ಇಂದೂರು ಸಂತೆಗೆ ಬರೋ ವ್ಯಾಪಾರಿಗಳಿಗೆ ಇದೇಂಥಾ ಕಿರಿಕಿರಿ..? ಪಿಡಿಓ ಸಾಹೇಬ್ರೆ ಎಲ್ಲಿದ್ದೀರಿ..?

ಮುಂಡಗೋಡ:ತಾಲೂಕಿನ ಇಂದೂರು ಸಂತೆಯಲ್ಲಿ ವ್ಯಾಪಾರಿಗಳಿಗೆ ಇನ್ನಿಲ್ಲದ ಕಿರಿಕಿರಿ ಆಗ್ತಿದೆ. ಕರ ವಸೂಲಿ ಹೆಸ್ರಲ್ಲಿ ಇಲ್ಲಿ ದಂಧೆ ಮಾಡಲಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಟೆಂಡರ್ ಅವದಿ ಮುಗಿದು ತಿಂಗಳುಗಳೇ ಕಳೆದ್ರೂ ಇಲ್ಲಿ ವ್ಯಾಪಾರಿಗಳಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗ್ತಿದೆ. ಆದ್ರೆ ಇದನ್ನೇಲ್ಲ ನಿಭಾಯಿಸಬೇಕಿದ್ದ ಪಿಡಿಓ ಮಾತ್ರ ಅದೇನು ಮಾಡ್ತಿದಾರೋ ಯಾರಿಗೂ ಗೊತ್ತಿಲ್ಲ.

ಬಾಯಿಗೆ ಬಂದದ್ದೇ ರೇಟು..!
ಇಂದೂರು ಸಂತೆಯಲ್ಲಿ ಸುತ್ತ ಮುತ್ತಲ ತಾಲೂಕು ಸೇರಿದಂತೆ ಹೊರ ಜಿಲ್ಲೆಗಳಿಂದಲೂ ವ್ಯಾಪಾರಿಗಳು ಬರ್ತಾರೆ. ಅಲ್ಲದೇ ರೈತರು ತಮ್ಮ ಗದ್ದೆಗಳಲ್ಲಿ ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಬರ್ತಾರೆ. ಆದ್ರೆ, ಹಾಗೆ ಬರೋ ವ್ಯಾಪಾರಸ್ಥರಿಗೆ ಇಲ್ಲಿನ ಗ್ರಾಮ ಪಂಚಾಯತಿ ಜಾಗೆಯ ಕರ ಅಂತಾ 20 ರೂ‌. ಗಳನ್ನು ವಸೂಲಿ ಮಾಡತ್ತೆ. ಹಾಗೆ ವಸೂಲಿ ಮಾಡೋಕೆ ಟೆಂಡರ್ ನೀಡಿರಲಾಗತ್ತೆ. ಆದ್ರೆ, ಸದ್ಯ ಹಾಗೆ ನೀಡಿರೋ ಟೆಂಡರ್ ಅವಧಿಯೂ ಮುಗಿದಿದೆ. ಆದ್ರೆ, ಹಾಗೆ ಟೆಂಡರ್ ಪಡೆದ ಮಹಾನುಭಾವ ಇಂದೂರು ಸಂತೆಯಲ್ಲೇ ಬೇಕಾಬಿಟ್ಟಿ ಹಣ ವಸೂಲಿ ಮಾಡ್ತಿದಾನೆ. ಹಾಗಂತ ವ್ಯಾಪಾರಿಗಳು ಆಕ್ರೋಶಗೊಂಡಿದ್ದಾರೆ.

