ಮುಂಡಗೋಡ: ಬಂಜಾರಾ ಸಮುದಾಯದ ಪವಿತ್ರ ಕ್ಷೇತ್ರ ಸಂತ ಶ್ರೀ ಸೇವಾಲಾಲರ ಜನ್ಮಸ್ಥಳ ಸೂರಗೊಂಡನಕೊಪ್ಪದ ಬಾಯಾಗಢನಲ್ಲಿ RSS ನವರು ನಡೆಸುತ್ತಿರೋ ಶಿಬಿರಕ್ಕೆ ಬಂಜಾರಾ ಸಮುದಾಯದ ಕೆಲವು ಮುಖಂಡರು ವಿರೋಧ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ, ಹೀಗೆ RSS ನ ಶಿಬಿರವನ್ನು ವಿರೋಧಿಸುವುದು ಸರಿಯಲ್ಲ, ಶಿಬಿರ ನಡೆಯುವಂತಾಗಲಿ ಅಂತಾ ಮುಂಡಗೋಡಿನ ಬಂಜಾರಾ ಮುಖಂಡ, ಪಟ್ಟಣ ಪಂಚಾಯತಿ ಸದಸ್ಯ ಶೇಖರ್ ಲಮಾಣಿ ಆಗ್ರಹಿಸಿದ್ದಾರೆ.
RSS ಬಗ್ಗೆ ಅರಿವಿದೆ..!
ನಮಗೆ RSS ಬಗ್ಗೆ ಅರಿವಿದೆ. ದೇಶಭಕ್ತಿಯನ್ನು ಜಾಗ್ರತಗೊಳಿಸಿ, ಯುವಕರನ್ನು ದೇಶಭಕ್ತಿಯೆಡೆಗೆ ಸಂಘಟಿಸುವುದೇ RSS ಆಗಿದೆ. ನಾನೂ ಕೂಡ RSS ನ ಸಂಪೂರ್ಣ ಸಿದ್ದಾಂತಗಳನ್ನು ತಿಳಿದುಕೊಂಡಿದ್ದೇನೆ. ಹೀಗಾಗಿ, ನಮ್ಮ ಬಂಜಾರಾ ಸಮುದಾಯದವರು ಹೀಗೆ RSS ಬಗ್ಗೆ ಇಲ್ಲಸಲ್ಲದ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದ ಹೊರ ಬರಬೇಕು. ಸೂರಗೊಂಡನಕೊಪ್ಪದ ಬಾಯಗಡನಲ್ಲಿ ಶಿಬಿರ ನಡೆಯುವಂತಾಗಬೇಕು, ಆ ಶಿಬಿರಕ್ಕೆ ಯಾರೂ ವಿರೋಧ ವ್ಯಕ್ತ ಪಡಿಸಬೇಡಿ ಅಂತಾ ಬಂಜಾರಾ ಸಮುದಾಯಕ್ಕೆ ಶೇಖರ್ ಲಮಾಣಿ ಮನವಿ ಮಾಡಿದ್ದಾರೆ.
ಮತಾಂತರ ತಡೆದದ್ದೇ RSS..!
ಇನ್ನು ಬಂಜಾರಾ ಸಮುದಾಯದ ಬಡವರನ್ನೇ ಟಾರ್ಗೆಟ್ ಮಾಡಿಕೊಂಡು ಕೆಲವು ಕ್ರಿಶ್ಚಿಯನ್ ಮಶಿನರಿಗಳು ಮತಾಂತರ ಮಾಡುತ್ತಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ನಮ್ಮ ಬಂಜಾರಾ ಸಮುದಾಯದ ಯುವಕರು, ಮಹಿಳೆಯರು ಮತಾಂತರಗೊಂಡಿದ್ದರು. ಆದ್ರೆ ಅದೇ ಸಮಯದಲ್ಲಿ RSS ನಮ್ಮ ಯುವಕರಿಗೆ, ಮಹಿಳೆಯರಿಗೆ ಬಂಜಾರಾ ಸಂಪ್ರದಾಯಗಳ ಕುರಿತು ಸಾಕಷ್ಟು ತಿಳುವಳಿಕೆ ನೀಡಿ, ಮತ್ತೆ ನಮ್ಮ ಸಮುದಾಯಕ್ಕೆ ವಾಪಸ್ ಕರೆತಂದಿದ್ದಾರೆ. ಘರ್ ವಾಪಸಿ ಕಾರ್ಯಕ್ರಮ ಮಾಡಿದ್ದಾರೆ. ಹೀಗಾಗಿ, ಇಂತಹ ಸಂಘಟನೆಗೆ ನಾವು ಬೆಂಬಲವಾಗಿರಬೇಕು, ವಿರೋಧಿಸುವುದು ಸರಿಯಲ್ಲ ಅಂತಾ ಶೇಖರ್ ಲಮಾಣಿ ಮನವಿ ಮಾಡಿದ್ದಾರೆ.