ಇಡೀ ದೇಶ ಇವತ್ತು ರಾಷ್ಟ್ರಭಕ್ತಿಯ ಸಿಹಿ ಸಂಭ್ರಮದಲ್ಲಿದೆ. 77 ನೇಯ ಸ್ವತಂತ್ರ ದಿನಾಚರಣೆಯ ಮಹಾ ಸಂಭ್ರಮದಲ್ಲಿ ಎಲ್ಲೆಲ್ಲೂ ತ್ರಿವರ್ಣ ಧ್ವಜ ಹಾರಾಡುತ್ತಿವೆ. ಆದ್ರೆ, ಮುಂಡಗೋಡ ತಾಲೂಕಿನ ಇದೊಂದು ಗ್ರಾಮದಲ್ಲಿ ಸರ್ಕಾರದ ಆದೇಶವಿದ್ದರೂ ರಾಷ್ಟ್ರಧ್ವಜಕ್ಕೆ ಭಾರೀ ಅಪಮಾನ ಮಾಡಲಾಗಿದೆ. ಧ್ವಜ ಸ್ತಂಬ ಕಟ್ಟಿ, ಹೆಮ್ಮೆಯ ಧ್ವಜವನ್ನೂ ಕಂಬಕ್ಕೆ ಏರಿಸಿಟ್ಟು, ಇನ್ನೇನು ಧ್ವಜಾರೋಹಣ ಮಾಡಬೇಕಿದ್ದವರು ಭಾರೀ ಅಪಮಾನ ಮಾಡಿದ್ದಾರೆ. ಧ್ವಜ ಹಾರಿಸದೇ ಇಡೀ ಧ್ವಜ ಸ್ತಂಬವನ್ನೇ ಕಿತ್ತು ಹಾಕಿ ಏನೂ ಆಗಿಲ್ಲದವರಂತೆ ಬೆಪ್ಪಗೆ ಕುಳಿತಿದ್ದಾರೆ.
ನಡೆದದ್ದು ಎಲ್ಲಿ..?
ಅಂದಹಾಗೆ ಇದು ನಡೆದಿದ್ದು ಬಾಚಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ. ಅಷ್ಟಕ್ಕೂ ಇದನ್ನ ಬಾಚಣಕಿ ಗ್ರಾಮ ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿ ಅನ್ನಬೇಕೋ ಅಥವಾ ಹುಂಬತನ ಅನ್ನಬೇಕೋ ಅರ್ಥವೇ ಆಗ್ತಿಲ್ಲ. ಯಾಕಂದ್ರೆ, ಸ್ವತಂತ್ರ ದಿನಾಚರಣೆ ದಿನ ಇಲ್ಲಿನ ಅಮೃತ ಸರೋವರದ ಹತ್ತಿರ ಹಾರಾಡಬೇಕಿದ್ದ ಧ್ವಜ ಹಾರಾಡಲೇ ಇಲ್ಲ. ಬದಲಾಗಿ, ಸಂಪೂರ್ಣ ತಯಾರಿ ಆಗಿದ್ದರೂ, ಇಡೀ ಧ್ವಜ ಸ್ತಂಭವನ್ನೇ ಅನಾಮತ್ತಾಗಿ ಕಿತ್ತು ಹಾಕಿದ್ದಾರೆ. ಇದ್ರೊಂದಿಗೆ ರಾಷ್ಟ್ರಧ್ವಜಕ್ಕೆ ಭಾರೀ ಅಪಮಾನ ಮಾಡಿದ್ದಾರೆ ಅಂತಾ ಪ್ರಜ್ಞಾವಂತರು ಆಕ್ರೋಶ ಹೊರಹಾಕಿದ್ದಾರೆ.
ಆದೇಶವಿದ್ದರೂ..!
ಅಂದಹಾಗೆ, ಬಾಚಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅದೊಂದು ಕೆರೆಯನ್ನು ಅಮೃತ ಸರೋವರ ಅಂತಾ ಘೋಷಣೆ ಮಾಡಿ, ಸಾರ್ವಜನಿಕರ ಅನಕೂಲಕ್ಕಾಗಿಯೇ ಉದ್ಯೋಗ ಖಾತ್ರಿ ಯೋಜನೆಯ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಹಾಗಿರೋ ಕೆರೆಯಲ್ಲಿ, ಗ್ರಾಮಸ್ಥರೊಂದಿಗೆ ಸೇರಿ ರಾಷ್ಟ್ರೀಯ ಹಬ್ಬಗಳಂದು ಧ್ವಜಾರೋಹಣ ಮಾಡುವಂತೆ ಸೂಚನೆ ಸಹ ಇದೆ. ಖುದ್ದು ಪಂಚಾಯತ ರಾಜ್ ಇಲಾಖೆಯಿಂದಲೇ ಅಧಿಕೃತ ಆದೇಶ ಸಹ ಬಂದಿದೆ.ಆದ್ರೂ, ಅದೇಲ್ಲದರ ಅರಿವೇ ಇಲ್ಲದಂತೆ ಇಲ್ಲಿನ ಗ್ರಾಮ ಪಂಚಾಯತಿ ಅಧಿಕಾರಿಗಳು ಧ್ವಜಾರೋಹಣ ಮಾಡಲೇ ಇಲ್ಲ. ತಾಪಂ ಅಧಿಕಾರಿಯೂ ಕಣ್ಣೆತ್ತಿ ನೋಡಿಲ್ಲ.
