ವಿ.ಎಸ್.ಪಾಟೀಲರಿಂದ NWKSRTC ಅಧ್ಯಕ್ಷ ಸ್ಥಾನ ಕಿತ್ತುಕೊಂಡ ಸಿಎಂ, ಅಷ್ಟಕ್ಕೂ, ಪಾಟೀಲ್ರು ಏನಂದ್ರು..?


ಮುಂಡಗೋಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸ್ಥಾನದಿಂದ ವಿ.ಎಸ್.ಪಾಟೀಲ್ ರನ್ನು ಔಟ್ ಮಾಡಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಬಿಜೆಪಿ ಮಾಜಿ ಶಾಸಕ ಹಾಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿದ್ದ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಗೊಳ್ಳುವ ತೀರ್ಮಾನ ಕೈಗೊಂಡಿದ್ರು. ಹೀಗಾಗಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲೂ ಮುಂದಾಗಿದ್ರು. ಆದ್ರೆ ಇವತ್ತು ಏಕಾಏಕಿ ಸಿಎಂ ಬಸವರಾಜ್ ಬೊಮ್ಮಾಯಿ ಅಧ್ಯಕ್ಷ ಸ್ಥಾನದಿಂದ ವಿ.ಎಸ್.ಪಾಟೀಲರನ್ನು ಕೆಳಗಿಳಿಸಿ ಆದೇಶ ಹೊರಡಿಸಿದ್ದಾರೆ.

ವಿ.ಎಸ್.ಪಾಟೀಲ್ ಫಸ್ಟ್ ರಿಯಾಕ್ಷನ್..!
ಇನ್ನು, ವಿ.ಎಸ್.ಪಾಟೀಲರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಸಿರೋ ಆದೇಶಕ್ಕೆ ಸಂಬಂಧಿಸಿದಂತೆ ಪಾಟೀಲರು ಪಬ್ಲಿಕ್ ಫಸ್ಟ್ ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು. ನಾನು ಈಗಾಗಲೇ ರಾಜೀನಾಮೆ ನೀಡಲು ರೆಡಿಯಿದ್ದಿನಿ ಅಂತಾ ಮೊದಲೇ ತಿಳಿಸಿದ್ದೆ. ಅಷ್ಟೊತ್ತಿಗಾಗಲೇ ಸಿಎಂ ಇಂತಹ ತೀರ್ಮಾನ ಪಡೆದಿದ್ದು ಸರಿಯಲ್ಲ ಅಂತಾ ತಿಳಿಸಿದ್ರು. ಒಬ್ಬ ಮಾಜಿ ಶಾಸಕನಿಗೆ ಬಿಜೆಪಿ ಈ ರೀತಿ ಮಾಡತ್ತೆ ಅಂತಾ ಅಂದುಕೊಂಡಿರಲಿಲ್ಲ ಅಂತಾ ಖೇದ ವ್ಯಕ್ತಪಡಿಸಿದ್ರು.

error: Content is protected !!