ಮುಂಡಗೋಡ: ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಇಂದು, ಗ್ಯಾಸ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸುವಂತೆ ಮುಂಡಗೋಡ ತಾಲೂಕಾ ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್ ಮುಖಾಂತರ ಮಾನ್ಯ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಭಾರತಿ ಮಣ್ಣಪ್ಪ ಗೌಡ್ರು, ಮಾಜಿ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಶಾರದಾ ಬಾಯಿ ರಾಠೋಡ್, ಧರ್ಮರಾಜ ನಡಗೇರಿ, ಎಂ. ಎನ್. ದುಂಡಸಿ, ಅಲಿ ಹಸನ್ ಬೆಂಡಿಗೇರಿ, ಮಲ್ಲಿಕಾರ್ಜುನ್ ಗೌಳಿ, ಜೈನು ಬೆಂಡಿಗೇರಿ, ಅಲ್ಲಾಉದ್ದೀನ್ ಕಮಡೊಳ್ಳಿ,ಪ್ರಶಾಂತ್ ಭದ್ರಾಪುರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
Top Stories
ಮುಂಡಗೋಡಿನಲ್ಲೂ ಮಾಂಸಕ್ಕಾಗಿ ಆಕಳ ಹತ್ಯೆ..! ಪೊಲೀಸರ ದಾಳಿ..! ಸಿಕ್ಕಿದ್ದೇನು..?
ಕಾರವಾರ ನಗರಸಭೆ ಸದಸ್ಯನ ಭೀಕರ ಹತ್ಯೆ ಕೇಸ್, ಇಬ್ಬರು PSI ಸೇರಿ ನಾಲ್ವರು ಪೊಲೀಸರು ಸಸ್ಪೆಂಡ್..? ಕಾರಣ..?
ಭಾರೀ ಮಳೆ ಗಾಳಿಗೆ ಇಂದೂರು ಕೊಪ್ಪ ಗ್ರಾಮದಲ್ಲಿ, ಮನೆಯ ಮೇಲ್ಚಾವಣಿ ಹಾನಿ, ಗೋವಿನಜೋಳ ರಾಶಿ ನೀರಲ್ಲಿ
ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಪಾಳಾದ ರಾಮಾಪುರ ಕ್ರಾಸ್ ಬಳಿ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!
ಚಿಗಳ್ಳಿ ಹಿರಿಕೆರೆಯಲ್ಲಿ ಮೀನುಗಳ ದಾರುಣ ಸಾವು, ಇಡೀ ಕೆರೆಗೇ ವಿಷ ಹಾಕಿದ್ರಾ ದುರುಳರು..?
ಶಿವರಾಮ್ ಹೆಬ್ಬಾರ್ ಅಧ್ಯಕ್ಷತೆಯಲ್ಲಿ, ಮುಂಡಗೋಡ ತಾಲೂಕಾ ತ್ರೈಮಾಸಿಕ ಕೆಡಿಪಿ ಸಭೆ..!
ಇದು 108 ಅಂಬುಲೆನ್ಸ್ ಸಿಬ್ಬಂದಿಯ ಪ್ರಮಾಣಿಕ, ಮಾನವೀಯ ಕಾರ್ಯ.. 6 ತಿಂಗಳ ನಂತ್ರ ವ್ಯಕ್ತಿಯ ವಸ್ತುಗಳು ಮರಳಿದ್ದೇ ರೋಚಕ..?
ನಿವೃತ್ತ IPS ಅಧಿಕಾರಿ DG-IGP ಓಂ ಪ್ರಕಾಶ್ ಬರ್ಬರ ಹತ್ಯೆ..! ಪತ್ನಿಯೇ ಕೊಲೆ ಮಾಡಿರೋ ಶಂಕೆ..!
ಬೆಳ್ಳಂ ಬೆಳಿಗ್ಗೆ ಬೆಚ್ಚಿ ಬಿದ್ದ ಕಾರವಾರ, ನಗರಸಭೆಯ ಮಾಜಿ ಸದಸ್ಯನ ಭೀಕರ ಹತ್ಯೆ, ಸತೀಶ್ ಕೊಳಂಕರ್ ನ ನಡುರಸ್ತೆಯಲ್ಲೇ ಕೊಚ್ಚಿ ಕೊಲೆ..!
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನ..!
ಮಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡೀಸ್ ನಿಧನರಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದು, ಜುಲೈ 18ರಂದು ಮನೆಯಲ್ಲಿ ಯೋಗ ಮಾಡುತ್ತಿದ್ದ ವೇಳೆ ಜಾರಿ ಬಿದ್ದಿದ್ದ ಆಸ್ಕರ್ ಫರ್ನಾಂಡೀಸ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ವೇಳೆ ಮೆದುಳುಗೆ ಏಟು ಬಿದ್ದರೋದು ಬೆಳಕಿಗೆ ಬಂದಿತ್ತು, ಹೀಗಾಗಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಪರ್ನಾಂಡೀಸ್ ವಿಧಿವಶರಾಗಿದ್ದಾರೆ. 1941ಮಾರ್ಚ್ 27ರಂದು ಉಡುಪಿಯಲ್ಲಿ ಜನಿಸಿದ್ದ ಆಸ್ಕರ್, 1980ರಲ್ಲಿ ಮೊದಲ ಬಾರಿ ಉಡುಪಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಆಸ್ಕರ್ ಫರ್ನಾಂಡೀಸ್, ಕೇಂದ್ರ ಸಾರಿಗೆ, ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಸೋನಿಯಾ ಗಾಂಧಿ ಕುಟುಂಬದ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ರಾಷ್ಟ್ರ ಹಾಗೂ ರಾಜ್ಯದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮಂಗಳೂರು ಮಹಿಳೆಯ ದರೋಡೆ ಯತ್ನ ಕೇಸ್ ಅಸಲೀ ಅಲ್ಲ ಕಣ್ರಿ..! ಹಾಗಾದ್ರೆ ಏನದು..?
ಮಂಗಳೂರಿನಲ್ಲಿ ಮಹಿಳೆಯ ದರೋಡೆಗೆ ಯತ್ನ ಪ್ರಕರಣ ಅಸಲೀ ಅಲ್ಲ ಬದಲಾಗಿ ಮಂಗಳೂರು ಪೊಲೀಸರು ನಡೆಸಿದ ಅಣಕು ಪ್ರದರ್ಶನವಂತೆ. ಹಾಗಂತ, ಘಟನೆ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ. ಇದು ನಿಜವಾದ ಘಟನೆ ಅಲ್ಲ, ಪೊಲೀಸ್ ಇಲಾಖೆಯಿಂದ ಮಾಡಲಾದ ಅಣಕು ಕಾರ್ಯಾಚರಣೆಯಂತೆ. ಇಂತಹ ಘಟನೆ ಆದಾಗ ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸುತ್ತಾರೆ..? ಪೊಲೀಸರು ಎಷ್ಟು ಬೇಗ ಸ್ಪಂಧಿಸುತ್ತಾರೆ..? ಈ ಎಲ್ಲದರ ಬಗ್ಗೆ ತಿಳಿದುಕೊಳ್ಳಲು ಮಾಡಲಾದ ಅಣಕು ಕಾರ್ಯಾಚರಣೆಯಾಗಿತ್ತು ಅಂತಾ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ. ಮಂಗಳೂರಿನಲ್ಲಿ ಇತ್ತಿಚೆಗೆ ಇಂತಹ ಪ್ರಕರಣಗಳು ನಡೆಯುತ್ತಿವೆ. ಇದರ ಬಗ್ಗೆ ಜನರಿಗೆ ಅರಿವು ಬರಬೇಕು. ದಾಳಿಗೊಳಗಾದ ಸಂತ್ರಸ್ಥರು ದೈರ್ಯವಾಗಿ ಎದುರಿಸಬೇಕು. ಪೊಲೀಸರೂ ಕೂಡ ತಕ್ಷಣ ಪ್ರತಿಕ್ರಿಯಿಸಬೇಕು. ಈ ಎಲ್ಲಾ ಉದ್ದೇಶದಿಂದ ಆ ಅಣುಕು ಪ್ರದರ್ಶನ ಮಾಡಲಾಗಿದೆ ಅಂತಾ ಕಮೀಶನರ್ ತಿಳಿಸಿದ್ದಾರೆ. ಅಂದಹಾಗೆ, ಆ ದೃಶ್ಯದಲ್ಲಿರೋ ಮಹಿಳೆ ಸೌರಕ್ಷಾ ವುಮೆನ್ ಟ್ರಸ್ಟ್ ನ ಶೋಭಲತಾ ಕಟೀಲ್ ಎನ್ನುವವರಾಗಿದ್ದಾರೆ. **************** ಜಾಹೀರಾತು
ಹಾಡಹಗಲೇ ಮಹಿಳೆಯ ದರೋಡೆಗೆ ಯತ್ನ: ದರೋಡೆಕೋರರನ್ನು ಆ ಮಹಿಳೆ ಹೇಗೆ ಹಿಮ್ಮೆಟ್ಟಿಸಿದ್ರು ಗೊತ್ತಾ..?
