ಕಾರವಾರ: ಸಗಡೇರಿ ಗ್ರಾಮದ ಬಳಿ ಗಂಗಾವಳಿ ನದಿಯಲ್ಲಿದ್ದ ಗ್ಯಾಸ್ ಟ್ಯಾಂಕರ್ ನಲ್ಲಿನದ್ದ ಸುಮಾರು 15 ಟನ್ ಗ್ಯಾಸ್ ನ್ನು ಹೆಚ್,ಪಿ.ಸಿ.ಎಲ್, ಬಿ.ಪಿ.ಸಿಎಲ್, ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕ ತಂಡಗಳ ನೆರವಿನಿಂದ ಸಂಪೂರ್ಣವಾಗಿ ಖಾಲಿ ಮಾಡಲಾಗಿದ್ದು, ಈ ಪ್ರದೇಶವನ್ನು ವಾಸಯೋಗ್ಯಕ್ಕೆ ಮುಕ್ತಗೊಳಿಸಲಾಗಿದ್ದು, ಗ್ರಾಮಸ್ಥರು ತಮ್ಮ ಮನೆಗಳಿಗೆ ವಾಪಸ್ ಬರಬಹುದಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷಿಪ್ರಿಯ ತಿಳಿಸಿದ್ದಾರೆ. ಅವರು ಶುಕ್ರವಾರ ಅಂಕೋಲ ಸಮೀಪದ ಗುಡ್ಡ ಬಿದ್ದ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದರು. ಮಣ್ಣು ತೆರವು ಕಾರ್ಯಾಚರಣೆ..! ಅಂಕೋಲ ಶಿರೂರು ಸಮೀಪ ಸಂಭವಿಸಿದ್ದ ಗುಡ್ಡ ಕುಸಿತ ಪ್ರದೇಶದಲ್ಲಿ ರಸ್ತೆಯ ಮೇಲಿದ್ದ ಮಣ್ಣು ತೆರವು ಕಾರ್ಯಾಚರಣೆ ಮುಗಿದಿದ್ದು, ಹೆದ್ದಾರಿಯ ಒಂದು ಬದಿಯನ್ನು ಮುಕ್ತಗೊಳಿಸಲಾಗಿದ್ದು, ಆದರೆ ಯಾವುದೇ ವಾಹನ ಸಂಚಾರಕ್ಕೆ ಅನುಮತಿ ನೀಡಿರುವುದಿಲ್ಲ ಎಂದರು. ಅಂಕೋಲ ಸಮೀಪದ ಗುಡ್ಡ ಬಿದ್ದ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಪ್ರಸ್ತುತ ಬಿದ್ದಿರುವ ಮಣ್ಣನ್ನು ಸಂಪೂರ್ಣ ತೆರವುಗೊಳಿಸಿ ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಲು ಅವಿರತವಾಗಿ ಶ್ರಮಿಸಲಾಗುತ್ತಿದೆ ಎಂದರು. ಕಾಳಜಿ ಕೇಂದ್ರಗಳು 30..! ಜಿಲ್ಲೆಯಲ್ಲಿ...
Top Stories
ಶಿರಸಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ತಾಯಿ ಹೆಸ್ರಲ್ಲಿ ಗಿಡ ನೆಟ್ಟರು..!
ಅತ್ತಿವೇರಿ ಡ್ಯಾಂ ನಲ್ಲಿ ಆಕಸ್ಮಿಕವಾಗಿ ಬಿದ್ದು ಸಾವು ಕಂಡ ಹುನಗುಂದದ ಮಾನಸಿಕ ಅಸ್ವಸ್ಥ..!
ಮುಂಡಗೋಡ ಠಾಣೆಗೆ ವಿನೋದ್ ರೆಡ್ಡಿ ನೂತನ ಕ್ರೈಂ PSI, ನಿರೀಕ್ಷೆಗಳು ಒಂದಾ, ಎರಡಾ..?
ಕಾರವಾರ ಅಂಚೆ ವಿಭಾಗಕ್ಕೆ ಕರ್ನಾಟಕ ರಾಜ್ಯ ವೃತ್ತ ಮಟ್ಟದ ಪ್ರಶಸ್ತಿ
ಉತ್ತರ ಕನ್ನಡದಲ್ಲಿ ಮೇ.5 ರಿಂದ ಪ.ಜಾತಿ ಸಮುದಾಯದ ಸಮೀಕ್ಷೆ : ಜಿಲ್ಲಾಧಿಕಾರಿ
ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದಾರುಣ ಸಾವು..!
