ಮುಂಡಗೋಡಿನ ಅರಣ್ಯ ಇಲಾಖೆಯಲ್ಲಿ ದಂಧೆಕೋರರ ಸಂಖ್ಯೆ ಮಿತಿ ಮೀರಿದೆಯಾ..? ಇಲ್ಲಿ ಅರಣ್ಯದ ಸಂಪತ್ತು ರಕ್ಷಣೆಗೆ ಅಂತಾ ನಿಯುಕ್ತಿಗೊಂಡಿರೋ ದೊಡ್ಡ ದೊಡ್ಡ ಹುದ್ದೆಯಲ್ಲಿರೋರೇ ಅಡ್ನಾಡಿ ದಂಧೆಗಿಳಿದ್ರಾ..? ಅಂತಹದ್ದೊಂದು ಅನುಮಾನ ಸದ್ಯ ಶುರುವಾಗಿದೆ. ಯಾಕಂದ್ರೆ ಮುಂಡಗೋಡಿನ ಸರ್ಕಾರಿ ಟಿಂಬರ್ ಡಿಪೋದಿಂದಲೇ ಲಕ್ಷ ಲಕ್ಷ ಬೆಲೆಬಾಳುವ ಅರಣ್ಯ ಸಂಪತ್ತು ಸಾಗಿಸಲು ಹೋಗಿ ಶಿರಸಿಯಲ್ಲಿ ತಗಲಾಕ್ಕೊಂಡಿದ್ದಾರೆ ಖದೀಮರು. ಮೂಲಗಳ ಪ್ರಕಾರ ಹಾಗೆ ಅಕ್ರಮವಾಗಿ ಸಾಗಿಸಲಾದ ಕಟ್ಟಿಗೆಯ ಕರಾಮತ್ತಿನ ಹಿಂದೆ ಅವನೊಬ್ಬ ದೊಡ್ಡ ಅಧಿಕಾರಿಯ “ರೇಂಜು” ಬಟಾ ಬಯಲಾಗುವ ಎಲ್ಲಾ ಸಾಧ್ಯತೆ ಇದೆ..! ಶಿರಸಿಯ ಸಮೀಪ ರಾತ್ರೊ ರಾತ್ರಿ..! ಅಸಲು, ಮುಂಡಗೋಡಿನ ಸರ್ಕಾರಿ ಟಿಂಬರ್ ಡೀಪೋದಿಂದ ಪಾಸ್ ಹೊಂದಿದ್ದ ಸಾಗವಾನಿ ನಾಟಾಗಳನ್ನು ಶಿರಸಿಯ ಅಡ್ಡೆಯೊಂದರ ಹೆಸರಲ್ಲಿ ಸಾಗಾಟ ಮಾಡಲಾಗುತ್ತಿತ್ತು. ನಿನ್ನೆ ಅಂದ್ರೆ ಶುಕ್ರವಾರ ರಾತ್ರಿ ಸರಿಸುಮಾರು ಒಂಬತ್ತು ಗಂಟೆಯಷ್ಟೊತ್ತಿಗೆ ಎರಡು ಲಾರಿಗಳಲ್ಲಿ ಭರ್ತಿಗೊಳಿಸಿದ ಮಾಲು ರವಾನೆಯಾಗಿತ್ತು. ಹೀಗಿದ್ದಾಗ, ಆ ಮಾಲಿನ ಜೊತೆ ಜೊತೆಯಲ್ಲೇ ಸರ್ಕಾರಿ ಟಿಂಬರ್ ಡೀಪೋದಲ್ಲಿದ್ದ ಲಕ್ಷಾಂತರ ಮೌಲ್ಯದ ನಾಟಾಗಳನ್ನೂ ತುರುಕಲಾಗಿತ್ತು. ಹೀಗಾಗಿ, ಇಂತಹದ್ದೊಂದು...
Top Stories
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ಮುಂಡಗೋಡಿನ ಯುವಕ ಕಣ್ಮರೆ, ಎಲ್ಲಾದ್ರೂ ಸಿಕ್ಕರೆ ಮಾಹಿತಿ ನೀಡಿ..!
