ಮುಂಡಗೋಡ ಪೊಲೀಸರ ದಾಳಿ, ಇಸ್ಪೀಟು ಆಟದಲ್ಲಿ ತೊಡಗಿದ್ದ 22 ಜನರ ಮೇಲೆ ಕೇಸ್, ಹಲವರು ವಶಕ್ಕೆ, ಕೆಲವರು ಎಸ್ಕೇಪ್..!

ಮುಂಡಗೋಡ ಸಿಪಿಐ ಬಿ.ಎಸ್. ಲೋಕಾಪುರ ನೇತೃತ್ವದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಇಸ್ಪೀಟು ಆಟದಲ್ಲಿ ತೊಡಗಿದ್ದವರನ್ನು ಹೆಡೆಮುರಿ ಕಟ್ಟಿದ್ದಾರೆ. ಮುಂಡಗೋಡ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ದಾಳಿಯಲ್ಲಿ ಒಟ್ಟೂ 22 ಜನ ಆರೋಪಿಗಳ‌ ಮೇಲೆ ಕೇಸು ದಾಖಲಿಸಲಾಗಿದ್ದು, ಅದ್ರಲ್ಲಿ, ಬರೋಬ್ಬರಿ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ. ದಾಳಿ ವೇಳೆ ಹಲವರು ಪರಾರಿಯಾಗಿದ್ದಾರೆ, ಜೊತೆಗೆ ಬರೋಬ್ಬರಿ 38,730 ರೂ. ವಶಕ್ಕೆ ಪಡೆಯಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ‌‌.

ರಾಮಾಪುರದಲ್ಲಿ..!
ಮುಂಡಗೋಡ ತಾಲೂಕಿನ ರಾಮಾಪುರ ಗ್ರಾಮದ ಪ್ಲಾಟ್ ನಲ್ಲಿರೋ ಆಂಜನೇಯ ದೇವಸ್ಥಾನದ ಹತ್ತಿರ, ಇಸ್ಪೀಟು ಆಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಪರಿಣಾಮ, ಬರೋಬ್ಬರಿ 12 ಜನರ ಮೇಲೆ ಕೇಸು ದಾಖಲಿಸಲಾಗಿದೆ. ಇದ್ರಲ್ಲಿ, ನಾಲ್ಕು ಆರೋಪಿಗಳು ಮಾತ್ರ ಪೊಲೀಸರಿಗೆ ಸಿಕ್ಕಿದ್ದು, ಉಳಿದವರು ಪರಾರಿಯಾಗಿದ್ದಾರೆ‌. ಇನ್ನು ಆಟದಲ್ಲಿ ಬಳಸಿದ್ದ ಬರೋಬ್ಬರಿ 10,940 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ‌.

ಹಳೂರಿನಲ್ಲಿ..!
ಇನ್ನು, ಮುಂಡಗೋಡ ಪಟ್ಟಣದ ಹಳೂರಿನ ಲಕ್ಷ್ಮೀದೇವಿ ದೇವಸ್ಥಾನದ ಪಕ್ಕದಲ್ಲಿ ಇಸ್ಪೀಟ ಆಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಬರೋಬ್ಬರಿ 10 ಜನರ ಮೇಲೆ ಕೇಸು ದಾಖಲಾಗಿದೆ. ಇದ್ರಲ್ಲಿಯೂ ಕೂಡ 6 ಜನ ಆರೋಪಿಗಳು ಮಾತ್ರ ಪೊಲೀಸರ ಕೈಗೆ ತಗಲಾಕ್ಕೊಂಡಿದ್ದು, ಉಳಿದ ನಾಲ್ವರು ಪರಾರಿಯಾಗಿದ್ದಾರೆ‌. ಇಲ್ಲಿ ಆಟದಲ್ಲಿ ಬಳಸಿದ್ದ ಒಟ್ಟುಇ 27,790 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

error: Content is protected !!