ಮಂಗಳೂರಿನಲ್ಲಿ ಹಾಡುಹಗಲೇ ಮಹಿಳೆಯ ದರೋಡೆಗೆ ಯತ್ನಿಸಿದ ಭಯಾನಕ ಘಟನೆ ನಡೆದಿದೆ. ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗ ಘಟನೆ ನಡೆದಿದ್ದು ಕಾರಿನಲ್ಲಿ ಬಂದ ಅಪರಿಚಿತರು ಮಹಿಳೆಯ ಬ್ಯಾಗ್ ಕಸಿದು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಬ್ಯಾಗ್ ಕಸಿಯಲು ಬಿಡದೆ ತನ್ನ ರಕ್ಷಣೆಗೆ ಮಹಿಳೆ ತಾನೇ ಮುಂದಾಗಿದ್ದಾರೆ.

ದರೋಡೆಗಾಗಿ ಕಾರಿನಿಂದ ಇಳಿದ ವ್ಯಕ್ತಿಗೆ ಮಹಿಳೆಯೇ ಥಳಿಸಿ ಆತ್ಮರಕ್ಷಣೆ ಮಾಡಿಕೊಂಡಿದ್ದಾರೆ. ಆದರೂ, ಮಹಿಳೆಯನ್ನು ಬೀಳಿಸಿ ಬ್ಯಾಗ್ ಕಸಿಯಲು ಆರೋಪಿ ಯತ್ನಿಸಿ ವಿಫಲವಾಗಿದ್ದಾನೆ. ಮಹಿಳೆಯ ಪ್ರತಿರೋಧದಿಂದ ಬ್ಯಾಗ್ ಕಸಿಯಲು ಆಗದೆ ಆರೋಪಿಗಳು ಪರಾರಿಯಾಗಿದ್ದಾರೆ. ಈ ದೃಷ್ಯಗಳೇಲ್ಲ ಸಿಸಿಟಿವಿ ಹಾಗೂ ಮೊಬೈಲ್ ನಲ್ಲಿ ಸೆರೆಯಾಗಿದೆ.

*********************

ಜಾಹೀರಾತು

error: Content is protected !!