ಮುಂಡಗೋಡಿನ ಯುವಕನೋರ್ವ ನಾಪತ್ತೆಯಾಗಿದ್ದಾನೆ. 23 ವರ್ಷದ ಯುವಕ ಜೂನ್ 3 ರಿಂದಲೇ ನಾಪರ್ತೆಯಾಗಿದ್ದು ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ, ನಾಪತ್ತೆಯಾಗಿರೋ ಯುವಕನನ್ನು ಹುಡುಕಿಕೊಡಿ ಅಂತಾ ಪೋಷಕರು ಮನವಿ ಮಾಡಿದ್ದಾರೆ. ಅಂದಹಾಗೆ, ಯುವಕನ ಹೆಸರು ಸಿದ್ದಾರೂಢ ಗೌಳಿ (23) ಈತ ಮುಂಡಗೋಡ ಪಟ್ಟಣದ ಆನಂದನಗರ ನಿವಾಸಿಯಾಗಿದ್ದು ಕಳೆದ ಜೂನ್ 3 ರಂದು ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಎರಡು ದಿನ ಕಳೆದರೂ ವಾಪಸ್ ಮನೆಗೆ ಬಂದಿಲ್ಲ. ಹೀಗಾಗಿ, ಕುಟುಂಬಸ್ಥರು ಪರಿಚಯವಿರುವ ಎಲ್ಲಾ ಕಡೆ ತಿರುಗಾಡಿ ಯುವಕನನ್ನು ಹುಡುಕಿದ್ದಾರೆ. ಆದ್ರೆ ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ, ಆತಂಕದಲ್ಲಿರೋ ಪೋಷಕರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದಯವಿಟ್ಟು ಈ ಮೇಲೆ ಕಾಣಿಸಿದ ಪೋಟೋದಲ್ಲಿರೊ ಯುವಕ ಕಂಡರೆ ಈ ನಂಬರಿಗೆ ಕಾಲ್ ಮಾಡಿ ಮಾಹಿತಿ ನೀಡಿ 8197524063
ಜಿನ್ನೂರಿನಲ್ಲಿ ಹಸೆಮಣೆ ಏರಬೇಕಿದ್ದ ಯುವಕನ ಮರ್ಡರ್ ಕೇಸ್ ಗೆ ಟ್ವಿಸ್ಟ್: ಅನೈತಿಕ ಸಂಬಂಧವೇ ಕೊಲೆಗೆ ಕಾರಣ..!
ಕಲಘಟಗಿ: ಹಸೆಮಣೆ ಏರಬೇಕಿದ್ದ ಯುವಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಾವರಗೇರಿ ಯುವತಿಯೊಂದಿಗೆ ಇದೇ ಜೂನ್ 7 ಕ್ಕೆ ಹಸೆಮಣಿ ಏರಬೇಕಿದ್ದ ಯುವಕ ಬರ್ಬರವಾಗಿ ಹತ್ಯೆಯಾಗಿದ್ದರ ಹಿಂದೆ ಅನೈತಿಕ ಸಂಬಂಧದ ಕರಿನೆರಳಿದೆ. ಹಾಗಂತ ಪೊಲೀಸರ ತನಿಖೆಯಿಂದ ಬೆಚ್ಚಿ ಬೀಳಿಸುವ ಸಂಗತಿ ಹೊರಬಿದ್ದಿದೆ. ಹೌದು, ವಿವಾಹಿತ ಮಹಿಳೆ ಜೊತೆ ಯುವಕನ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಕಳೆದ ಎರಡು ದಿನಗಳ ಹಿಂದೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ತೋಟದ ಮನೆಯಲ್ಲಿ ಮಲಗಿದ್ದ ನಿಂಗಪ್ಪ ನವಲೂರ (33) ಎಂಬ ಕೊಲೆಯಾಗಿದ್ದ ಯುವಕನ ಕಣ್ಣಿಗೆ ಕಾರದ ಪುಡಿ ಎರಚಿ ಕತ್ತು ಹಿಸುಕಿ ಕೊಲೆಗೈದಿದ್ದರು. ಆದ್ರೆ ಈ ಪ್ರಕರಣ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೇ 7ರಂದು ಯುವಕ ಹಸೆಮಣೆ ಏರಬೇಕಿದ್ದ. ಇಷ್ಟರಲ್ಲಿ ಯುವಕನನ್ನು ಕೊಲೆ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿದ್ದ ಕಲಘಟಗಿ ಠಾಣೆ ಪೊಲೀಸರು ಕೊಲೆಗೆ ಕಾರಣ ಹಾಗೂ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೃತ ಯುವಕ...
ಕಲಘಟಗಿಯಲ್ಲಿ ನೇಣು ಬಿಗಿದುಕೊಂಡು ಬಾಲ ಸಹೋದರಿಯರು ಆತ್ಮಹತ್ಯೆ..!
