ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಟಿಬೇಟಿಯನ್ ಕ್ಯಾಂಪ್ ಬಳಿ ಗಾಂಜಾ “ದಂಧೆ” ಗಿಳಿದಿದ್ದ ಇಬ್ಬರು ಅಂದರ್..!

ಮುಂಡಗೋಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಎಳೆದು ತಂದಿದ್ದಾರೆ. ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕಾಲೋನಿ ನಂಬರ್ ಒಂದರ ಬಳಿ ಇಬ್ಬರನ್ನು ಹೆಡೆಮುರಿ ಕಟ್ಟಿದ್ದಾರೆ.

948 ಗ್ರಾಂ ಗಾಂಜಾ..!
ಅಂದಹಾಗೆ, ಪಕ್ಕಾ ಮಾಹಿತಿಗಳ ಆಧಾರದಲ್ಲಿ ಅಕ್ರಮಿಗಳ ಬೆನ್ನು ಬಿದ್ದಿದ್ದ ಪೊಲೀಸರು ಕೊನೆಗೂ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಡಗೋಡ ನೆಹರು ನಗರದ ಸಂದೇಶ ಸಂಗಪ್ಪ ಕೋಕರೆ, ತಾಲೂಕಿನ ಮಜ್ಜಿಗೇರಿಯ ರಿಯಾಜ್ ಅಹ್ಮದ್ ಹಜರೆಸಾಬ್ ಮುಗಳಿಕಟ್ಟಿ ಎಂಬುವ ಇಬ್ಬರು ಆರೋಪಿಗಳನ್ನು ಆರೆಸ್ಟ್ ಮಾಡಿದ್ದಾರೆ. ಇವ್ರಿಂದ ಬರೋಬ್ಬರಿ 948 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ಏನಿಲ್ಲವೆಂದ್ರೂ 10 ಸಾವಿರ ರೂಪಾಯಿ. ಇದ್ರ ಜೊತೆ 550 ರೂ. ನಗದು ಸೇರಿದಂತೆ ಮಾರಾಟಕ್ಕೆ ಬಳಸಿದ್ದ ವಸ್ತುಗಳನ್ನೂ ಜಪ್ತಿ ಮಾಡಿಕೊಳ್ಳಲಾಗಿದೆ.

ಸಿಪಿಐ ಬರಮಪ್ಪ ಲೋಕಾಪುರ್ ನೇತೃತ್ವದಲ್ಲಿ
ಪಿಎಸ್ಐ ಯಲ್ಲಾಲಿಂಗ ಕುನ್ನೂರು, ಕ್ರೈಂ ಪಿಎಸ್ ಐ ಹನ್ಮಂತಪ್ಪ ವಡಗುಂಟಿ, ಸಿಬ್ಬಂದಿಗಳಾದ ಅನ್ವರ್ ಖಾನ್ , ಸಲೀಂ ಕೊಲ್ಲಾಪುರ, ಕೋಟೇಶ್ ನಾಗರವಳ್ಳಿ, ಅಣ್ಣಪ್ಪ ಬುಡಿಗೆರ್, ತಿರುಪತಿ , ಬಸವರಾಜ್ ಲಮಾಣಿ ದಾಳಿಯಲ್ಲಿ ಭಾಗಿಯಾಗಿದ್ರು.

error: Content is protected !!