ಮುಂಡಗೋಡ: ತಾಲೂಕಿನ ಕಾತೂರ ವಲಯದ, ಪಾಳಾ ಶಾಖೆಯ ಒರಲಗಿ ಕಾಡಿನಲ್ಲಿ ಉರುಳಿಗೆ ಸಿಕ್ಕು ಬಿದ್ದಿದ್ದ ಕರಡಿಯನ್ನು ಅರಣ್ಯ ಸಿಬ್ಬಂದಿಗಳು ಜೀವದ ಹಂಗು ತೊರೆದು ರಕ್ಷಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ.

ಉರುಳಿಗೆ ಸಿಕ್ಕು ಪ್ರಾಣ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದ ಕರಡಿಯನ್ನು, ಒರಲಗಿ ಅರಣ್ಯದಲ್ಲಿ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗಳು ನೋಡಿದ್ದಾರೆ. ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ‌. ಹೀಗಾಗಿ, ಪಶುವೈದ್ಯ ಜಯಚಂದ್ರ ಹಾಗೂ ಅರಣ್ಯ ರಕ್ಷಕ ಶ್ರೀಧರ ಭಜoತ್ರಿ ಅವರನ್ನು ಕರೆಸಿ, ಕರಡಿಗೆ ಅರಿವಳಿಕೆ ಮದ್ದು ನೀಡಿ ಕರಡಿಯನ್ನು ಬಚಾವ್ ಮಾಡಲಾಗಿದೆ‌.

ಅಂದಹಾಗೆ, ಕರಡಿಗೆ ಎಚ್ಚರವಾಗುವ ಮುನ್ನವೇ ರಕ್ಷಿಸುವ ಕೆಲಸ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ತೆರಳುವಂತೆ ವ್ಯವಸ್ಥೆ ಮಾಡಿದ್ದಾರೆ. ಈ ವೇಳೆ ಮುಂಡಗೋಡ ಎಸಿಎಫ್ ಎಸ್.ಎಂ. ವಾಲಿ ಹಾಗೂ ಆರ್ ಎಫ್ ಓ ಅಜಯ್ ನಾಯ್ಕ್ ಮಾರ್ಗದರ್ಶನದಲ್ಲಿ , ಅರಣ್ಯ ಅಧಿಕಾರಿಗಳಾದ ಶಿವಪ್ಪ ಹಾಗೂ ಪಾಳ ಶಾಖೆಯ ಉಪವಲಯ ಅರಣ್ಯಾಧಿಕಾರಿ ಚಂದ್ರಕಾಂತ M, ಅರಣ್ಯ ರಕ್ಷಕ ಮಂಜುನಾಥ್ D, ವಾಹನ ಚಾಲಕ ಕೃಷ್ಣ ಹಾಗೂ ಪಾಳ ಶಾಖೆಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ರು.

error: Content is protected !!