ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ಯುವಕನ ಬರ್ಬರ ಕೊಲೆಯಾಗಿದೆ. ಕಣ್ಣಿಗೆ ಕಾರದ ಪುಡಿ ಎರಚಿ ಕತ್ತು ಹಿಸುಕಿ ಕೊಲೆಗೈದು ಹೋಗಿದ್ದಾರೆ ದುಷ್ಕರ್ಮಿಗಳು. ಇನ್ನೇನು ಜೂ. 7 ರಂದು ಹಸೆಮಣೆ ಏರಲು ರೆಡಿಯಾಗಿದ್ದ ಯುವಕ ಸದ್ಯ ಹೆಣವಾಗಿ ಬಿದ್ದಿದ್ದಾನೆ.
ಅಂದಹಾಗೆ, ಜಿನ್ನೂರಿನ ನಿಂಗಪ್ಪ ನವಲೂರ (28) ಕೊಲೆಯಾಗಿರುವ ಯುವಕನಾಗಿದ್ದು, ತೋಟದ ಮನೆಯಲ್ಲಿ ಮಲಗಿದ್ದ ವೇಳೆ ಮದ್ಯರಾತ್ರಿ ಬರ್ಬರವಾಗಿ ಹತ್ಯೆ ಮಾಡಿ ಹೋಗಿದ್ದಾರೆ ದುಷ್ಟರು.
ಅಸಲು, ಇದೇ ಜೂನ್ 7 ರಂದು ಯುವಕನಿಗೆ ಮದುವೆ ಫಿಕ್ಸ್ ಆಗಿತ್ತು. ಕಲಘಟಗಿ ತಾಲೂಕಿನ ತಾವಗೇರಿ ಯುವತಿಯ ಜೊತೆ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ, ಮದುವೆಯ ಸಂಭ್ರಮಕ್ಕೆ ಅಣಿಯಾಗಿದ್ದ ಯುವಕ. ಆದ್ರೆ, ಅದರೊಳಗೆ ಭೀಕರವಾಗಿ ಹತ್ಯೆಯಾಗಿದ್ದು ಮದುವೆ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.
ಸದ್ಯ ಭೀಕರ ಹತ್ಯೆ ಹಿನ್ನೆಲೆಯಲ್ಲಿ ಜಿನ್ನೂರು ಗ್ರಾಮ ಬೆಚ್ಚಿ ಬಿದ್ದಿದ್ದು, ಸ್ಥಳಕ್ಕೆ ಕಲಘಟಗಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.