ಮುಂಡಗೋಡ ಸಿಪಿಐ ಬಿ.ಎಸ್. ಲೋಕಾಪುರ ನೇತೃತ್ವದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಇಸ್ಪೀಟು ಆಟದಲ್ಲಿ ತೊಡಗಿದ್ದವರನ್ನು ಹೆಡೆಮುರಿ ಕಟ್ಟಿದ್ದಾರೆ. ಮುಂಡಗೋಡ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ದಾಳಿಯಲ್ಲಿ ಒಟ್ಟೂ 22 ಜನ ಆರೋಪಿಗಳ ಮೇಲೆ ಕೇಸು ದಾಖಲಿಸಲಾಗಿದ್ದು, ಅದ್ರಲ್ಲಿ, ಬರೋಬ್ಬರಿ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ. ದಾಳಿ ವೇಳೆ ಹಲವರು ಪರಾರಿಯಾಗಿದ್ದಾರೆ, ಜೊತೆಗೆ ಬರೋಬ್ಬರಿ 38,730 ರೂ. ವಶಕ್ಕೆ ಪಡೆಯಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ರಾಮಾಪುರದಲ್ಲಿ..! ಮುಂಡಗೋಡ ತಾಲೂಕಿನ ರಾಮಾಪುರ ಗ್ರಾಮದ ಪ್ಲಾಟ್ ನಲ್ಲಿರೋ ಆಂಜನೇಯ ದೇವಸ್ಥಾನದ ಹತ್ತಿರ, ಇಸ್ಪೀಟು ಆಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಪರಿಣಾಮ, ಬರೋಬ್ಬರಿ 12 ಜನರ ಮೇಲೆ ಕೇಸು ದಾಖಲಿಸಲಾಗಿದೆ. ಇದ್ರಲ್ಲಿ, ನಾಲ್ಕು ಆರೋಪಿಗಳು ಮಾತ್ರ ಪೊಲೀಸರಿಗೆ ಸಿಕ್ಕಿದ್ದು, ಉಳಿದವರು ಪರಾರಿಯಾಗಿದ್ದಾರೆ. ಇನ್ನು ಆಟದಲ್ಲಿ ಬಳಸಿದ್ದ ಬರೋಬ್ಬರಿ 10,940 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ. ಹಳೂರಿನಲ್ಲಿ..! ಇನ್ನು, ಮುಂಡಗೋಡ ಪಟ್ಟಣದ ಹಳೂರಿನ ಲಕ್ಷ್ಮೀದೇವಿ ದೇವಸ್ಥಾನದ ಪಕ್ಕದಲ್ಲಿ ಇಸ್ಪೀಟ ಆಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು...
Top Stories
ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಬಂದಿದ್ದ ಅಪ್ರಾಪ್ತೆಯನ್ನ ಆ ಹುಡುಗ ಅತ್ಯಾಚಾರ ಮಾಡಿದ್ನಾ..? ಹಾಗಿದ್ರೆ ಕೇಸ್ ಏನಾಯ್ತು..?
ಟ್ಯಾಕ್ಸ್ ವಸೂಲಿಯಲ್ಲಿ ಮುಂಡಗೋಡ ತಾಲೂಕು ರಾಜ್ಯಕ್ಕೇ ಪ್ರಥಮ..! ತಾಪಂ ಗ್ರಾಪಂ ಅಧಿಕಾರಿ, ಸಿಬ್ಬಂದಿಗಳ ಸಾಧನೆ..!!
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಲೊಯೊಲಾ ಶಾಲೆಯ ಬಳಿ ಸರಣಿ ಅಪಘಾತ, ಚಿಟಗೇರಿಯ ಬೈಕ್ ಸವಾರ ಗಂಭೀರ..!
