ಮುಂಡಗೋಡ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪಿಐ ಆಗಿ ಸೇವೆ ಸಲ್ಲಿಸಿ ಇದೀಗ ಡಿವೈಎಸ್ಪಿಯಾಗಿ ಬಡ್ತಿ ಹೊಂದಿ, ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆ ಆಗ್ತಿರೊ ಪ್ರಭುಗೌಡ ಕಿರೆದಳ್ಳಿಯವರಿಗೆ ಕುಂದರ್ಗಿಯ ಯುವಕರು ಸನ್ಮಾನಿಸಿದ್ರು. ಕುಂದರ್ಗಿ ಗ್ರಾಮದ ಓಂಕಾರ ಯುವಕ‌ ಮಂಡಳದ ಯುವಕರು ಹಾಗೂ ಗ್ರಾಮಸ್ಥರು ಪ್ರಭುಗೌಡರವರಿಗೆ ಶಾಲು ಹೊದಿಸಿ, ಸಿಹಿ ತಿನ್ನಿಸಿ ಶುಭ ಕೋರಿದರು. ಈ ವೇಳೆ ಕುಂದರ್ಗಿ ಗ್ರಾಮದ ಹಲವರು ಭಾಗಿಯಾಗಿದ್ರು.