ಮುಂಡಗೋಡಿನಲ್ಲಿ ಭಾರಿ ಮಳೆ, ಬಂಕಾಪುರ ರಸ್ತೆ ಮೇಲೆ ಮೊಣಕಾಲಿನವರೆಗೂ ಮಳೆ‌ನೀರು..! ಮನೆಗಳಿಗೂ ಹೊಕ್ಕ ಕೊಳಚೆ ನೀರು.!


ಮುಂಡಗೋಡ: ಪಟ್ಟಣದಲ್ಲಿ ಭಾರೀ ಮಳೆ ಸುರಿದಿದೆ‌. ಪರಿಣಾಮ ಇಲ್ಲಿನ ಬಂಕಾಪುರ ರಸ್ತೆಯಲ್ಲಿ ಮೊಣಕಾಲಿನವರೆಗೂ ನೀರು ನಿಂತು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ವಾಹನಗಳು ರಸ್ತೆ ಮೇಲೆ ಸಂಚರಿಸಲು ಪರದಾಡುವಂತಾಗಿದೆ. ಪಟ್ಟಣ ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿಗೆ ಇಲ್ಲಿನ ನಿವಾಸಿಗಳು ಕ್ಯಾಕರಿಸಿ ಉಗಿಯುವಂತಾಗಿದೆ.

ರಸ್ತೆಯಲ್ಲಾ, ಕೆರೆ..!
ಅಸಲು, ಇಂದು ಮದ್ಯಾನ ಸುರಿದ ಭಾರೀ ಮಳೆಯಿಂದ ಇಲ್ಲಿನ ಬಂಕಾಪುರ ರಸ್ತೆಯಲ್ಲಿ ಮಳೆಯ ನೀರು ತುಂಬಿ ಅದ್ವಾನವಾಗಿದೆ‌. ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುವಂತಾಗಿದೆ‌. ಮೊಣಕಾಲಿನವರೆಗೂ ಮಳೆಯ ನೀರು ತುಂಬಿದೆ‌. ಹೀಗಾಗಿ, ಇದೇನು ರಸ್ತೆಯೋ ಕೆರೆಯೋ ಎಂಬ ಅನುಮಾನದಲ್ಲೇ ವಾಹನ ಸವಾರರು ಪರದಾಡುವಂತಾಗಿದೆ. ಅದ್ರಲ್ಲೂ ಇಲ್ಲಿ ಹೇಗೋ ದಾಟಿ ನಡೆದರಾಯ್ತು ಅಂತಾ ಹೊರಟಿದ್ದ ವಾಹನವೊಂದು ನಟ್ಟನಡುವೆ ನೀರಲ್ಲಿ ಕೆಟ್ಟು ಪರದಾಡಿದೆ. ಇಷ್ಟಿದ್ರೂ ನಿರ್ಲಜ್ಜ ಅಧಿಕಾರಿಗಳು ತಮ್ಮ ಬೇಜವಾಬ್ದಾರಿಯಿಂದ ಎದ್ದು ಬರುತ್ತಲೇ ಇಲ್ಲ.

ಮನೆಗಳಿಗೆ ಹೊಕ್ಕ ನೀರು..!
ಇನ್ನು, ಮಳೆಯ ನೀರು ಬಂಕಾಪುರ ರಸ್ತೆಯ ನಿವಾಸಿಗಳಿಗೆ ಇನ್ನಿಲ್ಲದ ಪರದಾಟ ತಂದಿಟ್ಟಿದೆ. ಇಲ್ಲಿನ ಹಲವು ಮನೆಗಳಿಗೆ ನುಗ್ಗಿರೋ ಮಳೆ ನೀರು, ಮನೆಯಲ್ಲಿನ ವಸ್ತುಗಳನ್ನೇಲ್ಲ ಬರ್ಬಾದು ಮಾಡಿದೆ. ಇನ್ನು ಮಳೆಯ ನೀರಿನ ಜೊತೆ ವಿಷ ಜಂತುಗಳೂ, ಕೊಳಚೆ ನೀರು ಮನೆಯೊಳಗೆ ಹೊಕ್ಕು ನಿವಾಸಿಗಳ ಬದುಕನ್ನೇ ಮೂರಾಬಟ್ಟೆ ಮಾಡಿದೆ. ಹೀಗಾಗಿ, ರಸ್ತೆಯ ಮೇಲಿನ ನೀರು ಹರಿದು ಹೋಗಲು ಕಾಲುವೆಯೇ ಸಮರ್ಪಕವಾಗಿಲ್ಲ. ಹೀಗಾಗಿ, ಇಲ್ಲಿ‌ ನಿವಾಸಿಗಳು ರಾತ್ರಿಯಿಡಿ ಜಾಗರಣೆ ಮಾಡುವಂತಾಗತ್ತೆ. ಹೀಗಾಗಿ, ಇಲ್ಲಿನ ನಿವಾಸಿಗಳು ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಉಗಿದು ಉಪ್ಪಿನಕಾಯಿ ಹಾಕ್ತಿದಾರೆ.