ಛೇ.. ಹೀಗಾ..?
ಅಸಲು, ಬಾಚಣಕಿ ಗ್ರಾಮ ಪಂಚಾಯತಿಉ ಅಧಿಕಾರಿಗಳಿಗೆ ಬಹುಶಃ ರಾಷ್ಟ್ರಧ್ವಜದ ಮಹತ್ವವೇ ಅರ್ಥವಾಗಿಲ್ಲ ಅನಿಸ್ತಿದೆ. ಯಾಕಂದ್ರೆ, ಇವ್ರು ಇವತ್ತು ರಾಷ್ಟ್ರಧ್ವಜಕ್ಕೆಮಾಡಿರೋ ಅಪಮಾನ ನಿಜಕ್ಕೂ ಯಾರೂ ಕ್ಷಮಿಸದಂತದ್ದು. ಇವ್ರಿಗೆ ರಾಷ್ಟ್ರಧ್ವಜ ಹಾರಿಸಲು ಇಷ್ಟವಿಲ್ಲದಿದ್ದರೆ ಸುಮ್ಮನೆ ಇದ್ದು ಬಿಡಬೇಕಿತ್ತು. ಆದ್ರೆ,ಧ್ವಜ ಸ್ತಂಬ ನಿರ್ಮಿಸಿ, ಆ ಧ್ವಜಸ್ತಂಬಕ್ಕೆ ಧ್ವಜವನ್ನೂ ಏರಿಸಿ, ಇನ್ನೇನು ಧ್ವಜಾರೋಹಣವಷ್ಟೇ ಬಾಕಿ ಇತ್ತು. ವಿದ್ಯಾರ್ಥಿಗಳು, ಗ್ರಾಮಸ್ಥರು ಕೂಡ ಧ್ವಜಾರೋಹಣಕ್ಕೆ ಬಂದು ಆಗಿತ್ತು. ಆದ್ರೆ, ಅಷ್ಟೊತ್ತಿಗಾಗಲೇ ಪಿಡಿಓ ಧ್ವಜಾರೋಹಣ ಮಾಡಿಸದೇ ಎಲ್ಲರನ್ನೂ ವಾಪಸ್ ಕಳಿಸಿದ್ದಾರೆ. ಅಲ್ಲದೇ, ಹಾಗೆ ಕಟ್ಟಿದ್ದ ಧ್ವಜವನ್ನು ಹಾರಿಸದೇ ಕಂಬವನ್ನೇ ಬುಡ ಸಮೇತ ಕಿತ್ತು ಕೆಳಗೆ ಇಟ್ಟಿದ್ದಾರೆ ಎನ್ನಲಾಗಿದೆ.
ತಾಪಂ ಅಧಿಕಾರಿ ಎಲ್ಲಿ..?
ಇಷ್ಟೇಲ್ಲ, ಘಟನೆ ನಡೆದು ಗಂಟೆಗಳೇ ಕಳೆದ್ರೂ ಈ ಬಗ್ಗೆ ಇನ್ನೂ ಕೂಡ ತಾಲೂಕಾಡಳಿತಕ್ಕೆ ಏನಂದ್ರೆ ಏನೂ ಗೊತ್ತಿಲ್ಲವೆನೊ..? ಈ ಬಗ್ಗೆ ಅಧಿಕಾರಿಗಳನ್ನ ಕೇಳಿದ್ರೆ ಸಮರ್ಪಕ ಉತ್ತರಗಳು ಸಿಕ್ಕುತ್ತಲೇ ಇಲ್ಲ. ಅದ್ರಲ್ಲೂ ಮುಂಡಗೋಡ ತಾಪಂ ಅಧಿಕಾರಿಗೆ ಇದೇಲ್ಲದರ ಅರಿವೇ ಇಲ್ಲವಾ..? ತಮ್ಮ ಇಲಾಖೆಯ ಬೇಜಾವಾಬ್ದಾರಿಯಿಂದ ಇಂತಹದ್ದೊಂದು ಘಟನೆ ನಡೆದಿದ್ದರೂ ಏನು ಕ್ರಮ ಕೈಗೊಂಡಿದ್ದಾರೆ..? ತಕ್ಷಣವೇ ಉತ್ತರಿಸಬೇಕಿದೆ.
**********