ಕಲಘಟಗಿ: ಮನೆಯಲ್ಲಿ ನೇಣು ಬಿಗಿದುಕೊಂಡು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಘಟಗಿಯಲ್ಲಿ ನಡೆದಿದೆ. ಕಾವೇರಿ ಹಡಪದ (17) ಭೂಮಿಕಾ ಹಡಪದ (19) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು. ಕಲಘಟಗಿಯ ಬೆಂಡಿಗೇರಿ ಓಣಿಯಲ್ಲಿರುವ ಬಾಡಿಗೆ ಮನೆಯಲ್ಲಿ ತಾಯಿ ಇಲ್ಲದ ವೇಳೆ ಸಹೋದರಿಯರು ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜೂನ್ 7 ರಂದು ಮದುವೆಯಾಗಬೇಕಿದ್ದ ಹುಡುಗ, ಜಿನ್ನೂರಿನ ತೋಟದ ಮನೆಯಲ್ಲಿ ಭೀಕರ ಹತ್ಯೆಯಾದ..!
ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ಯುವಕನ ಬರ್ಬರ ಕೊಲೆಯಾಗಿದೆ. ಕಣ್ಣಿಗೆ ಕಾರದ ಪುಡಿ ಎರಚಿ ಕತ್ತು ಹಿಸುಕಿ ಕೊಲೆಗೈದು ಹೋಗಿದ್ದಾರೆ ದುಷ್ಕರ್ಮಿಗಳು. ಇನ್ನೇನು ಜೂ. 7 ರಂದು ಹಸೆಮಣೆ ಏರಲು ರೆಡಿಯಾಗಿದ್ದ ಯುವಕ ಸದ್ಯ ಹೆಣವಾಗಿ ಬಿದ್ದಿದ್ದಾನೆ. ಅಂದಹಾಗೆ, ಜಿನ್ನೂರಿನ ನಿಂಗಪ್ಪ ನವಲೂರ (28) ಕೊಲೆಯಾಗಿರುವ ಯುವಕನಾಗಿದ್ದು, ತೋಟದ ಮನೆಯಲ್ಲಿ ಮಲಗಿದ್ದ ವೇಳೆ ಮದ್ಯರಾತ್ರಿ ಬರ್ಬರವಾಗಿ ಹತ್ಯೆ ಮಾಡಿ ಹೋಗಿದ್ದಾರೆ ದುಷ್ಟರು. ಅಸಲು, ಇದೇ ಜೂನ್ 7 ರಂದು ಯುವಕನಿಗೆ ಮದುವೆ ಫಿಕ್ಸ್ ಆಗಿತ್ತು. ಕಲಘಟಗಿ ತಾಲೂಕಿನ ತಾವಗೇರಿ ಯುವತಿಯ ಜೊತೆ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ, ಮದುವೆಯ ಸಂಭ್ರಮಕ್ಕೆ ಅಣಿಯಾಗಿದ್ದ ಯುವಕ. ಆದ್ರೆ, ಅದರೊಳಗೆ ಭೀಕರವಾಗಿ ಹತ್ಯೆಯಾಗಿದ್ದು ಮದುವೆ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಭೀಕರ ಹತ್ಯೆ ಹಿನ್ನೆಲೆಯಲ್ಲಿ ಜಿನ್ನೂರು ಗ್ರಾಮ ಬೆಚ್ಚಿ ಬಿದ್ದಿದ್ದು, ಸ್ಥಳಕ್ಕೆ ಕಲಘಟಗಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸನವಳ್ಳಿಗಷ್ಟೇ ಸೀಮಿತವಾಯ್ತಾ ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧದ ಸಮರ..? ಸಾಹೇಬ್ರೆ, ತಾಲೂಕಿನೆಲ್ಲೆಡೆ ಇದೆ ಅಕ್ರಮ ಭಟ್ಟಿಗಳು..! ಕ್ರಮ ಯಾವಾಗ..?
