ಧ್ವಜಾರೋಹಣಕ್ಕೆ ಹೋಗುತ್ತಿದ್ದ ಶಾಲಾ ಶಿಕ್ಷಕ ಬೈಕ್ ಅಪಘಾತದಲ್ಲಿ ಸಾವು..!

ಕುಮಟಾ : ಧ್ವಜಾರೋಹಣಕ್ಕೆಂದು ಬೈಕ್ ಮೇಲೆ ಶಾಲೆಗೆ ಹೋಗುತ್ತಿದ್ದ ಶಿಕ್ಷಕರೊಬ್ಬರು ದಾರುಣ ಸಾವು ಕಂಡಿದ್ದಾರೆ. ಬೋಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕುಮಟಾ ತಾಲೂಕಿನ ಹಳಕಾರ ಕ್ರಾಸ್ ಸಮೀಪ‌ ಘಟನೆ ನಡೆದಿದ್ದು, ಅಪಘಾತದಲ್ಲಿ ಹೆಗಡೆ ಗ್ರಾಮದ ಮೇಲಿನಕೇರಿ ನಿವಾಸಿಯಾಗಿದ್ದ ಗೋಪಾಲ ಪಟಗಾರ (50) ಮೃತಪಟ್ಟ ಶಿಕ್ಷಕರಾಗಿದ್ದಾರೆ. ಇವರು ಗುಡೆಅಂಗಡಿ ಶಾಲೆ ಶಿಕ್ಷಕರಾಗಿದ್ದು, ಧ್ವಜಾರೋಹಣಕ್ಕಾಗಿ ಬೆಳಿಗ್ಗೆ ಹೆಗಡೆಯ ಮೇಲಿನ ಕೇರಿಯಲ್ಲಿರುವ ತಮ್ಮ ಮನೆಯಿಂದ ಬೈಕ್ ಮೇಲೆ‌ ಶಾಲೆಗೆ ಹೋಗುತ್ತಿದ್ದಾಗ ಎದುರಿನಿಂದ ಅತೀ ವೇಗದಿಂದ ಬಂದ ಬೋಲೆರೋ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಶಿಕ್ಷಕ ಗೋಪಾಲ ಪಟಗಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!