ಮಂಗಳೂರಿನಲ್ಲಿ ಹಾಡುಹಗಲೇ ಮಹಿಳೆಯ ದರೋಡೆಗೆ ಯತ್ನಿಸಿದ ಭಯಾನಕ ಘಟನೆ ನಡೆದಿದೆ. ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗ ಘಟನೆ ನಡೆದಿದ್ದು ಕಾರಿನಲ್ಲಿ ಬಂದ ಅಪರಿಚಿತರು ಮಹಿಳೆಯ ಬ್ಯಾಗ್ ಕಸಿದು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಬ್ಯಾಗ್ ಕಸಿಯಲು ಬಿಡದೆ ತನ್ನ ರಕ್ಷಣೆಗೆ ಮಹಿಳೆ ತಾನೇ ಮುಂದಾಗಿದ್ದಾರೆ. ದರೋಡೆಗಾಗಿ ಕಾರಿನಿಂದ ಇಳಿದ ವ್ಯಕ್ತಿಗೆ ಮಹಿಳೆಯೇ ಥಳಿಸಿ ಆತ್ಮರಕ್ಷಣೆ ಮಾಡಿಕೊಂಡಿದ್ದಾರೆ. ಆದರೂ, ಮಹಿಳೆಯನ್ನು ಬೀಳಿಸಿ ಬ್ಯಾಗ್ ಕಸಿಯಲು ಆರೋಪಿ ಯತ್ನಿಸಿ ವಿಫಲವಾಗಿದ್ದಾನೆ. ಮಹಿಳೆಯ ಪ್ರತಿರೋಧದಿಂದ ಬ್ಯಾಗ್ ಕಸಿಯಲು ಆಗದೆ ಆರೋಪಿಗಳು ಪರಾರಿಯಾಗಿದ್ದಾರೆ. ಈ ದೃಷ್ಯಗಳೇಲ್ಲ ಸಿಸಿಟಿವಿ ಹಾಗೂ ಮೊಬೈಲ್ ನಲ್ಲಿ ಸೆರೆಯಾಗಿದೆ. ********************* ಜಾಹೀರಾತು
ನಂದಿಕಟ್ಟಾ ಪ್ಲಾಟ್ ನಲ್ಲಿ ಕುಡಿಯಲು ನೀರಿಲ್ಲ, ಗದ್ದೆಗಳಿಗೆ ಅಲೆದಾಡಿ ನೀರು ತರದೇ ಗತಿಯಿಲ್ಲ; ಎಲ್ಲಿದೆ ಆಡಳಿತ..?
ನಂದಿಕಟ್ಟಾ ಗ್ರಾಮದ ನವನಗರ ಪ್ಲಾಟ್ ನ ಜನರು ನಿತ್ಯವೂ ಪರದಾಡುತ್ತಿದ್ದಾರೆ. ಯಾಕಂದ್ರೆ, ಇವ್ರಿಗೆ ಕುಡಿಯಲು ನೀರೇ ಸಿಗುತ್ತಿಲ್ಲ. ನಿತ್ಯವೂ ಕುಡಿಯುವ ನೀರಿಗಾಗಿ ಮಕ್ಕಳು, ಮರಿಗಳೊಂದಿಗೆ ಕೊಡಹೊತ್ತು ಗದ್ದೆಗಳಲ್ಲಿ ತಿರುಗಾಡುವ ಪರಿಸ್ಥಿತಿ ಇಲ್ಲಿನ ಜನ್ರದ್ದು.. ಹೀಗಾಗಿ, ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸ್ತಿದಾರೆ ನಿವಾಸಿಗಳು. ಏನಿದು ಸಮಸ್ಯೆ..? ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ ನಂಬರ್ 2 ರಲ್ಲಿ ಬರೋ ನವನಗರ ಪ್ಲಾಟ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ, ಪ್ರತಿದಿನ ಇಲ್ಲಿನ ಜನ ಬಹುತೇಕ ಪಕ್ಕದ ಗದ್ದೆಗಳ ಬೋರವೆಲ್ ಗಳಿಗೆ ಕುಡಿಯುವ ನೀರು ತರಲು ತಿರುಗಾಡುವ ಸ್ಥಿತಿ ಇದೆ. ಮಕ್ಕಳು ಮರಿಗಳೊಂದಿಗೆ, ಕೊಡ ಹೊತ್ತು ನೀರು ತರುವ ಭೀಕರತೆ ಇದೆ. ಹೀಗಾಗಿ, ಸದ್ಯ ಮಳೆಗಾಲ ಆಗಿರೋ ಕಾರಣಕ್ಕೆ ಜನ ಗದ್ದೆಗಳಿಗೆ ತೆರಳಿ ನೀರು ತರಲು ಪಡಬಾರದ ಕಷ್ಟ ಪಡುತ್ತಿದ್ದಾರೆ. ಗದ್ದೆಯ ಮಾಲೀಕರು ನೀರು ಕೊಡದೇ ಇದ್ರೆ ಮುಗೀತು, ಮತ್ತೊಂದು ಗದ್ದೆಯ ಕಡೆಗೆ ತಿರುಗೋದು ಅನಿವಾರ್ಯವಾಗಿದೆ. ಹೀಗಾಗಿ ಮಕ್ಕಳು ಮರಿಗಳೊಂದಿಗೆ...