ಮುಂಡಗೋಡ ತಾಲೂಕಿನ ಸನವಳ್ಳಿಯಲ್ಲಿ ಹೆಜ್ಜೆಗೊಂದರಂತೆ ಇರೋ ಅಕ್ರಮ ಇಟ್ಟಿಗೆ ಭಟ್ಟಿಗಳ ಮೇಲೆ ತಹಶೀಲ್ದಾರ್ ಶಂಕರ್ ಗೌಡಿ ಸಾಹೇಬ್ರು ಸಮರ ಸಾರಿದ್ದಾರೆ. ನಿನ್ನೆ ಇಡೀ ಸನವಳ್ಳಿಯ ಅಕ್ರಮ ಇಟ್ಟಿಗೆ ಭಟ್ಟಿ ಮಾಲೀಕರಿಗೆ ಛಳಿ ಬಿಡಿಸಿದ್ದಾರೆ. ಹೀಗಾಗಿ, ತಾಲೂಕಿನ ಮಂದಿ ತಹಶೀಲ್ದಾರರ ಖಡಕ್ ಕ್ರಮಕ್ಕೆ ಶ್ಲಾಘನೆ ವ್ಯಕ್ತ ಪಡಿಸ್ತಿದಾರೆ. ನಿಜ..! ತಾಲೂಕಿನ ಸನವಳ್ಳಿಯಲ್ಲಿ ಇಟ್ಟಿಗೆ ಭಟ್ಟಿಗಳ ರಾಜಾರೋಶತನಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದ್ದೇ ಇದೆ. ಅದನ್ನ ಇಡೀ ತಾಲೂಕಿನ ಜನ ಬಯಸಿದ್ರು. ಕಾರಣವೆಂದ್ರೆ, ಅಲ್ಲಿ ಸಾಕಷ್ಟು ಕಾನೂನುಗಳ ಉಲ್ಲಂಘನೆ ಆಗ್ತಿತ್ತು. ಆದ್ರೆ, ಇದೇಲ್ಲ ಈ ಹಿಂದಿನ ಎಲ್ಲಾ ಅಧಿಕಾರಿಗಳಿಗೂ ತಿಂಗಳಿಗೆ ಒಂದಿಷ್ಟು ಕೈ ಬಿಸಿ ಮಾಡಿದ್ರೆ ಮುಗೀತು ನಮ್ಮನ್ನ ಕೇಳೋರ್ಯಾರು ಅನ್ನೋ ಮನಸ್ಥಿತಿ ಅಕ್ರಮ ಇಟ್ಟಿಗೆ ಅಡ್ಡೆಗಳ ಮಾಲೀಕರಿಗೆ ಗಟ್ಟಿ ದೈರ್ಯ ತುಂಬಿತ್ತು. ಹೀಗಾಗಿ, ಎಲ್ಲೆಂದರಲ್ಲಿ ನಾಯಿ ಕೊಡೆಗಳಂತೆ ಭಟ್ಟಿಗಳು ಹೊಗೆ ಉಗುಳುತ್ತಿದ್ದವು. ಅದೇಷ್ಟೋ ಅರಣ್ಯ ಸಂಪತ್ತು ಲೂಟಿಯಾಗ್ತಿತ್ತು. ಪರಿಸರಕ್ಕೆ ಧಕ್ಕೆ ಯಾಗ್ತಿತ್ತು. ಆದ್ರೆ, ಸಧ್ಯ ತಹಶೀಲ್ದಾರ್ ಸಾಹೇಬ್ರು ಇಂತಹ ಅಕ್ರಮಿಗಳ ಬೆನ್ನು ಬಿದ್ದಿದ್ದಾರೆ...
ಸನವಳ್ಳಿ ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಸಮರ ಸಾರಿದ ತಹಶೀಲ್ದಾರ್, ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ..!