ಮುಂಡಗೋಡ ತಾಲೂಕಿಗೆ 65.3% ರಷ್ಟು SSLC ಫಲಿತಾಂಶ, ಮಳಗಿ ಪ್ರೌಢಶಾಲೆಯ ಭಾಗ್ಯಶ್ರೀ ಗೆ ಅತಿ ಹೆಚ್ಚು ಅಂಕ..!
ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನಲ್ಲಿ ಕೆಲಸದ ಸಮಯದಲ್ಲಿ ಬೃಹತ್ ಗಾತ್ರದ ಪ್ಯಾನಲ್ ಬಿದ್ದು ಗುತ್ತಿಗೆ ಕಾರ್ಮಿಕ ಸಾವು
ಮುಂಡಗೋಡ ತಾಲೂಕಿನ 79 ಶಾಲೆಗಳ ಸ್ಥಿತಿ ಚಿಂತಾಜನಕ, ಮಕ್ಕಳನ್ನು ಶಾಲೆಗೆ ಕಳಿಸೋಕೆ ಪಾಲಕರಿಗೆ ಭಾರೀ ಆತಂಕ..!
ಮೈನಳ್ಳಿಯಲ್ಲಿ ಸಿಡಿಲಾಘಾತ, ಐವರಿಗೆ ಸಿಡಿಲು ಬಡಿದು ಗಾಯ, ಆಸ್ಪತ್ರೆಗೆ ದಾಖಲು..!
ನಂದಿಪುರದಲ್ಲಿ ಸಿಡಿಲಿನಾರ್ಭಟ, ಮನೆಯ ವಿದ್ಯುತ್ ವೈಯರ್ ಗಳೇ ಭಸ್ಮ, ಟಿವಿ, ಪ್ರಿಡ್ಜು ಹರೋಹರ..! ಮನೆ ಮಂದಿಗೂ ಗಾಯ..!
ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು ಸಮುದ್ರ ಪಾಲು, ಮತ್ತಿಬ್ಬರು ಬಚಾವ್..!
ಮುಂಡಗೋಡ ಪೊಲೀಸರ ಗಟ್ಟಿ ಕಾರ್ಯಾಚರಣೆ, ಗೋಹತ್ಯೆ ಕೇಸಿನಲ್ಲಿ ಓರ್ವ ಆರೋಪಿ ಅರೆಸ್ಟ್, ಮತ್ತೋರ್ವ ಪರಾರಿ..!
ಮುಂಡಗೋಡ ಕರಗಿನಕೊಪ್ಪ ಬಳಿ ಬೈಕ್ ಅಪಘಾತ, ಮೂಡಸಾಲಿಯ ವ್ಯಕ್ತಿಗೆ ಗಂಭೀರ ಗಾಯ..!
ಮುಂಡಗೋಡಿನಲ್ಲಿ ಗೋಹತ್ಯೆಗೆ ಖಂಡನೆ, ಹಿಂದು ಕಾರ್ಯಕರ್ತರ ಆಕ್ರೋಶ, ರಸ್ತೆ ತಡೆದು ಪ್ರತಿಭಟನೆ..!
ಮುಂಡಗೋಡಿನಲ್ಲೂ ಮಾಂಸಕ್ಕಾಗಿ ಆಕಳ ಹತ್ಯೆ..! ಪೊಲೀಸರ ದಾಳಿ..! ಸಿಕ್ಕಿದ್ದೇನು..?
ಕಾರವಾರ ನಗರಸಭೆ ಸದಸ್ಯನ ಭೀಕರ ಹತ್ಯೆ ಕೇಸ್, ಇಬ್ಬರು PSI ಸೇರಿ ನಾಲ್ವರು ಪೊಲೀಸರು ಸಸ್ಪೆಂಡ್..? ಕಾರಣ..?
ಭಾರೀ ಮಳೆ ಗಾಳಿಗೆ ಇಂದೂರು ಕೊಪ್ಪ ಗ್ರಾಮದಲ್ಲಿ, ಮನೆಯ ಮೇಲ್ಚಾವಣಿ ಹಾನಿ, ಗೋವಿನಜೋಳ ರಾಶಿ ನೀರಲ್ಲಿ
ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಪಾಳಾದ ರಾಮಾಪುರ ಕ್ರಾಸ್ ಬಳಿ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!