ಸಚಿವ ಹೆಬ್ಬಾರ್ ಅಂದ್ರೆ ರೈತರ ಪಾಲಿನ ಭಗೀರಥ: ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ
ಮುಂಡಗೋಡ; ಸಚಿವ ಶಿವರಾಮ್ ಹೆಬ್ಬಾರ್ ಕ್ಷೇತ್ರದ ರೈತರ ಮನಸಲ್ಲಿ ಭಗೀರಥರ ಸ್ಥಾನ ಪಡೆದಿದ್ದಾರೆ ಅಂತಾ ಹಿರಿಯ ಪತ್ರಕರ್ತ, ಸಂಪಾದಕ ಹರಿಪ್ರಕಾಶ್ ಕೋಣೆಮನೆ ಸಚಿವ ಹೆಬ್ಬಾರ್ ರವರನ್ನು ಹಾಡಿಹೊಗಳಿದ್ರು. ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ಹಾಗೂ ಭಾರತೀಯ ವಿಕಾಸ ಟ್ರಸ್ಟ್ (ಸೆಲ್ಕೋ) ಸಂಸ್ಥೆಗಳು ನೀಡಿದ ಡಯಾಲಿಸಿಸ್ ಯಂತ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಸಚಿವರ ಪ್ರಯತ್ನದಿಂದ ಮೊದಲ ಬಾರಿಗೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣವಾಗುತ್ತಿದೆ. ಇನ್ನು, ಯಲ್ಲಾಪುರದ ಸರಕಾರಿ ಆಸ್ಪತ್ರೆಯಲ್ಲಿ ತಮ್ಮ ಸಂಸ್ಥೆಯ ಮೂಲಕವಾಗಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಡಯಾಲಿಸಿಸ್ ವಾರ್ಡ್ ಅನ್ನು ನಿರ್ಮಾಣ ಮಾಡಿದ್ದು ಶ್ಲಾಘನೀಯ ಅಂತಾ ಮೆಚ್ಚುಗೆ ವ್ಯಕ್ತ ಪಡಿಸಿದ ಅವ್ರು, ಸಚಿವರ ಜನಪರ ನಿಲುವುಗಳನ್ನು ಕೊಂಡಾಡಿದರು. **************************** ಜಾಹೀರಾತು
ಸೈಕ್ಲಿಂಗ್ ಮಾಡುವಾಗಲೇ ಸಾವನ್ನಪ್ಪಿದ ಸೈಕ್ಲಿಸ್ಟ್..!
ಹುಬ್ಬಳ್ಳಿಯ ಸೈಕ್ಲಿಸ್ಟ್ ಒಬ್ಬರು ಸೈಕ್ಲಿಂಗ್ ಮಾಡುವಾಗಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಶಿಗ್ಗಾಂವ ಸಮೀಪ ನಡೆದಿದೆ. ಬಸವಗೌಡ ಶಂಕರಗೌಡ ಶಿವಳ್ಳಿ (35) ಮೃತರಾಗಿದ್ದು, ಬಿವ್ಹಿಬಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ಅಲ್ಲದೇ ಹಲವಾರು ವರ್ಷಗಳಿಂದ ಸೈಕ್ಲಿಸ್ಟ್ ಆಗಿದ್ದು, ವಿವಿಧ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಇಂದು ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಯೋಜಿಸಿದ್ದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಶಿಗ್ಗಾಂವ ಬಳಿ ಏಕಾಏಕಿ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ******************* ಜಾಹೀರಾತು
ಇದು ಮುಂಡಗೋಡ ಕಾಂಗ್ರೆಸ್ ಸೀಕ್ರೆಟ್..! ಆ ಜಂಗಲ್ ರೆಸಾರ್ಟು, ಸೆಪ್ಟೆಂಬರ್ ಇಪ್ಪತ್ತು, ಏನಿದರ ಮಸಲತ್ತು..?
ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ “ಕೈ” ಬಲಗೊಳ್ಳುತ್ತಿದೆ. ಮುಂಬರೋ ವಿಧಾನಸಭಾ ಚುನಾವಣೆ ಹೊತ್ತಿಗೆ ತನ್ನ ತೋಳ್ಬಲ ತೋರಿಸಲು ಏನೇನು ಬೇಕೋ ಅದನ್ನೇಲ್ಲ ಮಾಡಿಕೊಳ್ಳುವ ಉಮೇದಿನಲ್ಲಿದ್ದಾರೆ ದೇಶಪಾಂಡೆ ಪಡೆ. ಹೀಗಾಗಿನೇ, ಈಗಿಂದಲೇ ಅಂತಹದ್ದೊಂದು ರಣತಂತ್ರ ರೂಪಿಸಿ, ಕಾರ್ಯಕರ್ತರನ್ನು ಉತ್ತೇಜಿಸೋ ಕೆಲಸದಲ್ಲಿ ನಿರತವಾಗಿದೆ ಅದೋಂದು ಟೀಂ.. ಯುವಕರೇ ಟಾರ್ಗೆಟ್..! ಯಾವಾಗ, ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ಚುನಾವಣೆಲಿ ಪ್ರಶಾಂತ್ ದೇಶಪಾಂಡೆಯವರೇ ಕಣಕ್ಕಿಳಿಯೋದು ಅಂತಾ ಘೋಷಣೆಯ ಹಂತಕ್ಕೆ ಬಂತೋ, ಅವತ್ತಿನಿಂದಲೇ, ಕ್ಷೇತ್ರದಲ್ಲಿ ಗಟ್ಟಿಗೊಳ್ಳಲು ಬೇಕಾದ ಒಂದಿಷ್ಟು ತಯಾರಿ ಶುರುವಿಟ್ಟುಕೊಂಡಿದ್ದಾರೆ ದೊಡ್ಡ ಸಾಹೇಬ್ರು. ಅದ್ರ ಭಾಗವಾಗಿ ಇಡೀ ಕ್ಷೇತ್ರದಲ್ಲಿ ಬಿಜೆಪಿ ಪಡಸಾಲೆಯ ಅತೃಪ್ತ ಆತ್ಮಗಳ ತಲಾಶ್ ಮಾಡಿಸಿ, ಅಂತವರ ಒಂದು ಲಿಸ್ಟ್ ತರಿಸಿಕೊಂಡಿದ್ದಾರೆ. ಅವ್ರನ್ನೇಲ್ಲ ಹೇಗೆ ಪಕ್ಷಕ್ಕೆ ಎಳೆದು ತರೋದು ಅನ್ನೋ ಪಕ್ಕಾ ಪ್ಲಾನ್ ನೊಂದಿಗೇ ಫಿಲ್ಡಿಗಿಳಿದಿದೆ ಕೈ ಪಡೆ. ಈ ಕಾರಣಕ್ಕಾಗಿನೇ ಕಳೆದ ವಾರ ಮುಂಡಗೋಡ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದ ಪ್ರಶಾಂತ್ ದೇಶಪಾಂಡೆ, ಅದ್ಯಾರೇ ಕಾಂಗ್ರೆಸ್ ಪಕ್ಷಕ್ಕೆ ಬರುವವರಿದ್ರೂ ಅಂತವರಿಗೆ ಮುಕ್ತ ಸ್ವಾಗತ ಅಂತಾ...
ಇಂದೂರು ಸಂತೆಗೆ ಬರೋ ವ್ಯಾಪಾರಿಗಳಿಗೆ ಇದೇಂಥಾ ಕಿರಿಕಿರಿ..? ಪಿಡಿಓ ಸಾಹೇಬ್ರೆ ಎಲ್ಲಿದ್ದೀರಿ..?
