ಮುಂಡಗೋಡ ಲೊಯೊಲಾ ಶಾಲೆಯ ಬಳಿ ಸರಣಿ ಅಪಘಾತ, ಚಿಟಗೇರಿಯ ಬೈಕ್ ಸವಾರ ಗಂಭೀರ..!

ಮುಂಡಗೋಡ ಪಟ್ಟಣದ ಶಿರಸಿ ರಸ್ತೆಯ ಲೊಯೋಲಾ ಶಾಲೆಯ ಬಳಿ ಸರಣಿ ಅಪಘಾತವಾಗಿದೆ. ಪರಿಣಾಮ ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.

ಮುಂಡಗೋಡ ತಾಲೂಕಿನ ಚಿಟಗೇರಿಯ
ಸಿದ್ದಪ್ಪ ಯಮುನಪ್ಪ ನಾಯ್ಕರ್ (45), ಎಂಬುವವನೇ ಗಂಭೀರ ಗಾಯಗೊಂಡಿ ವ್ಯಕ್ತಿಯಾಗಿದ್ದಾನೆ. ಮುಂಡಗೋಡಿನಿಂದ ಬೈಕ್ ಮೇಲೆ ಶಿರಸಿ ಮಾರ್ಗವಾಗಿ ಚಿಟಗೇರಿಗೆ ಹೋಗುತ್ತಿದ್ದ ವೇಳೆ, ಬೈಕ್ ನಿಯಂತ್ರಣ ತಪ್ಪಿ ಮತ್ತೊಂದು ಬೈಕಿಗೆ ಗುದ್ದಿ, ಆ ನಂತರ ಕಾರಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ‌. ಹೀಗಾಗಿ, ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ.

ಇನ್ನು, ಮಾಹಿತಿ ತಿಳಿದು 108 ಅಂಬ್ಯುಲೆನ್ಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಧಾವಿಸಿ, ಗಾಯಾಳುವಿಗೆ ಮಾರ್ಗ ಮಧ್ಯೆ ಪ್ರಥಮ ಚಿಕಿತ್ಸೆ ಕೊಟ್ಟು ಮುಂಡಗೋಡ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಗಾಯಾಳುವಿಗೆ ಹೆಚ್ಚಿನ ಚಿಕಿತ್ಸೆ ಗೆ 108 ಅಂಬ್ಯುಲೆನ್ಸ್ ಮುಖಾಂತರ ಹುಬ್ಬಳ್ಳಿ ಕಿಮ್ಸ್ ಗೆ ರವಾನಿಸಲಾಗಿದೆ.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

error: Content is protected !!