ಮುಂಡಗೋಡ: ತಾಲೂಕಿನ ಯಲ್ಲಾಪುರ ರಸ್ತೆಯ ಬಡ್ಡಿಗೇರಿ ಕ್ರಾಸ್ ಬಳಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ಎಸ್ ವಾಹನ ಸ್ಟೆರಿಂಗ್ ಕಟ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು ಸುಮಾರು 15 ಕ್ಕೂ ಹೆಚ್ಚು ಜನರಿಗೆ ಗಾಯವಾದ ದಾರುಣ ಘಟನೆ ನಡೆದಿದೆ. ಮಾಂಬು ಗಾವಡೆ (24) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಗಾಯಾಳುಗಳನ್ನು ಸದ್ಯ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಅದ್ರಲ್ಲಿ 6 ಜನರ ಸ್ಥಿತಿ ಗಂಭೀರವಾಗಿದ್ದು, ಅವ್ರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಅಂದಹಾಗೆ, ಬಡ್ಡಿಗೇರಿಯಿಂದ ಕುಸೂರಿಗೆ ಕಾರ್ಮಿಕರನ್ನು ಕರೆತರುತ್ತಿದ್ದ ಟಾಟಾ ಎಸ್ ವಾಹನ ಚಲಿಸುತ್ತಿದ್ದಾಗಲೇ ಸ್ಟೇರಿಂಗ್ ಕಟ್ ಆಗಿತ್ತು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಟಾಟಾ ಎಸ್ ವಾಹನ ಪಲ್ಟಿಯಾಗಿ ಅವಘಡ ಸಂಭವಿಸಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ತಾಲೂಕಾಸ್ಪತ್ರೆಗೆ ಪಿಎಸ್ಐ ಬಸವರಾಜ್ ಮಬನೂರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Top Stories
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ಮಳಗಿ ಡ್ಯಾಂನಲ್ಲಿ ಕೊಲೆಯಾದ್ನಾ ಭಟ್ಕಳದ ವಿನಾಯಕ..? ಆ ಸಾವಿನ ಸುತ್ತ ಕುಟುಂಬಸ್ಥರ ಅನುಮಾನಗಳೇನು..?
ಮುಂಡಗೋಡ: ಮಳಗಿ ಧರ್ಮಾ ಜಲಾಶಯದ ಒಡಲಿನಲ್ಲಿ ಕ್ರೌರ್ಯಗಳೂ ನಡಿತಿವೆಯಾ..? ನಿಜಕ್ಕೂ ಆ ಒಂದು ಸಾವು, ಸಾವಿನಾಚೆಗಿನ ಬಿಡಿಸಲಾಗದ ಸತ್ಯಗಳು ಎಂತವರನ್ನೂ ಒಂದುಕ್ಷಣ ತಲ್ಲಣಗೊಳಿಸ್ತಿವೆ. ಭಟ್ಕಳದಿಂದ ಶಿರಸಿ ಮಾರಿ ಜಾತ್ರೆಗೆ ಬಂದಿದ್ದ ಯುವಕ ನೀರುಪಾಲಾಗಿದ್ದರ ಹಿಂದೆ, ಬರೀ ಅನುಮಾನಗಳೇ ಹಾಸು ಹೊಕ್ಕಾಗಿವೆ. ಮಗನನ್ನ ಕಳೆದುಕೊಂಡ ಕುಟುಂಬವೀಗ ಅಕ್ಷರಶಃ ಅನಾಥವಾಗಿದೆ. ಅವತ್ತು ಮಾ.22 ಭಟ್ಕಳದ ಶಿರಾಲಿ ಮೂಲದ ವಿನಾಯಕ ಜನ್ನು ಎನ್ನುವ ಯುವಕ ಮಾರ್ಚ್ 22ರಂದು ಇದೇ ಮಳಗಿಯ ಧರ್ಮಾ ಜಲಾಶಯದಲ್ಲಿ ಹೆಣವಾಗಿ ಸಿಕ್ಕಿದ್ದ. ತನ್ನ ಗೆಳೆಯರೊಂದಿಗೆ ಶಿರಸಿ ಜಾತ್ರೆಗೆ ಅಂತಾ ಬಂದಿದ್ದವನು ಧರ್ಮಾ ಜಲಾಶಯದಲ್ಲಿ ಸ್ನಾನ ಮಾಡಲು ಇಳಿದು, ಅನಾಮತ್ತಾಗಿ ನೀರಲ್ಲಿ ಮುಳುಗಿ ಹೆಣವಾಗಿದ್ದ. ಹೀಗಾಗಿ, ಮುಂಡಗೋಡ ಪೊಲೀಸರು ಆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನೂ ಶುರು ಮಾಡಿದ್ರು. ಸಾಲು ಸಾಲು ಅನುಮಾನ..! ಹಾಗೆ, ಶಿರಸಿ ಜಾತ್ರೆಗೆ ಬಂದವನು ಮಳಗಿ ಧರ್ಮಾ ಜಲಾಶಯದಲ್ಲಿ ಶವವಾಗಿ ಸಿಕ್ಕ ಗಳಿಗೆಯಿಂದಲೇ, ಆತನ ಕುಟುಂಬ ವಿಲ ವಿಲ ಒದ್ದಾಡುತ್ತಿದೆ. ನೀರನ್ನು ಕಂಡ್ರೇ ಮಾರುದ್ದ ಹಾಯುವ ವ್ಯಕ್ತಿ ಅದು...
ಅಗಡಿಯಲ್ಲಿ ವಿದ್ಯುತ್ ತಂತಿ ತುಳಿದು ಬಾಲಕ ದಾರುಣ ಸಾವು, ಅದೃಷ್ಟವಶಾತ್ ಬಚಾವಾದ ಮತ್ತೋರ್ವ ಬಾಲಕ..!
ಮುಂಡಗೋಡ: ತಾಲೂಕಿನ ಅಗಡಿಯಲ್ಲಿ ಭಾರೀ ಮನಕಲುಕುವ ಘಟನೆ ನಡೆದಿದೆ. ಹರಿದು ಬಿದ್ದಿದ್ದ ವಿದ್ಯುತ್ ತಂತಿ ಹಿಡಿದ ಪರಿಣಾಮ 13 ವರ್ಷದ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊರ್ವ ಸಹೋದರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಷ್ಪಕ್ ಮೊಹ್ಮದ್ ಷರೀಪ್ ಚಪಾತಿ (13) ಎಂಬ ಬಾಲಕನೇ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ. ಬೇಲಿಯ ಮೇಲೆ ವಿದ್ಯುತ್ ಲೈನ್ ಹರಿದು ಬಿದ್ದಿದೆ. ಇದೇ ವೇಳೆ ಅಷ್ಪಕ್ ಹಾಗೂ ಆತನ ಮತ್ತೊರ್ವ ಸಹೋದರ ಮಹ್ಮದ್ ಜಾಫರ್ ಚಪಾತಿ ಎನ್ನುವ ಬಾಲಕ ಅದೇ ಮಾರ್ಗವಾಗಿ ಮನೆಗೆ ತೆರಳುತ್ತಿದ್ದಾಗ ಬಾಲಕ ಅಷ್ಪಕ್ ಬೇಲಿಯನ್ನು ಮುಟ್ಟಿದ್ದಾನೆ. ಈ ವೇಳೆ ತಕ್ಷಣವೇ ಆತನಿಗೆ ವಿದ್ಯುತ್ ಪ್ರವಹಿಸಿ ವಿಲ ವಿಲ ಒದ್ದಾಡಿದ್ದಾನೆ. ಅದನ್ನ ಕಂಡು ಅವನ ಜೊತೆಗೆ ಇದ್ದ ಮತ್ತೊಬ್ಬ ಬಾಲಕ ಆತನನ್ನು ಮುಟ್ಟಿದ್ದಾನೆ. ಹೀಗಾಗಿ ಆತನಿಗೂ ವಿದ್ಯುತ್ ಪ್ರವಹಿಸಿದೆ. ಅಷ್ಟೊತ್ತಿಗಾಗಲೇ ಇದನ್ನೇಲ್ಲ ಗಮನಿಸಿದ ಜನ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಹೀಗಾಗಿ, ಮತ್ತೊರ್ವ ಬಾಲಕ ಬಚಾವ್ ಆಗಿದ್ದಾನೆ. ಅಷ್ಟೊತ್ತಿಗಾಗಲೇ ಅಷ್ಪಕ್ ಎನ್ನುವ ಬಾಲಕನಿಗೆ ವಿದ್ಯುತ್ ಪ್ರವಹಿಸಿ ಸಂಪೂರ್ಣ...
