ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಈ ಮೂಲಕ ಮುಂಡಗೋಡಿನಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣ ಬೇಧಿಸಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ತಡಸ ಗ್ರಾಮದ ರಮೇಶ ಗಂಗಪ್ಪಾ ಮುಗಳಕಟ್ಟಿ(26) ಮಂಜುನಾಥ ಸುಬಾಸ ಸೋಮನಕೊಪ್ಪ (32) ಎಂಬುವ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಅಂದಹಾಗೆ, ಮುಂಡಗೋಡ ಪಟ್ಟಣದ ಕಲಾಲ್ ಓಣಿಯ ಪೀರಸಾಬ ಅಬ್ದುಲಖಾದರ ಬಂಗ್ಲೆವಾಲೆ ಎಂಬುವವರ ಎಲೆಕ್ಟ್ರಿಕಲ್ ಅಂಗಡಿ ಮುಂದೆ ನಿಲ್ಲಿಸಿದ್ದ, ಹೀರೋ ಸ್ಪ್ಲೆಂಡರ್ ಫ್ಲಸ್ ಬೈಕ್ ನ್ನು ದಿನಾಂಕ 16.05.2023 ರಂದು ಹಾಡಹಗಲೇ ಎತ್ತಂಗಡಿ ಮಾಡಿದ್ದರು. ಹೀಗಾಗಿ ಮುಂಡಗೋಡ ಪೊಲೀಸ್ ಠಾಣೆಗೆ ಈ ಕುರಿತು ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಮುಂಡಗೋಡ ಪೊಲೀಸರು, ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ, ಜಯಕುಮಾರ್, ಶಿರಸಿ ಡಿವೈಎಸ್ಪಿ ಗಣೇಶ ಕೆ.ಎಲ್. ರವರ ಮಾರ್ಗದರ್ಶನದಲ್ಲಿ ಸಿಪಿಐ ಸಿದ್ದಪ್ಪ ಎಸ್.ಸಿಮಾನಿ, ಪಿಎಸ್ಐ ಯಲ್ಲಾಲಿಂಗ ಕುನ್ನೂರು ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು.

ಹೀಗಾಗಿ ಈ ಪ್ರಕರಣವನ್ನು ಬೇಧಿಸಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಮುಂಡಗೋಡ ಠಾಣೆ ಸಿಬ್ಬಂದಿಗಳಾದ ಮಹ್ಮದಸಲಿಂ .ಟಿ.ಕೆ, ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ್ ಲಮಾಣಿ, ಶಂಭುಲಿಂಗ ಜಾವೂರು, ಅಶ್ವರ ಬಮ್ಮಗಟ್ಟಿ, ಪ್ರಕಾಶ ಶ್ರೀಂಗೇಲಿ, ಅಣ್ಣಪ್ಪ ಶಿಗ್ಗಾಂವಿ ಭಾಗವಹಿಸಿದ್ದರು. ಇವರುಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಕಾರವಾರ ರವರು ಪ್ರಶಂಸಿಸಿ ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.

error: Content is protected !!