ಮುಂಡಗೋಡ ಪಟ್ಟಣದ ಶಿರಸಿ ರಸ್ತೆಯ ಲೊಯೋಲಾ ಶಾಲೆಯ ಬಳಿ ಸರಣಿ ಅಪಘಾತವಾಗಿದೆ. ಪರಿಣಾಮ ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ತಾಲೂಕಿನ ಚಿಟಗೇರಿಯ ಸಿದ್ದಪ್ಪ ಯಮುನಪ್ಪ ನಾಯ್ಕರ್ (45), ಎಂಬುವವನೇ ಗಂಭೀರ ಗಾಯಗೊಂಡಿ ವ್ಯಕ್ತಿಯಾಗಿದ್ದಾನೆ. ಮುಂಡಗೋಡಿನಿಂದ ಬೈಕ್ ಮೇಲೆ ಶಿರಸಿ ಮಾರ್ಗವಾಗಿ ಚಿಟಗೇರಿಗೆ ಹೋಗುತ್ತಿದ್ದ ವೇಳೆ, ಬೈಕ್ ನಿಯಂತ್ರಣ ತಪ್ಪಿ ಮತ್ತೊಂದು ಬೈಕಿಗೆ ಗುದ್ದಿ, ಆ ನಂತರ ಕಾರಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಹೀಗಾಗಿ, ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಇನ್ನು, ಮಾಹಿತಿ ತಿಳಿದು 108 ಅಂಬ್ಯುಲೆನ್ಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಧಾವಿಸಿ, ಗಾಯಾಳುವಿಗೆ ಮಾರ್ಗ ಮಧ್ಯೆ ಪ್ರಥಮ ಚಿಕಿತ್ಸೆ ಕೊಟ್ಟು ಮುಂಡಗೋಡ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಗಾಯಾಳುವಿಗೆ ಹೆಚ್ಚಿನ ಚಿಕಿತ್ಸೆ ಗೆ 108 ಅಂಬ್ಯುಲೆನ್ಸ್ ಮುಖಾಂತರ ಹುಬ್ಬಳ್ಳಿ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇಂದೂರಿನಲ್ಲಿ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ..!
ಮುಂಡಗೋಡ ತಾಲೂಕಿನ ಇಂದೂರಿನಲ್ಲಿ ಯುವಕನೋರ್ವ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಸುರೇಶ ಸಂಭಾಜಿ ಮುಗಳಿಕಟ್ಟಿ (26) ಎಂಬುವ ಯುವಕನೇ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದಾನೆ. ಇವತ್ತು, ಯಾವುದೋ ವಿಷಯಕ್ಕೆ ಮನನೊಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಅಂತಾ ತಿಳಿದು ಬಂದಿದೆ. ಇನ್ನು ಬೆಂಕಿ ಹಚ್ಚಿಕೊಂಡು ನರಳುತ್ತಿದ್ದ ವೇಳೆ ತಕ್ಷಣವೇ ಬೆಂಕಿ ನಂದಿಸಿದ ಸಾರ್ವಜನಿಕರು, 108 ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಅಂಬ್ಯುಲೆನ್ಸ್ ಸಿಬ್ಬಂದಿ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಮುಂಡಗೋಡ ತಾಲೂಕಾಸ್ಪತ್ರೆಗೆ ಸಾಗಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾಂಗ್ರೆಸ್ ಸೇರೋ ಹಿಂದಿದೆಯಾ ಮಹಾ ಪ್ಲ್ಯಾನ್..? ಲೋಕಲ್ ಬಿಟ್ಟು ಲೋಕಸಭೆಗೆ ಜಿಗಿತಾರಾ ಶಿವರಾಮ್ ಹೆಬ್ಬಾರ್..? ಕೈ ಅಂಗಳದಲ್ಲಿ ಚರ್ಚೆ ಆಗ್ತಿರೋದಾದ್ರೂ ಏನು..?
ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರೋದು ಬಹುತೇಕ ಫಿಕ್ಸು ಎಂಬುವ ಮಾಹಿತಿ ಲಭ್ಯವಾಗ್ತಿದೆ. ಆದ್ರೆ, ಈ ಬಗ್ಗೆ ಶಾಸಕ ಹೆಬ್ಬಾರರು ಯಾವುದೇ ಖಚಿತ ಮಾಹಿತಿ ನೀಡುತ್ತಿಲ್ಲ. ಬದಲಾಗಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂಗೆ ಮಾತಾಡ್ತಿದಾರೆ. ಸತ್ಯ ಅಂದ್ರೆ, ಹೆಬ್ಬಾರ್ ಸಾಹೇಬ್ರ ಲೆಕ್ಕಾಚಾರ ಬೇರೇಯದ್ದೇ ಇದೆಯಾ..? ಈಗಾಗಲೇ ಕೇಸರಿ ಅಂಗಳದಿಂದ ಒಂದು ಹೆಜ್ಜೆ ಹೊರಗೆ ಇಟ್ಟು ಆಗಿದೆಯಾ..? ಅಷ್ಟಕ್ಕೂ, ಕಾಂಗ್ರೆಸ್ “ಕೈ” ಹಿಡಿಯಲು ಇಟ್ಟಿರೋ ಬೇಡಿಕೆಗಳಾದ್ರೂ ಏನು..? ಅಸಲು, ಕಾಂಗ್ರೆಸ್ ಹೈಕಮಾಂಡ್ ಹೆಬ್ಬಾರ್ ಸಾಹೇಬ್ರ ಬೇಡಿಕೆಗಳನ್ನ ಒಪ್ಪಿಕೊಳ್ಳತ್ತಾ..? ಹಾಗಿದ್ರೆ, ಬರುವ ಲೋಕಸಭಾ ಚುನಾವಣೆ ಹೊತ್ತಿಗೆ ಇಡೀ ಕ್ಷೇತ್ರದ ಚಿತ್ರಣವೇ ಬದಲಾಗಿ ಬಿಡತ್ತಾ..? ಒಳಗೊಳಗಿನ ಬಾತ್ಮಿಗಳು ಏನಿದೆ..? ಇದೇಲ್ಲದರ ಕುರಿತಾಗಿ ವರದಿ ಇದು. ಭವಿಷ್ಯದ ಚಿಂತೆಯಾ..? ಯಸ್, ಸದ್ಯ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಗೆ ಮುಂದಿನ ರಾಜಕೀಯ ಭವಿಷ್ಯದ ಚಿಂತೆ ಶುರುವಾಗಿದೆ. ತಮ್ಮ ಜೊತೆ, ತಮ್ಮ ಸುಪುತ್ರನ ರಾಜಕೀಯ ಕಣ ಹದಗೊಳಿಸುವ ಯೋಚನೆ ತಲೆ ಹೊಕ್ಕಿದೆ. ಹೀಗಾಗಿನೇ ಬಹುತೇಕ...
ಮುಂಡಗೋಡಿನಿಂದ ನಾಪತ್ತೆಯಾಗಿದ್ದ ವ್ಯಕ್ತಿ ಬಾಚಣಕಿ ಡ್ಯಾಂ ನಲ್ಲಿ ಶವವಾಗಿ ಪತ್ತೆ..!
ಮುಂಡಗೋಡ ಪಟ್ಟಣದ ಕಂಬಾರಗಟ್ಟಿ ಪ್ಲಾಟ್ ನಿಂದ ಕಳೆದ ರವಿವಾರ ಆಗಷ್ಟ 13 ರಂದು ನಾಪತ್ತೆಯಾಗಿದ್ದ ವ್ಯಕ್ತಿ ತಾಲೂಕಿನ ಬಾಚಣಕಿ ಡ್ಯಾಂ ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇಂದು ಬೆಳಿಗ್ಗೆಯಷ್ಟೇ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ ಕುಟುಂಬಸ್ಥರು ಹುಡುಕಿ ಕೊಡುವಂತೆ ಮನವಿ ಮಾಡಿದ್ದರು. ಆದ್ರೀಗ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ಕಂಬಾರಗಟ್ಟಿ ಪ್ಲಾಟಿನ ಬಸವರಾಜ್ ಮಲ್ಲಪ್ಪ ಇಳಿಗೇರ್ (49), ಎಂಬುವವನೇ ಶವವಾಗಿ ಪತ್ತೆಯಾಗಿದ್ದು, ಇಂದು ಶವ ಜಲಾಶಯದಲ್ಲಿ ತೇಲಾಡುತ್ತಿರೋದನ್ನು ಕಂಡ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಸ್ಥಳಕ್ಕೆ ಆಗಮಿಸಿರೋ ಮುಂಡಗೋಡ ಪೊಲೀಸರು ಶವ ಹೊರತೆಗೆದಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ.