ಸನವಳ್ಳಿಯಲ್ಲಿ ಗದ್ದೆಯ ಬೇಲಿಗೆ ಕೊಂಬು ಸಿಲುಕಿಸಿಕೊಂಡು ಅಪಾಯದಲ್ಲಿದ್ದ ಜಿಂಕೆಯ ರಕ್ಷಣೆ..!
ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಗದ್ದೆಯಲ್ಲಿ ಬೇಲಿಗೆ ಸಿಲುಕಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಗಂಡು ಜಿಂಕೆಯನ್ನು ರಕ್ಷಣೆ ಮಾಡಲಾಗಿದೆ. ಸನವಳ್ಳಿ ಗ್ರಾಮದ ರೈತ ಕೃಷ್ಣಪ್ಪ ಎಲಿವಾಳ ಎಂಬುವವರ ಜಮೀನಿನ ಬೇಲಿಗೆ ಜಿಂಕೆ ತನ್ನ ಕೊಂಬು ಸಿಲುಕಿಸಿಕೊಂಡು ಜೀವ ಕಳೆದುಕೊಳ್ಳುವ ಅಪಾಯದಲ್ಲಿತ್ತು. ಹೀಗಾಗಿ, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅರಣ್ಯ ರಕ್ಷಕ ಶ್ರೀಧರ್ ಭಜಂತ್ರಿ ಸ್ಥಳಕ್ಕೆ ಆಗಮಿಸಿ ಅಪಾಯದಲ್ಲಿದ್ದ ಗಂಡು ಜಿಂಕೆಯ ರಕ್ಷಣೆ ಮಾಡಿದ್ದಾರೆ. ಬೇಲಿಯಿಂದ ಕೊಂಬು ಬಿಡಿಸಿದ ತಕ್ಷಣವೇ ಬದುಕಿದೆಯಾ ಬಡಜೀವ ಅಂತಾ ಜಿಂಕೆ ಅಲ್ಲಿಂದ ಕಾಡಿನೊಳಕ್ಕೆ ಕಾಲ್ಕಿತ್ತಿದೆ. ಜಿಂಕೆಯ ರಕ್ಷಣಾ ಕಾರ್ಯದಲ್ಲಿ ಅರಣ್ಯ ರಕ್ಷಕ ಶ್ರೀಧರ ಭಜಂತ್ರಿಯವರಿಗೆ, ಅರಣ್ಯ ರಕ್ಷಕರುಗಳಾದ ರಾಜು ಪರೀಟ, ಸಾಗರ ಕೊಣ್ಣೂರ, ಅರಣ್ಯ ವೀಕ್ಷಕ ರುದ್ರಪ್ಪ ಸಹಾಯ ಮಾಡಿದ್ದಾರೆ.
ಮುಂಡಗೋಡ ತಹಶೀಲ್ದಾರ್ ವಿರುದ್ಧ ದಲಿತರ ಅನಿರ್ಧಿಷ್ಟ ಧರಣಿ, ಸಾಹೇಬ್ರೇ ಇನ್ನೂ ಎಷ್ಟು ದಿನ..?