ಮುಂಡಗೋಡ:ತಾಲೂಕಿನ ಇಂದೂರು ಸಂತೆಯಲ್ಲಿ ವ್ಯಾಪಾರಿಗಳಿಗೆ ಇನ್ನಿಲ್ಲದ ಕಿರಿಕಿರಿ ಆಗ್ತಿದೆ. ಕರ ವಸೂಲಿ ಹೆಸ್ರಲ್ಲಿ ಇಲ್ಲಿ ದಂಧೆ ಮಾಡಲಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಟೆಂಡರ್ ಅವದಿ ಮುಗಿದು ತಿಂಗಳುಗಳೇ ಕಳೆದ್ರೂ ಇಲ್ಲಿ ವ್ಯಾಪಾರಿಗಳಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗ್ತಿದೆ. ಆದ್ರೆ ಇದನ್ನೇಲ್ಲ ನಿಭಾಯಿಸಬೇಕಿದ್ದ ಪಿಡಿಓ ಮಾತ್ರ ಅದೇನು ಮಾಡ್ತಿದಾರೋ ಯಾರಿಗೂ ಗೊತ್ತಿಲ್ಲ. ಬಾಯಿಗೆ ಬಂದದ್ದೇ ರೇಟು..! ಇಂದೂರು ಸಂತೆಯಲ್ಲಿ ಸುತ್ತ ಮುತ್ತಲ ತಾಲೂಕು ಸೇರಿದಂತೆ ಹೊರ ಜಿಲ್ಲೆಗಳಿಂದಲೂ ವ್ಯಾಪಾರಿಗಳು ಬರ್ತಾರೆ. ಅಲ್ಲದೇ ರೈತರು ತಮ್ಮ ಗದ್ದೆಗಳಲ್ಲಿ ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಬರ್ತಾರೆ. ಆದ್ರೆ, ಹಾಗೆ ಬರೋ ವ್ಯಾಪಾರಸ್ಥರಿಗೆ ಇಲ್ಲಿನ ಗ್ರಾಮ ಪಂಚಾಯತಿ ಜಾಗೆಯ ಕರ ಅಂತಾ 20 ರೂ. ಗಳನ್ನು ವಸೂಲಿ ಮಾಡತ್ತೆ. ಹಾಗೆ ವಸೂಲಿ ಮಾಡೋಕೆ ಟೆಂಡರ್ ನೀಡಿರಲಾಗತ್ತೆ. ಆದ್ರೆ, ಸದ್ಯ ಹಾಗೆ ನೀಡಿರೋ ಟೆಂಡರ್ ಅವಧಿಯೂ ಮುಗಿದಿದೆ. ಆದ್ರೆ, ಹಾಗೆ ಟೆಂಡರ್ ಪಡೆದ ಮಹಾನುಭಾವ ಇಂದೂರು ಸಂತೆಯಲ್ಲೇ ಬೇಕಾಬಿಟ್ಟಿ ಹಣ ವಸೂಲಿ ಮಾಡ್ತಿದಾನೆ. ಹಾಗಂತ ವ್ಯಾಪಾರಿಗಳು ಆಕ್ರೋಶಗೊಂಡಿದ್ದಾರೆ....
ಮುಂಡಗೋಡ ಪಿಐ ಪ್ರಭುಗೌಡರಿಗೆ ಕುಂದರ್ಗಿ ಯುವಕರಿಂದ ಸನ್ಮಾನ..!
ಮುಂಡಗೋಡ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪಿಐ ಆಗಿ ಸೇವೆ ಸಲ್ಲಿಸಿ ಇದೀಗ ಡಿವೈಎಸ್ಪಿಯಾಗಿ ಬಡ್ತಿ ಹೊಂದಿ, ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆ ಆಗ್ತಿರೊ ಪ್ರಭುಗೌಡ ಕಿರೆದಳ್ಳಿಯವರಿಗೆ ಕುಂದರ್ಗಿಯ ಯುವಕರು ಸನ್ಮಾನಿಸಿದ್ರು. ಕುಂದರ್ಗಿ ಗ್ರಾಮದ ಓಂಕಾರ ಯುವಕ ಮಂಡಳದ ಯುವಕರು ಹಾಗೂ ಗ್ರಾಮಸ್ಥರು ಪ್ರಭುಗೌಡರವರಿಗೆ ಶಾಲು ಹೊದಿಸಿ, ಸಿಹಿ ತಿನ್ನಿಸಿ ಶುಭ ಕೋರಿದರು. ಈ ವೇಳೆ ಕುಂದರ್ಗಿ ಗ್ರಾಮದ ಹಲವರು ಭಾಗಿಯಾಗಿದ್ರು.