ಮುಂಡಗೋಡ ತಾಲೂಕಿನ ಕಾತೂರು ಹಾಗೂ ಹಿರೇಹಳ್ಳಿ ಮದ್ಯದ ಬ್ರಿಡ್ಜ್ ಬಳಿ ಪೈಪು ತುಂಬಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರೀ ಚಾಲಕನಿಗೆ ಗಂಭೀರ ಗಾಯವಾಗಿದ್ದು ತಾಲುಕಾಸ್ಪತ್ರೆಗೆ ದಾಖಲಿಸಲಾಗಿದೆ.

ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಹೊರಟಿದ್ದ ಪೈಪು ತುಂಬಿದ ಲಾರಿ ನಿಯಂತ್ರಣ ತಪ್ಪಿದೆ. ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಲಾರಿ ನುಜ್ಜು ಗುಜ್ಜಾಗಿದೆ. ಅಲ್ದೇ ರಸ್ತೆಯ ಪಕ್ಕದಲ್ಲಿದ್ದ ಮರಕ್ಕೂ ಡಿಕ್ಕಿಯಾಗಿ ಡಿಕ್ಕಿಯ ರಭಸಕ್ಕೆ ಮರ ತುಂಡಾಗಿದೆ.

ಸಧ್ಯ ಚಾಲಕ ರವೀಂದರ್ ದಾದಾಸಾಹೇಬ್ ಕದಮ್ (40) ಸ್ಥಿತಿ ಗಂಭೀರವಾಗಿದ್ದು 108 ಅಂಬ್ಯುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. 108 ತಂತ್ರಜ್ಞ ಧನರಾಜ್ ಹಾಗೂ ಚಾಲಕ ಕೆಂಚೇಶ್ ಗಾಯಾಳುಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪರೀಶಿಲಿಸಿದ್ದಾರೆ..

error: Content is protected !!