ನಿಜ, ಮುಂಡಗೋಡಿನ ಇತಿಹಾಸದಲ್ಲೇ ಇದು ಬಹುದೊಡ್ಡ ನಾಚಿಗ್ಗೇಡಿನ ಸಂಗತಿ ಅಂದ್ರೂ ತಪ್ಪಿಲ್ಲ ಅನಿಸತ್ತೆ. ತಾಲೂಕಿನ ದಂಡಾಧಿಕಾರಿಯೊಬ್ಬರ ವಿರುದ್ಧ ಈ ಪರಿಯ ಹೋರಾಟ ಬಹುಶಃ ಹಿಂದೆ ಎಂದೂ ನಡೆದಿರಲಿಲ್ಲವೆನೋ..? ಇಷ್ಟಾದ್ರೂ ಆ ಅಧಿಕಾರಿಯನ್ನ ಬಚಾವ್ ಮಾಡುವಲ್ಲಿ ತೆರೆಮರೆಯ ಕಸರತ್ತು ನಡೆಸ್ತಿರೋ “ದೊಡ್ಡ”ವರಿಗೆ ಏನೂ ಅನಿಸ್ತಾನೇ ಇಲ್ವಾ..? ಅದೂ ಹೋಗಲಿ, ತಮ್ಮ ಮೇಲೆ ಅಂತಹದ್ದೊಂದು ಭಯಂಕರ ಆರೋಪ ಬಂದು, ಪೊಲೀಸ್ ಠಾಣೆಯ ಮೆಟ್ಟಿಲೇರಿ ಜಗಜ್ಜಾಹೀರಾದಾಗಲೂ ಆ ಅಧಿಕಾರಿಗೆ ಮುಂಡಗೋಡಿಗರ ತಾಳ್ಮೆ ಅರ್ಥ ಆಗ್ತಿಲ್ವಾ..? ಇದು ಬಹುತೇಕ ಮುಂಡಗೋಡಿನ ಪ್ರಜ್ಞಾವಂತರ ಪ್ರಶ್ನೆ..! ಹೀಗಾಗಿನೇ, ನಿನ್ನೆಯಿಂದ ದಲಿತ ಸಂಘಟನೆ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಯ ಎದುರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಮಾಡಬೇಕಾಯ್ತಾ..? ಸಹಜ ತಾನೇ..? ಮುಂಡಗೋಡ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಹುದ್ದೆ ಪಡೆದಿರೋ ಆರೋಪ ಕೇಳಿ ಬಂದ ಹಿನ್ನೆಲೆ, ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಅವ್ರನ್ನ ಬಂಧಿಸಲು ಬಂದಿದ್ರು. ಆ ಹೊತ್ತಲ್ಲಿ ಇಡೀ ತಾಲೂಕಿನ...
ಈಶ್ವರಪ್ಪ ತಲೆದಂಡ ಬಹುತೇಕ ಫಿಕ್ಸ್..? ಚುನಾವಣೆ ವರ್ಷವೇ ಬಿಜೆಪಿಗೆ ಭಾರೀ ಮುಜುಗರ..!
