಿಕೆಯನ್ನೂ ನೀಡಿದ್ದಾರೆ.
ನಂಗೂ ಆಸೆಯಿದೆ..!
ಕಾಂಗ್ರೆಸ್ ನಲ್ಲಿ ಪ್ರಭಾವಿ ಸ್ಥಾನದಲ್ಲಿ ಗಟ್ಟಿಮುಟ್ಟಾಗಿದ್ದ ಎಲ್ಟಿ ಪಾಟೀಲರು ಅದ್ಯಾವಾಗ ಬಿಜೆಪಿ ಸೇರಿಕೊಂಡ್ರೋ ಆ ಕ್ಷಣದಿಂದಲೇ ಅವ್ರನ್ನ ಅಪ್ಪಿಕೊಂಡ ಸಾಹಿರಾರು ಸಂಖ್ಯೆಯ ಅಭಿಮಾನಿಗಳಿದ್ರು. ಅದು ಹೇಗೋ ಪಾಟೀಲರು ಅನಂತಣ್ಣ ಕಟ್ಟಾಜ್ಞೆಯಂತೆ ಬುಜೆಪಿಯಲ್ಲಿ ಸಕ್ರೀಯಗೊಂಡಿದ್ದರು. ಆದ್ರೆ, ಯಾವಾಗ ಶಿವರಾಮ್ ಹೆಬ್ಬಾರ್ ಬದಲಾದ ರಾಜಕೀಯ ಸ್ಥಿತಿಯಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದು ಕುಳಿತ್ರೋ ಆ ಕ್ಷಣದಿಂದಲೇ ಒಂದುರೀತಿಯಲ್ಲಿ ಮೂಲೆಗುಂಪಾಗುವ ಹಂತಕ್ಕೆ ತಂದು ನಿಲ್ಲಿಸಲಾಯಿತು. ಹಾಗಂತ, ಎಲ್ಟಿ ಪಾಟೀಲರೇ ನೋವಿನಲ್ಲಿ ತೋಡಿಕೊಂಡಿದ್ದಾರೆ. ಮನಸಲ್ಲಿ ಬೆಟ್ಟದಷ್ಟು ನೋವಿದೆ, ನಿರಾಶೆಯಿದೆ, ಸಚಿವ ಶಿವರಾಮ್ ಹೆಬ್ಬಾರ್ ಜೊತೆ ಹೊಂದಿಕೊಂಡು ಹೋಗ್ತಿದಾರೆ ಎಲ್ಟಿ.. ಸದ್ಯ NWKSRTC ಅಧ್ಯಕ್ಷ ಪದವಿ ದಕ್ಕದೇ ಹೋದ್ರೆ ಮುಗೀತು, ಶಿವರಾಮ್ ಹೆಬ್ಬಾರ್ ಸಾಹೇಬ್ರ ಜೊತೆಗಿನ ಸಂಬಂಧಕ್ಕೂ ಕೊಡಲಿ ಪೆಟ್ಟು ಬೀಳೋದ್ರಲ್ಲಿ ಅನುಮಾನವೇ ಇಲ್ಲ. ಈ ಮಾತನ್ನ ಪರೋಕ್ಷವಾಗೇ ಎಲ್ಟಿ ಪಾಟೀಲ್ ಪಬ್ಲಿಕ್ ಫಸ್ಟ್ ಎದುರು ಹೇಳಿಕೊಂಡಿದ್ದಾರೆ.
ಹಾಗಾದ್ರೆ, ಬಿಜೆಪಿ ಪ್ರಭಾವಿ ಮುಖಂಡ ಎಲ್ಟಿ ಪಾಟೀಲರು ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ಏನೇಲ್ಲ ಮನದಾಳದ ಭಾವನೆಗಳನ್ನು ಹಂಚಿಕೊಂಡಿದ್ದಾರೆ..? ಅವ್ರ ಜೊತೆ ನಡೆಸಿರೋ ಸಂದರ್ಶನಗಳ ತುಣುಕುಗಳು ಇಲ್ಲಿವೆ ನೋಡಿ..