ಅವೈಜ್ಞಾನಿಕ ಕಾಲುವೆ..!
ಅಸಲು, ಈ ಸಮಸ್ಯೆ ಇಲ್ಲಿನ ಜನರ ಜೀವ ಹಿಂಡುತ್ತಿದೆ ಅಂದ್ರೆ ಅದಕ್ಕೆ ನೇರ ಕಾರಣ ಆ ಕಾಲುವೆ ಕಾಮಗಾರಿಯ ಉಸ್ತುವಾರಿ ವಹಿಸಿದ್ದ ಇಂಜಿನೀಯರ್ ಆಗಿರ್ತಾರೆ. ಅದೇಂತಹ ನಿದ್ದೆಗಣ್ಣಲ್ಲಿ ಈ ಕಾಮಗಾರಿ ನಡೆಸಿದ್ನೋ ಗೊತ್ತಿಲ್ಲ, ಈಗ ಆತ ಮಾಡಿರೋ ಬೇಜವಾಬ್ದಾರಿಯಿಂದ ಇಲ್ಲಿನ ಜನರು ಈಗ ನಿದ್ದೆಗೆಡುವಂತಾಗಿದೆ. ಅಷ್ಟಕ್ಕೂ ಈ ಪಟ್ಟಣ ಪಂಚಾಯತಿಯ ಮಾತೆತ್ತುವುದೇ ಮುಂಡಗೋಡಿಗರಿಗೆ ಬೇಡವಾಗಿದೆ.

ಯಲ್ಲಾಪುರ ರಸ್ತೆ ಸ್ಥಿತಿ

ಯಲ್ಲಾಪುರ ರಸ್ತೆಯ ಗೋಳು..!
ಇನ್ನು, ಪಟ್ಟಣದಿಂದ ಯಲ್ಲಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಭಾರೀ ಮಳೆಯಿಂದ ಬಂದ್ ಆಗಿದೆ. ಅಮ್ಮಾಜಿ ಕೆರೆಯ ಸಮೀಪ ಯಲ್ಲಾಪುರಕ್ಕೆ ಹೋಗುವ ರಸ್ತೆ ಮೇಲೆಯೇ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತು ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಅಸಲು, ಈ ರಸ್ತೆಯಲ್ಲಿ ತಿಂಗಳ ಹಿಂದಷ್ಟೇ PWD ಇಲಾಖೆ ಒಂದಿಷ್ಟು ರಸ್ತೆ ನಿರ್ಮಾಣ‌ ಮಾಡಿತ್ತು. ಆದ್ರೆ, ಒಂದೇ ಒಂದು ಮಳೆಗೆ ಈ ರಸ್ತೆ ಬರ್ಬಾದಾಗಿ ಹೋಗಿದೆ. ಭಾರೀ ಮಳೆಯಿಂದ ರಸ್ತೆ ಮೇಲೆ ನೀರು ಹರಿಯುತ್ತಿದ್ದು ವಾಹನ ಸಂಚಾರ ಸ್ಥಗಿತವಾಗಿದೆ. PWD ಇಲಾಖೆ ಅಧಿಕಾರಿಗಳಿಗೂ ಜನ ಹಿಡಿಶಾಪ ಹಾಕುವಂತಾಗಿದೆ.

error: Content is protected !!