30 ರಿಂದ 50..
ಇಂದೂರಿನ ಸಂತೆಯಲ್ಲಿ ಸಣ್ಣ ಪುಟ್ಟ ತರಕಾರಿ ವ್ಯಾಪಾರಿಗಳು ಈ ವ್ಯಕ್ತಿಗೆ 30 ರೂ. ಕೊಡಲೇಬೇಕು, ಇಲ್ಲವಾದರೆ ಮುಂದಿನ ವಾರ ನೀವಿಲ್ಲಿ ಬರಲೇಬೇಡಿ ಅಂತಾನೆ ಈತ. ಇನ್ನು ಕಾಳುಕಡಿ ವ್ಯಾಪಾರಸ್ಥರು, ಕಿರಾಣಿ ವ್ಯಾಪಾರಸ್ಥರು ಈತನಿಗೆ 50 ರೂ. ಕೊಡಲೇಬೇಕಂತೆ ಇಲ್ಲವಾದಲ್ಲಿ ಅವ್ರಿಗೂ ಅವಾಜ್ ಹಾಕ್ತಾನಂತೆ ಹೀಗಾಗಿ, ವ್ಯಾಪಾರಿಗಳು ಫುಲ್ ಗರಂ ಆಗಿದ್ದಾರೆ.

ಬ್ರಷ್ಟಾಚಾರದ ವಾಸನೆಯಲ್ಲಿ…!
ಇನ್ನು, ಇದೇಲ್ಲ ಇಲ್ಲಿನ ಪಿಡಿಓ ಸಾಹೇಬ್ರಿಗೆ ಸಾಕಷ್ಟು ಬಾರಿ ಹೇಳಿದ್ರೂ ಪಾಪ, ಅವ್ರಿಗೆ ಇದನ್ನೇಲ್ಲ ಕೇಳೋಕೆ ಟೈಮೇ ಇಲ್ವಂತೆ.. ಯಾಕಂದ್ರೆ, ಕಳೆದ ಅವಧಿಯಲ್ಲಿ 14 ನೇ ಹಣಕಾಸು ಯೋಜನೆಯಡಿಯಲ್ಲಿ ಆಗಿರೋ ಯಪರಾ ತಪರಾ ಸರಿ ಮಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ ಅನ್ನೋ ಮಾತುಗಳಿವೆ.
ಕಳೆದ ಕೆಲ ದಿನಗಳ ಹಿಂದೆ ಗ್ರಾಪಂ ಸದಸ್ಯರುಗಳು ಅದೇ ಕಾರಣಕ್ಕೆ ಪಿಡಿಓ ರವರನ್ನು ಹಿಗ್ಗಾ ಮುಗ್ಗಾ ಜಾಡಿಸಿದ್ದರು. ಹೀಗಾಗಿ, ಅವತ್ತು ಇಂದೂರಿನ ಕೆಲವು ಹಿರಿಯರ ರಾಜೀ ಸಂಧಾನಗಳ ಮೂಲಕ ಹೇಗೋ ಬಚಾವ್ ಆಗಿದ್ದರು ಅನ್ನೋ ಮಾತುಗಳು ಕೇಳಿ ಬಂದಿವೆ.

ಕಳೆದ ಅವಧಿಯ 14 ನೇ ಹಣಕಾಸಿನ ಅದ್ವಾನಗಳ ಸಂಪೂರ್ಣ ಕಹಾನಿ ನಿಮ್ಮೇದುರು ಕೆಲವೇ ದಿನಗಳಲ್ಲಿ ಬರಲಿದೆ. ಲಕ್ಷ ಲಕ್ಷ ಕೈ ಬದಲಾಯಿಸಿದ್ದಾದ್ರೂ ಎಲ್ಲಿ ಹೇಗೆ ಎಂಬ ಹಕೀಕತ್ತುಗಳು ನಿಮ್ಮ ಎದುರೇ ಬೆತ್ತಲಾಗಲಿದೆ. ಅದು ಬೇರೆ ಮಾತು. ಆದ್ರೆ ಸದ್ಯ ಇಂದೂರಿನ ಸಂತೆಗೆ ಬರೋ ವ್ಯಾಪಾರಸ್ಥರಿಗೆ ಆಗೋ ಅಡಚಣೆ ನೀಗಿಸಬೇಕಿದೆ. ಅಧ್ಯಕ್ಷರಾದ್ರೂ ಒಂದಿಷ್ಟು ಗಮನ ಹರಿಸಬೇಕಿದೆ.

error: Content is protected !!