ಬೆಂಗಳೂರು: ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 40% ಕಮೀಷನ್ ಆರೋಪ ಹೊತ್ತಿರೋ ಸಚಿವ ಈಶ್ವರಪ್ಪ ಬಹುತೇಕ ಸಚಿವ ಸ್ಥಾನ ಕಳೆದುಕೊಳ್ಳೊ ಹಂತಕ್ಕೆ ಬಂದು ನಿಂತ್ರಾ..? ಇಂತಹದ್ದೊಂದು ಪ್ರಶ್ನೆ ನಿನ್ನೆ ರಾತ್ರಿಯಿಂದಲೂ ಬಿಜೆಪಿಯೊಳಗಿನ ಬೆಳವಣಿಗೆ ನೋಡಿದ್ರೆ ಸ್ಪಷ್ಟವಾಗುತ್ತಿದೆ. ಚುನಾವಣೆ ವರ್ಷದಲ್ಲಿ ಹಿರಿಯ ಸಚಿವರೊಬ್ಬರ ತಲೆದಂಡ ಆಗೋದು ಬಹುತೇಕ ಖಚಿತ ಅನ್ನೊ ಸ್ಪಷ್ಟ ಸೂಚನೆಗಳು ಸಿಗ್ತಿವೆ. ಹೈಕಮಾಂಡ್ ಗೆ ವರದಿ..! ಇನ್ನು, ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿನ್ ಟೂ ಪಿನ್ ಮಾಹಿತಿ ಕೇಳಿದ್ದ ಜೆ.ಪಿ. ನಡ್ಡಾ ಕಚೇರಿಗೆ ರಾಜ್ಯ ಬಿಜೆಪಿ ಸಂಪೂರ್ಣ ವರದಿ ರವಾನಿಸಿದೆ. ಹೀಗಾಗಿ, ಇಂದು ಸಂಜೆಯಷ್ಟೊತ್ತಿಗೆ ಸಚಿವ ಈಶ್ವರಪ್ಪರ ತಲೆದಂಡವಾಗೋದು ಬಹುತೇಕ ಖಚಿತ ಅನ್ನೋ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಮೈಸೂರಿನಲ್ಲಿರೋ ಸಚಿವ ಈಶ್ವರಪ್ಪಗೆ ಸಿಎಂ ದೂರವಾಣಿ ಕರೆ ಮಾಡಿ ಬೆಂಗಳೂರಿಗೆ ಬರಲು ತಿಳಿಸಿದ್ದಾರೆ ಎನ್ನಲಾಗಿದೆ. ಮಂಗಳೂರು ಪ್ರವಾಸದಲ್ಲಿರೋ ಸಿಎಂ ಬಸವರಾಜ್ ಬೊಮ್ಮಾಯಿ ಮದ್ಯಾಹ್ನದ ಹೊತ್ತಿಗೆ ಬೆಂಗಳೂರು ತಲುಪೊ ಸಾಧ್ಯತೆಯಿದ್ದು, ಈಶ್ವರಪ್ಪ ಜೊತೆ...
ಹನುಮಾಪುರದಲ್ಲಿ ಜಲಮಿಷನ್ ಕಾಮಗಾರಿ ಪೈಪು ಮೈಮೇಲೆ ಬಿದ್ದು ಕಾರ್ಮಿಕನ ದಾರುಣ ಸಾವು..!
ಮುಂಡಗೋಡ: ತಾಲೂಕಿನ ಹನುಮಾಪುರದ ಬಳಿ ಭಾರೀ ದುರಂತವೊಂದು ಸಂಭವಿಸಿದೆ. ಜಲಮಿಷನ್ ಯೋಜನೆಯ ಕಾಮಗಾರಿ ವೇಳೆ ಬೃಹತ್ ಪೈಪು ಮೈಮೇಲೆ ಬಿದ್ದು ಬಿಹಾರ ಮೂಲದ ಕಾರ್ಮಿಕ ಮೃತಪಟ್ಟಿದ್ದಾನೆ. ಮೂಲತಃ ಬಿಹಾರದವನಾದ ರಾಜು ಯಾದವ್ (35) ಮೃತಪಟ್ಟ ದುರ್ಧೈವಿಯಾಗಿದ್ದು, ಇಂದು ಕಾರ್ಯನಿರ್ವಹಿಸುವ ವೇಳೆ ಆಕಸ್ಮಿಕವಾಗಿ ಬೃಹತ್ ಪೈಪ್ ಆಯತಪ್ಪಿ ಕಾರ್ಮಿಕನ ಮೈಮೇಲೆ ಬಿದ್ದಿದೆ. ಹೀಗಾಗಿ, ಕಾರ್ಮಿಕನ ದೇಹ ಚಿದ್ರಗೊಂಡಿದೆ. ಸದ್ಯ ಮುಂಡಗೋಡ ಪಿಎಸ್ ಐ ಬಸವರಾಜ್ ಮಬನೂರು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮುಂಡಗೋಡ ತಾಲೂಕಿನ ಹಲವೆಡೆ ಆಲಿಕಲ್ಲು, ಗಾಳಿ ಸಮೇತ ಭಾರೀ ಮಳೆ..!