ಮುಂಡಗೋಡಿನ ದಕ್ಷ, ಗಂಡೆದೆಯ ತಹಶೀಲ್ದಾರ್ ಶಂಕರ್ ಗೌಡಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಸಮರ ಸಾರಿರೋ ತಹಶೀಲ್ದಾರ್ ಇವತ್ತು ಅಕ್ರಮ ಇಟ್ಟಿಗೆ ಭಟ್ಟಿಗಳನ್ನು ತೆರವು ಕಾರ್ಯಾಚರಣೆ ನಡೆಸಿದ್ರು. ನೋಟೀಸ್ ನೀಡಿದ್ದರೂ..! ಅಸಲು, ಈ ಹಿಂದೆ ದಾಳಿ ಮಾಡಿದ್ದ ತಹಶೀಲ್ದಾರ್ ಸಾಹೇಬ್ರು ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿ, ನೋಟೀಸ್ ಜಾರಿ ಮಾಡಿದ್ರು. ಆದ್ರೆ ಇಟ್ಟಿಗೆ ಭಟ್ಟಿ ನಡೆಸ್ತಿರೋ ಮಾಲೀಕರು ಕ್ಯಾರೇ ಅಂದಿರಲಿಲ್ಲ. ಹೀಗಾಗಿ, ಸಮಯಕ್ಕಾಗಿ ಕಾದಿದ್ದ ತಹಶೀಲ್ದಾರ್ ಇವತ್ತು ತಮ್ಮ ಬೆಟಾಲಿಯನ್ ಜೊತೆ ಫಿಲ್ಡಿಗೆ ಇಳಿದು ಅಕ್ರಮ ಇಟ್ಟಿಗೆ ಭಟ್ಟಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲು ಮುಂದಾಗಿದ್ರು. ನಾಲ್ಕೈದು ಇಟ್ಟಿಗೆ ಭಟ್ಟಿಗಳನ್ನು ತೆರವುಗೊಳಿಸುತ್ತಿದ್ದಾಗ ಮಾಲೀಕರು ಎಚ್ಚೆತ್ತುಕೊಂಡು ನಾವೇ ತೆರವು ಮಾಡ್ತಿವಿ ಅಂತಾ ಭರವಸೆ ನೀಡಿದ ಕೂಡಲೇ ಕಾರ್ಯಾಚರಣೆಗೆ ವಿರಾಮ ನೀಡಲಾಯ್ತು. ಮುಂಡಗೋಡ ಸಿಪಿಐ ಸಿದ್ದಪ್ಪ ಸಿಮಾನಿ ಸೇರಿದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಒಟ್ನಲ್ಲಿ ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಸಮರ ಸಾರಿರೋ ತಹಶೀಲ್ದಾರ್ ಶಂಕರ್...
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ..!
ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಈ ಮೂಲಕ ಮುಂಡಗೋಡಿನಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣ ಬೇಧಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ತಡಸ ಗ್ರಾಮದ ರಮೇಶ ಗಂಗಪ್ಪಾ ಮುಗಳಕಟ್ಟಿ(26) ಮಂಜುನಾಥ ಸುಬಾಸ ಸೋಮನಕೊಪ್ಪ (32) ಎಂಬುವ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಅಂದಹಾಗೆ, ಮುಂಡಗೋಡ ಪಟ್ಟಣದ ಕಲಾಲ್ ಓಣಿಯ ಪೀರಸಾಬ ಅಬ್ದುಲಖಾದರ ಬಂಗ್ಲೆವಾಲೆ ಎಂಬುವವರ ಎಲೆಕ್ಟ್ರಿಕಲ್ ಅಂಗಡಿ ಮುಂದೆ ನಿಲ್ಲಿಸಿದ್ದ, ಹೀರೋ ಸ್ಪ್ಲೆಂಡರ್ ಫ್ಲಸ್ ಬೈಕ್ ನ್ನು ದಿನಾಂಕ 16.05.2023 ರಂದು ಹಾಡಹಗಲೇ ಎತ್ತಂಗಡಿ ಮಾಡಿದ್ದರು. ಹೀಗಾಗಿ ಮುಂಡಗೋಡ ಪೊಲೀಸ್ ಠಾಣೆಗೆ ಈ ಕುರಿತು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಮುಂಡಗೋಡ ಪೊಲೀಸರು, ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ, ಜಯಕುಮಾರ್, ಶಿರಸಿ ಡಿವೈಎಸ್ಪಿ ಗಣೇಶ ಕೆ.ಎಲ್. ರವರ ಮಾರ್ಗದರ್ಶನದಲ್ಲಿ ಸಿಪಿಐ ಸಿದ್ದಪ್ಪ ಎಸ್.ಸಿಮಾನಿ, ಪಿಎಸ್ಐ ಯಲ್ಲಾಲಿಂಗ ಕುನ್ನೂರು ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು. ಹೀಗಾಗಿ ಈ...
ಕಾತೂರಿನಿಂದ ಹಾನಗಲ್ ಅಡ್ಡೆಗೆ ಸಾಗಿಸಿದ್ದ ಕಟ್ಟಿಗೆ ಕೇಸ್ ತನಿಖೆ ಕತೆ ಏನಾಯ್ತು..? ಎಸಿಎಫ್ ಸಾಹೇಬ್ರು ಆ ” ಚಕ್ಕಂಬಕ್ಕಳ” ಫಾರೆಸ್ಟರ್ ನ ರಕ್ಷಣೆಗೆ ನಿಂತ್ರಾ..?