ಯಲ್ಲಾಪುರ ಕ್ಷೇತ್ರದಲ್ಲಿ ಪಕ್ಷಾಂತರದ ರೂಮರ್ರು.. ಅಷ್ಟಕ್ಕೂ, ಹೆಬ್ಬಾರ್ ಸಾಹೇಬ್ರು ಮತ್ತೆ “ಘರ್ ವಾಪಸಿ” ಅಗ್ತಾರಾ..? ಏನಿದೆ ಲೆಕ್ಕಾಚಾರ..?
ಯಲ್ಲಾಪುರ ವಿಧಾನಸಭಾ ಕ್ಷೇತ್ರ ಮತ್ತೊಮ್ಮೆ ರಾಜ್ಯಮಟ್ಟದಲ್ಲಿ ಸುದ್ದಿಯಾಗ್ತಿದೆಯಾ..? ರಾಜ್ಯ ರಾಜಕಾರಣದಲ್ಲಿ ಸದ್ಯ ಯಲ್ಲಾಪುರ ಕ್ಷೇತ್ರವನ್ನು ಬಹುಶಃ ಓರೇಗಣ್ಣಿನಿಂದ ನೋಡುವಂತಹ ಊಹಾಪೋಹಗಳು ಜಾರಿಯಲ್ಲಿವೆ. ಯಾಕಂದ್ರೆ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ವಲಸಿಗರ ಟೀಂ ನಲ್ಲಿ ಕೆಲವರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗೋದು ಪಕ್ಕಾ ಎನ್ನುವಂತಹ ಮಾತುಗಳು ಕೇಳಿ ಬರ್ತಿವೆ. ಅದ್ರಲ್ಲೂ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕರೂ ಕಾಂಗ್ರೆಸ್ ಗೆ ಸೇರ್ತಾರೆ ಅನ್ನೋ ಸುದ್ದಿಗಳು ಹರಿದಾಡ್ತಿದೆ. ಆದ್ರೆ, ಇದೇಲ್ಲ ಜಸ್ಟ್ ರೂಮರ್ರು ಅಂತಾ ಶಾಸಕರ ಆಪ್ತ ವಲಯ ಸರಾಸಗಾಟಾಗಿ ತಳ್ಳಿ ಹಾಕ್ತಿದೆ. ನಿಜಕ್ಕೂ ಸಾಧ್ಯವಾ..? ಅಸಲು, ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯನ್ನು ಸದ್ಯ ಪ್ರಬಲವಾಗಿಯೇ ಮುನ್ನಡೆಸ್ತಿರೋ ಶಾಸಕ ಶಿವರಾಮ್ ಹೆಬ್ಬಾರ್, ಇಂತಹದ್ದೊಂದು ಪಕ್ಷಾಂತರದ ತೀರ್ಮಾನ ಕೈಗೊಳ್ಳೊಕೆ ಸಾಧ್ಯವಾ..? ಇಂತಹ ಪ್ರಶ್ನೆಗಳು ಸಹಜವಾಗೇ ಕಾಡ್ತಿವೆ. ಇಡೀ ರಾಜ್ಯದಲ್ಲೇ ಕಾಂಗ್ರೆಸ್ ಗಾಳಿ ಬೀಸಿ, ಗೆಲ್ಲೋದೇ ಅನುಮಾನ ಅನ್ನೊ ವಾತಾವರಣ ಇದ್ದಾಗಲೇ ಗೆದ್ದು ಬಂದವರು ಹೆಬ್ಬಾರ್. ಕ್ಷೇತ್ರದಲ್ಲಿ ಅದೇಂತದ್ದೇ ವಾತಾವರಣ ಇದ್ರೂ ನಾನು ಗೆಲ್ಲೋದೇ ಫಿಕ್ಸು ಅಂತ ಎದೆ ತಟ್ಟಿ ಹೇಳುವ...
ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಟಿಬೇಟಿಯನ್ ಕ್ಯಾಂಪ್ ಬಳಿ ಗಾಂಜಾ “ದಂಧೆ” ಗಿಳಿದಿದ್ದ ಇಬ್ಬರು ಅಂದರ್..!
ಮುಂಡಗೋಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಎಳೆದು ತಂದಿದ್ದಾರೆ. ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕಾಲೋನಿ ನಂಬರ್ ಒಂದರ ಬಳಿ ಇಬ್ಬರನ್ನು ಹೆಡೆಮುರಿ ಕಟ್ಟಿದ್ದಾರೆ. 948 ಗ್ರಾಂ ಗಾಂಜಾ..! ಅಂದಹಾಗೆ, ಪಕ್ಕಾ ಮಾಹಿತಿಗಳ ಆಧಾರದಲ್ಲಿ ಅಕ್ರಮಿಗಳ ಬೆನ್ನು ಬಿದ್ದಿದ್ದ ಪೊಲೀಸರು ಕೊನೆಗೂ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಡಗೋಡ ನೆಹರು ನಗರದ ಸಂದೇಶ ಸಂಗಪ್ಪ ಕೋಕರೆ, ತಾಲೂಕಿನ ಮಜ್ಜಿಗೇರಿಯ ರಿಯಾಜ್ ಅಹ್ಮದ್ ಹಜರೆಸಾಬ್ ಮುಗಳಿಕಟ್ಟಿ ಎಂಬುವ ಇಬ್ಬರು ಆರೋಪಿಗಳನ್ನು ಆರೆಸ್ಟ್ ಮಾಡಿದ್ದಾರೆ. ಇವ್ರಿಂದ ಬರೋಬ್ಬರಿ 948 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ಏನಿಲ್ಲವೆಂದ್ರೂ 10 ಸಾವಿರ ರೂಪಾಯಿ. ಇದ್ರ ಜೊತೆ 550 ರೂ. ನಗದು ಸೇರಿದಂತೆ ಮಾರಾಟಕ್ಕೆ ಬಳಸಿದ್ದ ವಸ್ತುಗಳನ್ನೂ ಜಪ್ತಿ ಮಾಡಿಕೊಳ್ಳಲಾಗಿದೆ. ಸಿಪಿಐ ಬರಮಪ್ಪ ಲೋಕಾಪುರ್ ನೇತೃತ್ವದಲ್ಲಿ ಪಿಎಸ್ಐ ಯಲ್ಲಾಲಿಂಗ ಕುನ್ನೂರು, ಕ್ರೈಂ ಪಿಎಸ್ ಐ ಹನ್ಮಂತಪ್ಪ ವಡಗುಂಟಿ, ಸಿಬ್ಬಂದಿಗಳಾದ ಅನ್ವರ್ ಖಾನ್ , ಸಲೀಂ ಕೊಲ್ಲಾಪುರ,...
ಇಂದಿರಾನಗರ ಬಳಿ ಬೈಕಿಗೆ ಕಾರ್ ಡಿಕ್ಕಿ, ಕೊಪ್ಪ ಗ್ರಾಮದ ಬೈಕ್ ಸವಾರನಿಗೆ ಗಾಯ..!
