ಮುಂಡಗೋಡಿನ ದಕ್ಷ, ಗಂಡೆದೆಯ ತಹಶೀಲ್ದಾರ್ ಶಂಕರ್ ಗೌಡಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಸಮರ ಸಾರಿರೋ ತಹಶೀಲ್ದಾರ್ ಇವತ್ತು ಅಕ್ರಮ ಇಟ್ಟಿಗೆ ಭಟ್ಟಿಗಳನ್ನು ತೆರವು ಕಾರ್ಯಾಚರಣೆ ನಡೆಸಿದ್ರು.

ನೋಟೀಸ್ ನೀಡಿದ್ದರೂ..!
ಅಸಲು, ಈ ಹಿಂದೆ ದಾಳಿ ಮಾಡಿದ್ದ ತಹಶೀಲ್ದಾರ್ ಸಾಹೇಬ್ರು ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿ, ನೋಟೀಸ್ ಜಾರಿ ಮಾಡಿದ್ರು. ಆದ್ರೆ ಇಟ್ಟಿಗೆ ಭಟ್ಟಿ ನಡೆಸ್ತಿರೋ ಮಾಲೀಕರು ಕ್ಯಾರೇ ಅಂದಿರಲಿಲ್ಲ. ಹೀಗಾಗಿ, ಸಮಯಕ್ಕಾಗಿ ಕಾದಿದ್ದ ತಹಶೀಲ್ದಾರ್ ಇವತ್ತು ತಮ್ಮ ಬೆಟಾಲಿಯನ್ ಜೊತೆ ಫಿಲ್ಡಿಗೆ ಇಳಿದು ಅಕ್ರಮ ಇಟ್ಟಿಗೆ ಭಟ್ಟಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲು ಮುಂದಾಗಿದ್ರು. ನಾಲ್ಕೈದು ಇಟ್ಟಿಗೆ ಭಟ್ಟಿಗಳನ್ನು ತೆರವುಗೊಳಿಸುತ್ತಿದ್ದಾಗ ಮಾಲೀಕರು ಎಚ್ಚೆತ್ತುಕೊಂಡು ನಾವೇ ತೆರವು ಮಾಡ್ತಿವಿ ಅಂತಾ ಭರವಸೆ ನೀಡಿದ ಕೂಡಲೇ ಕಾರ್ಯಾಚರಣೆಗೆ ವಿರಾಮ ನೀಡಲಾಯ್ತು.

ಮುಂಡಗೋಡ ಸಿಪಿಐ ಸಿದ್ದಪ್ಪ ಸಿಮಾನಿ ಸೇರಿದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಒಟ್ನಲ್ಲಿ ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಸಮರ ಸಾರಿರೋ ತಹಶೀಲ್ದಾರ್ ಶಂಕರ್ ಗೌಡಿಯವರಿಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.

 

error: Content is protected !!