ಅಬ್ಬಬ್ಬಾ ಆ ಫಾರೆಸ್ಟರ್ ಅಂದ್ರೆ ಕಾತೂರು ಭಾಗದಲ್ಲಿ ಅದೇಂತದ್ದೋ ಅಂತೆ, ಕಂತೆ..! ಆತನ ಹಿಂದೆ ಸಿಕ್ಕಾಪಟ್ಟೆ ದೊಡ್ಡವರಿದ್ದಾರಂತೆ. ಹೀಗಾಗಿ, ಆತನ ಯಡವಟ್ಟುಗಳು, ದಂಧೆಗಳನ್ನೇಲ್ಲ ಕಣ್ಣಾರೆ ಕಂಡ್ರೂ ಏನೂ ಮಾಡದ ಸ್ಥಿತಿಯಲ್ಲಿ ಕುಳಿತಿದ್ದಾರಂತೆ ಮುಂಡಗೋಡಿನ ಎಸಿಎಫ್ ಸಾಹೇಬಾ..! ನಿಮಗೆ ನೆನಪಿರಬಹುದು, ಕಳೆದ 2022 ರ ಅಕ್ಟೋಬರ್ ತಿಂಗಳಲ್ಲೇ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ಅದೊಂದು ಸುದ್ದಿ ಪ್ರಸಾರ ಮಾಡಿತ್ತು. ಮುಂಡಗೋಡ ತಾಲೂಕಿನ ಕಾತೂರು ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸ್ತಿರೋ ಅವನೊಬ್ಬ ಅಧಿಕಾರಿಯಿಂದ ಹಾವೇರಿ ಜಿಲ್ಲೆಯ ಹಾನಗಲ್ಲಿನ ಅದೊಂದು ಕಟ್ಟಿಗೆ ಅಡ್ಡೆ ಅನಾಮತ್ತಾಗಿ ಸೀಜ್ ಆಗಿದ್ದ ಸಂಗತಿಯದು. ಅಂದಹಾಗೆ ಇದು ಇವತ್ತಿನ ಮಾತಲ್ಲ. ಸರಿಸುಮಾರು ಕಳೆದ ವರ್ಷದ ಎಪ್ರೀಲ್ ಕೊನೆಯ ವಾರದಲ್ಲಿ ನಡೆದಿದ್ದ ಘಟನೆ ಅದು. ಘಟನೆ ನಡೆದು ಒಂದೂವರೇ ವರ್ಷವಾದ್ರೂ ಘಟನೆ ಬಗ್ಗೆ ಯಾವೊಂದೂ ಕ್ರಮ ಕೈಗೊಳ್ಳದೇ ಇಡೀ ಕೇಸನ್ನೇ ಇಡಿ ಇಡಿಯಾಗಿ ತಿಪ್ಪೆ ಸಾರಿಸುವ ಹಂತದಲ್ಲಿದ್ದಾರೆ ಇಲ್ಲಿನ ಹಿರಿಯ ಅಧಿಕಾರಿಗಳು..! ಅಷ್ಟಕ್ಕೂ ನಡೆದದ್ದೇನು..? ಹಾವೇರಿ ಜಿಲ್ಲೆಯ ಹಾನಗಲ್ಲಿನ ಅದೊಂದು ಕಟ್ಟಿಗೆ ಅಡ್ಡೆಗೆ...
ಮುಂಡಗೋಡ ಬಂಕಾಪುರ ರಸ್ತೆಯಲ್ಲಿ ಬೈಕ್ ಸ್ಕಿಡ್, ಮದುವೆಗೆ ಹೋಗಿದ್ದ ಮೂವರು ಯುವಕರಿಗೆ ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಬಂಕಾಪುರ ರಸ್ತೆಯ ಈಶ್ವರ ದೇವಸ್ಥಾನದ ಬಳಿ ಬೈಕಗ ಅಪಘಾತವಾಗಿದೆ. ಬೈಕ್ ಸ್ಕಿಡ್ ಆಗಿ ಬಿದ್ದು ಮೂವರು ಯುವಕರಿಗೆ ಗಂಭೀರ ಗಾಯವಾಗಿದೆ. ಮದುವೆಗೆಂದು ಹೊರಟಿದ್ದವರಿಗೆ ಆಘಾತವಾಗಿದೆ. ಗಾಯಗೊಂಡವರನ್ನು ಮುಂಡಗೋಡ ಪಟ್ಟಣದ ಇಂದಿರಾನಗರದ ಇಜಾಜ್, ಜಿಲಾನಿ, ಹಾಗೂ ಮಲ್ಲಿಕ್ ಅಂತಾ ಗುರುತಿಸಲಾಗಿದೆ. ಮೂವರಿಗೂ ಗಂಭೀರ ಗಾಯವಾಗಿದ್ದು, ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.