ಮುಂಡಗೋಡ: ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಮುಂಡಗೋಡ ಪಟ್ಟಣ ಸೇರಿದಂತೆ ಹಲವು ಕಡೆ ಗಾಳಿ, ಗುಡುಗು, ಮಿಂಚು ಆಲಿಕಲ್ಲು ಸಹಿತ ಭರ್ಜರಿ ಮಳೆಯಾಗಿದೆ. ಸುಮಾರು ಒಂದು ತಾಸಿಗೂ ಹೆಚ್ಚು ಸುರಿದ ಮಳೆಯ ಕಾರಣಕ್ಕೆ ಬಿಸಿಲ ಬೇಗೆಯಿಂದ ಬಸವಳಿದಿದ್ದ ತಾಲೂಕಿನ ಮಂದಿಗೆ ಮಳೆರಾಯ ಮತ್ತೆ ತಂಪೆರೆದಿದ್ದಾನೆ. ಮಳೆಯ ದೃಷ್ಯ ಕ್ಯಾಮೆರಾ ಕಣ್ಣಲ್ಲಿ.. ಅಲಿಕಲ್ಲು ಮಳೆ..! ಅಂದಹಾಗೆ, ಭರ್ಜರಿ ಮಳೆಗೂ ಮೊದಲು ಭಾರೀ ಗಾಳಿ ಬೀಸಿದೆ. ನಂತರ ಧಾರಾಕಾರ ಆಲಿಕಲ್ಲು ಬಿದ್ದಿವೆ. ಪರಿಣಾಮ ತಾಲೂಕಿನ ಮಾವು ಬೆಳೆಗಾರರಿಗೆ ತೀವ್ರ ಸಂಕಷ್ಟ ಎದುರಾದಂತೆ ಆಗಿದೆ. ಇನ್ನು ಭಾರೀ ಗಾಳಿ, ಮಳೆಯ ಕಾರಣಕ್ಕೆ ತಾಲೂಕಿನಾಧ್ಯಂತ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಎಲ್ಲೆಲ್ಲಿ ಮಳೆ ಅರ್ಭಟ..? ಮುಂಡಗೋಡ ಪಟ್ಟಣ, ಬಾಚಣಕಿ, ಅರಶಿಣಗೇರಿ, ಕೊಪ್ಪ ಇಂದೂರು, ನಂದಿಕಟ್ಟಾ, ಟಿಬೇಟಿಯನ್ ಕಾಲೋನಿ ಸೇರಿದಂತೆ ಹಲವೆಡೆ ಆಲಿಕಲ್ಲು ಸಮೇತ ಮಳೆಯಾಗಿದೆ.
ಕಾತೂರು ಬಳಿ ಉರುಳಿಗೆ ಸಿಕ್ಕು ಒದ್ದಾಡುತ್ತಿದ್ದ ಕರಡಿ, ಜೀವದ ಹಂಗು ತೊರೆದು ರಕ್ಷಿಸಿದ ಅರಣ್ಯ ಸಿಬ್ಬಂದಿ..!
