ಮುಂಡಗೋಡ ತಾಲೂಕಿನ ಬಂಕಾಪುರ ರಸ್ತೆಯ ಈಶ್ವರ ದೇವಸ್ಥಾನದ ಬಳಿ ಬೈಕಗ ಅಪಘಾತವಾಗಿದೆ. ಬೈಕ್ ಸ್ಕಿಡ್ ಆಗಿ ಬಿದ್ದು ಮೂವರು ಯುವಕರಿಗೆ ಗಂಭೀರ ಗಾಯವಾಗಿದೆ. ಮದುವೆಗೆಂದು ಹೊರಟಿದ್ದವರಿಗೆ ಆಘಾತವಾಗಿದೆ.

ಗಾಯಗೊಂಡವರನ್ನು ಮುಂಡಗೋಡ ಪಟ್ಟಣದ ಇಂದಿರಾನಗರದ ಇಜಾಜ್, ಜಿಲಾನಿ, ಹಾಗೂ ಮಲ್ಲಿಕ್ ಅಂತಾ ಗುರುತಿಸಲಾಗಿದೆ. ಮೂವರಿಗೂ ಗಂಭೀರ ಗಾಯವಾಗಿದ್ದು, ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.

ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ‌.

error: Content is protected !!