ಬೆಂಗಳೂರು: ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 40% ಕಮೀಷನ್ ಆರೋಪ ಹೊತ್ತಿರೋ ಸಚಿವ ಈಶ್ವರಪ್ಪ ಬಹುತೇಕ ಸಚಿವ ಸ್ಥಾನ ಕಳೆದುಕೊಳ್ಳೊ ಹಂತಕ್ಕೆ ಬಂದು ನಿಂತ್ರಾ..? ಇಂತಹದ್ದೊಂದು ಪ್ರಶ್ನೆ ನಿನ್ನೆ ರಾತ್ರಿಯಿಂದಲೂ ಬಿಜೆಪಿಯೊಳಗಿನ ಬೆಳವಣಿಗೆ ನೋಡಿದ್ರೆ ಸ್ಪಷ್ಟವಾಗುತ್ತಿದೆ. ಚುನಾವಣೆ ವರ್ಷದಲ್ಲಿ ಹಿರಿಯ ಸಚಿವರೊಬ್ಬರ ತಲೆದಂಡ ಆಗೋದು ಬಹುತೇಕ ಖಚಿತ ಅನ್ನೊ ಸ್ಪಷ್ಟ ಸೂಚನೆಗಳು ಸಿಗ್ತಿವೆ.
ಹೈಕಮಾಂಡ್ ಗೆ ವರದಿ..!
ಇನ್ನು, ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿನ್ ಟೂ ಪಿನ್ ಮಾಹಿತಿ ಕೇಳಿದ್ದ ಜೆ.ಪಿ. ನಡ್ಡಾ ಕಚೇರಿಗೆ ರಾಜ್ಯ ಬಿಜೆಪಿ ಸಂಪೂರ್ಣ ವರದಿ ರವಾನಿಸಿದೆ. ಹೀಗಾಗಿ, ಇಂದು ಸಂಜೆಯಷ್ಟೊತ್ತಿಗೆ ಸಚಿವ ಈಶ್ವರಪ್ಪರ ತಲೆದಂಡವಾಗೋದು ಬಹುತೇಕ ಖಚಿತ ಅನ್ನೋ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಮೈಸೂರಿನಲ್ಲಿರೋ ಸಚಿವ ಈಶ್ವರಪ್ಪಗೆ ಸಿಎಂ ದೂರವಾಣಿ ಕರೆ ಮಾಡಿ ಬೆಂಗಳೂರಿಗೆ ಬರಲು ತಿಳಿಸಿದ್ದಾರೆ ಎನ್ನಲಾಗಿದೆ. ಮಂಗಳೂರು ಪ್ರವಾಸದಲ್ಲಿರೋ ಸಿಎಂ ಬಸವರಾಜ್ ಬೊಮ್ಮಾಯಿ ಮದ್ಯಾಹ್ನದ ಹೊತ್ತಿಗೆ ಬೆಂಗಳೂರು ತಲುಪೊ ಸಾಧ್ಯತೆಯಿದ್ದು, ಈಶ್ವರಪ್ಪ ಜೊತೆ ಚರ್ಚಿಸಲಿದ್ದಾರೆ ಎನ್ನಲಾಗಿದೆ..
ರಾಜೀನಾಮೆಗೆ ಸೂಚಿಸ್ತಾರಾ ಸಿಎಂ..?
ಈಶ್ವರಪ್ಪ ಜೊತೆ ಚರ್ಚೆಯ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಸಚಿವ ಈಶ್ವರಪ್ಪಗೆ ರಾಜೀನಾಮೆ ನೀಡುವಂತೆ ಸೂಚಿಸುವ ಸಾಧ್ಯತೆಯಿದ್ದು, ಚುನಾವಣೆ ವರ್ಷದಲ್ಲಿ ಬಿಜೆಪಿಗೆ ಹಿರಿಯ ಸಚಿವರೊಬ್ಬರ ತಲೆದಂಡ ಬಾರೀ ಮುಜುಗರ ತಂದಿಡೋದಂತೂ ಗ್ಯಾರಂಟಿ ಎನ್ನುವಂತಾಗಿದೆ.