ಮುಂಡಗೋಡ: ತಾಲೂಕಿನ ಕಾತೂರ ವಲಯದ, ಪಾಳಾ ಶಾಖೆಯ ಒರಲಗಿ ಕಾಡಿನಲ್ಲಿ ಉರುಳಿಗೆ ಸಿಕ್ಕು ಬಿದ್ದಿದ್ದ ಕರಡಿಯನ್ನು ಅರಣ್ಯ ಸಿಬ್ಬಂದಿಗಳು ಜೀವದ ಹಂಗು ತೊರೆದು ರಕ್ಷಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ಉರುಳಿಗೆ ಸಿಕ್ಕು ಪ್ರಾಣ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದ ಕರಡಿಯನ್ನು, ಒರಲಗಿ ಅರಣ್ಯದಲ್ಲಿ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗಳು ನೋಡಿದ್ದಾರೆ. ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಪಶುವೈದ್ಯ ಜಯಚಂದ್ರ ಹಾಗೂ ಅರಣ್ಯ ರಕ್ಷಕ ಶ್ರೀಧರ ಭಜoತ್ರಿ ಅವರನ್ನು ಕರೆಸಿ, ಕರಡಿಗೆ ಅರಿವಳಿಕೆ ಮದ್ದು ನೀಡಿ ಕರಡಿಯನ್ನು ಬಚಾವ್ ಮಾಡಲಾಗಿದೆ. ಅಂದಹಾಗೆ, ಕರಡಿಗೆ ಎಚ್ಚರವಾಗುವ ಮುನ್ನವೇ ರಕ್ಷಿಸುವ ಕೆಲಸ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ತೆರಳುವಂತೆ ವ್ಯವಸ್ಥೆ ಮಾಡಿದ್ದಾರೆ. ಈ ವೇಳೆ ಮುಂಡಗೋಡ ಎಸಿಎಫ್ ಎಸ್.ಎಂ. ವಾಲಿ ಹಾಗೂ ಆರ್ ಎಫ್ ಓ ಅಜಯ್ ನಾಯ್ಕ್ ಮಾರ್ಗದರ್ಶನದಲ್ಲಿ , ಅರಣ್ಯ ಅಧಿಕಾರಿಗಳಾದ ಶಿವಪ್ಪ ಹಾಗೂ ಪಾಳ ಶಾಖೆಯ ಉಪವಲಯ ಅರಣ್ಯಾಧಿಕಾರಿ ಚಂದ್ರಕಾಂತ M, ಅರಣ್ಯ ರಕ್ಷಕ ಮಂಜುನಾಥ್ D, ವಾಹನ ಚಾಲಕ ಕೃಷ್ಣ ಹಾಗೂ ಪಾಳ...
ಕಾತೂರು, ಹಿರೇಹಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ ನುಜ್ಜುಗುಜ್ಜು, ಚಾಲಕನಿಗೆ ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಕಾತೂರು ಹಾಗೂ ಹಿರೇಹಳ್ಳಿ ಮದ್ಯದ ಬ್ರಿಡ್ಜ್ ಬಳಿ ಪೈಪು ತುಂಬಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರೀ ಚಾಲಕನಿಗೆ ಗಂಭೀರ ಗಾಯವಾಗಿದ್ದು ತಾಲುಕಾಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಹೊರಟಿದ್ದ ಪೈಪು ತುಂಬಿದ ಲಾರಿ ನಿಯಂತ್ರಣ ತಪ್ಪಿದೆ. ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಲಾರಿ ನುಜ್ಜು ಗುಜ್ಜಾಗಿದೆ. ಅಲ್ದೇ ರಸ್ತೆಯ ಪಕ್ಕದಲ್ಲಿದ್ದ ಮರಕ್ಕೂ ಡಿಕ್ಕಿಯಾಗಿ ಡಿಕ್ಕಿಯ ರಭಸಕ್ಕೆ ಮರ ತುಂಡಾಗಿದೆ. ಸಧ್ಯ ಚಾಲಕ ರವೀಂದರ್ ದಾದಾಸಾಹೇಬ್ ಕದಮ್ (40) ಸ್ಥಿತಿ ಗಂಭೀರವಾಗಿದ್ದು 108 ಅಂಬ್ಯುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. 108 ತಂತ್ರಜ್ಞ ಧನರಾಜ್ ಹಾಗೂ ಚಾಲಕ ಕೆಂಚೇಶ್ ಗಾಯಾಳುಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪರೀಶಿಲಿಸಿದ್ದಾರೆ..