ಮುಂಡಗೋಡ ತಾಲೂಕಿನ ಕಲಘಟಗಿ ರಸ್ತೆಯ ಇಂದಿರಾನಗರ ಬಳಿ ಕಾರು ಬೈಕ್ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರನಿಗೆ ಗಾಯವಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರನ ಪಾದದ ಮಾಂಸ ಹೊರ ಬಿದ್ದಿದೆ. ಹೀಗಾಗಿ, ಸದ್ಯ ಗಾಯಾಳುವನ್ನು ತಾಲೂಕಾಸ್ಪತ್ರೆಗೆ ಸಾಗಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಕೈಗೊಂಡಿದ್ದಾರೆ. ಕೊಪ್ಪ (ಇಂದೂರು) ಗ್ರಾಮದ ಬಸವರಾಜ್ ಹಡಪದ ಎಂಬುವವನೇ ಗಾಯಗೊಂಡಿರೋ ಬೈಕ್ ಸವಾರನಾಗಿದ್ದಾನೆ. ಮುಂಡಗೋಡ ಕಡೆಯಿಂದ ಕಲಘಟಗಿ ಕಡೆಗೆ ಹೋಗುತ್ತಿದ್ದ ಕಾರ್, ಬೈಕ್ ಗೆ ಡಿಕ್ಕಿಯಾಗಿದೆ. ಹೀಗಾಗಿ, ಕಾರಿನ ಮುಂಬಾಗ ಕೂಡ ನುಜ್ಜುಗುಜ್ಜಾಗಿದೆ. ಅಲ್ಲದೇ ಬೈಕ್ ಕೂಡ ಡಿಕ್ಕಿಯ ರಭಸಕ್ಕೆ ರಸ್ತೆ ಬದಿಯಲ್ಲಿ ಬಿದ್ದಿದೆ. ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ************
ಬಾಚಣಕಿಯಲ್ಲಿ ರಾಷ್ಟ್ರಧ್ವಜಕ್ಕೆ ಭಾರೀ ಅಪಮಾನ, ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿಯಲ್ಲಿ ಧ್ವಜಕ್ಕೆ ಇದೇಂತಾ ಗತಿ..? ಏನ್ ಮಾಡ್ತಿದ್ದಿರಿ ಅಧಿಕಾರಿಗಳೆ..?
ಇಡೀ ದೇಶ ಇವತ್ತು ರಾಷ್ಟ್ರಭಕ್ತಿಯ ಸಿಹಿ ಸಂಭ್ರಮದಲ್ಲಿದೆ. 77 ನೇಯ ಸ್ವತಂತ್ರ ದಿನಾಚರಣೆಯ ಮಹಾ ಸಂಭ್ರಮದಲ್ಲಿ ಎಲ್ಲೆಲ್ಲೂ ತ್ರಿವರ್ಣ ಧ್ವಜ ಹಾರಾಡುತ್ತಿವೆ. ಆದ್ರೆ, ಮುಂಡಗೋಡ ತಾಲೂಕಿನ ಇದೊಂದು ಗ್ರಾಮದಲ್ಲಿ ಸರ್ಕಾರದ ಆದೇಶವಿದ್ದರೂ ರಾಷ್ಟ್ರಧ್ವಜಕ್ಕೆ ಭಾರೀ ಅಪಮಾನ ಮಾಡಲಾಗಿದೆ. ಧ್ವಜ ಸ್ತಂಬ ಕಟ್ಟಿ, ಹೆಮ್ಮೆಯ ಧ್ವಜವನ್ನೂ ಕಂಬಕ್ಕೆ ಏರಿಸಿಟ್ಟು, ಇನ್ನೇನು ಧ್ವಜಾರೋಹಣ ಮಾಡಬೇಕಿದ್ದವರು ಭಾರೀ ಅಪಮಾನ ಮಾಡಿದ್ದಾರೆ. ಧ್ವಜ ಹಾರಿಸದೇ ಇಡೀ ಧ್ವಜ ಸ್ತಂಬವನ್ನೇ ಕಿತ್ತು ಹಾಕಿ ಏನೂ ಆಗಿಲ್ಲದವರಂತೆ ಬೆಪ್ಪಗೆ ಕುಳಿತಿದ್ದಾರೆ. ನಡೆದದ್ದು ಎಲ್ಲಿ..? ಅಂದಹಾಗೆ ಇದು ನಡೆದಿದ್ದು ಬಾಚಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ. ಅಷ್ಟಕ್ಕೂ ಇದನ್ನ ಬಾಚಣಕಿ ಗ್ರಾಮ ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿ ಅನ್ನಬೇಕೋ ಅಥವಾ ಹುಂಬತನ ಅನ್ನಬೇಕೋ ಅರ್ಥವೇ ಆಗ್ತಿಲ್ಲ. ಯಾಕಂದ್ರೆ, ಸ್ವತಂತ್ರ ದಿನಾಚರಣೆ ದಿನ ಇಲ್ಲಿನ ಅಮೃತ ಸರೋವರದ ಹತ್ತಿರ ಹಾರಾಡಬೇಕಿದ್ದ ಧ್ವಜ ಹಾರಾಡಲೇ ಇಲ್ಲ. ಬದಲಾಗಿ, ಸಂಪೂರ್ಣ ತಯಾರಿ ಆಗಿದ್ದರೂ, ಇಡೀ ಧ್ವಜ ಸ್ತಂಭವನ್ನೇ ಅನಾಮತ್ತಾಗಿ ಕಿತ್ತು ಹಾಕಿದ್ದಾರೆ. ಇದ್ರೊಂದಿಗೆ ರಾಷ್ಟ್ರಧ್ವಜಕ್ಕೆ ಭಾರೀ ಅಪಮಾನ...
ಧ್ವಜಾರೋಹಣಕ್ಕೆ ಹೋಗುತ್ತಿದ್ದ ಶಾಲಾ ಶಿಕ್ಷಕ ಬೈಕ್ ಅಪಘಾತದಲ್ಲಿ ಸಾವು..!
ಕುಮಟಾ : ಧ್ವಜಾರೋಹಣಕ್ಕೆಂದು ಬೈಕ್ ಮೇಲೆ ಶಾಲೆಗೆ ಹೋಗುತ್ತಿದ್ದ ಶಿಕ್ಷಕರೊಬ್ಬರು ದಾರುಣ ಸಾವು ಕಂಡಿದ್ದಾರೆ. ಬೋಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಮಟಾ ತಾಲೂಕಿನ ಹಳಕಾರ ಕ್ರಾಸ್ ಸಮೀಪ ಘಟನೆ ನಡೆದಿದ್ದು, ಅಪಘಾತದಲ್ಲಿ ಹೆಗಡೆ ಗ್ರಾಮದ ಮೇಲಿನಕೇರಿ ನಿವಾಸಿಯಾಗಿದ್ದ ಗೋಪಾಲ ಪಟಗಾರ (50) ಮೃತಪಟ್ಟ ಶಿಕ್ಷಕರಾಗಿದ್ದಾರೆ. ಇವರು ಗುಡೆಅಂಗಡಿ ಶಾಲೆ ಶಿಕ್ಷಕರಾಗಿದ್ದು, ಧ್ವಜಾರೋಹಣಕ್ಕಾಗಿ ಬೆಳಿಗ್ಗೆ ಹೆಗಡೆಯ ಮೇಲಿನ ಕೇರಿಯಲ್ಲಿರುವ ತಮ್ಮ ಮನೆಯಿಂದ ಬೈಕ್ ಮೇಲೆ ಶಾಲೆಗೆ ಹೋಗುತ್ತಿದ್ದಾಗ ಎದುರಿನಿಂದ ಅತೀ ವೇಗದಿಂದ ಬಂದ ಬೋಲೆರೋ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಶಿಕ್ಷಕ ಗೋಪಾಲ ಪಟಗಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.