ಮುಂಡಗೋಡ ತಾಲೂಕಿನಲ್ಲೂ ಮಳೆಯ ಅವಾಂತರ, ಹಲವು ಮನೆಗಳಿಗೆ ಹಾನಿ, ತಹಶೀಲ್ದಾರ್ ಪರಿಶೀಲನೆ..!
ಮುಂಡಗೋಡ ತಾಲೂಕಿನಲ್ಲೂ ಮಳೆಯ ಅವಾಂತರಗಳಿ ಸೃಷ್ಟಿಯಾಗಿವೆ. ನಿರಂತರ ಮಳೆಯಿಂದ ತಾಲೂಕಿನಲ್ಲಿ ಹಲವು ಮನೆಗಳು ಹಾನಿಗೊಳಗಾಗಿದ್ದು ತಹಶೀಲ್ದಾರ್ ಶಂಕರ್ ಗೌಡಿ ಮತ್ತವರ ಟೀಂ ಮಳೆ ಹಾನಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಾಲೂಕಿನ ಸನವಳ್ಳಿ, ಬೆಡಸಗಾಂವ್, ಕಾತೂರು, ಅಗಡಿ, ಹುನಗುಂದ ಸೇರಿದಂತೆ ಕೆಲವು ಕಡೆ ನಿರಂತರ ಮಳೆಯಿಂದ ಮನೆಗಳಿಗೆ ಹಾನಿಯಾಗಿದೆ.
ನಿರಂತರ ಮಳೆಗೆ ಸವಣೂರಿನಲ್ಲಿ ಭಾರೀ ದುರಂತ, ಮನೆ ಕುಸಿದು ಎರಡು ಕಂದಮ್ಮಗಳು ಸೇರಿ ಮೂವರ ಸಾವು..!
ಸವಣೂರು; ನಿರಂತರ ಮಳೆ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ದುರಂತ ಸಂಭವಿಸಿದೆ. ಜಿಟಿ ಜಿಟಿ ಮಳೆಗೆ ಮನೆಗೋಡೆ ಕುಸಿದು ಎರಡು ಕಂದಮ್ಮಗಳು ಸೇರಿ ಓರ್ವ ಮಹಿಳೆ ಸಾವು ಕಂಡಿದ್ದಾಳೆ. ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಅಮೂಲ್ಯ & ಅನನ್ಯ ಎರಡು 2 ವರ್ಷದ ಅವಳಿ ಜವಳಿ ಕಂದಮ್ಮಗಳು ಹಾಗೂ ಚೆನ್ನಮ್ಮ(30) ಸಾವು ಕಂಡಿದ್ದಾರೆ., ಘಟನೆಯಲ್ಲಿ ಮುತ್ತು, ಸುನೀತ ಎಂಬುವವರಿಗೆ ಗಾಯವಾಗಿದೆ. ಹಾವೇರಿ ಜಿಲ್ಲೆಯ ಸವಣೂರಿ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಬೆಳಗಿನ ಜಾವದಲ್ಲಿ ಘಟನೆ ನಡೆದಿದ್ದು, ಮನೆ ಬೀಳುತ್ತಿದ್ದಂತೆ ಅಕ್ಕಪಕ್ಕದ ಜನರು ಧಾವಿಸಿ ರಕ್ಷಣೆ ಮಾಡಿದ್ದಾರೆ. ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಇನ್ನು ಗಾಯಳುಗಳನ್ನು ಸವಣೂರು ತಾಲೂಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡ ತಾಲೂಕಿನಲ್ಲಿ ನಿರಂತರ ಮಳೆ ಹಿನ್ನೆಲೆ; ತಾಲೂಕಾಡಳಿತದಿಂದ ಹಲವು ಎಚ್ಚರಿಕೆಯ ಪ್ರಕಟಣೆ
ಮುಂಡಗೋಡ ತಾಲೂಕಿನಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ತಾಲೂಕಾಡಳಿತದಿಂದ ಹಲವು ಎಚ್ಚರಿಕೆಯ ಪ್ರಕಟಣೆ ನೀಡಲಾಗಿದೆ. ಮುಂಡಗೋಡ ಪಟ್ಟಣ ಸೇರಿದಂತೆ, ತಾಲೂಕಿನ ಗ್ರಾಮೀಣ ಭಾಗದ ಜನರು ಹಲವು ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ ಸೂಚನೆ ನೀಡಲಾಗಿದೆ. ಏನು ಎಚ್ಚರಿಕೆ.? ಏನದು ಪ್ರಕಟಣೆ? ಶಿಥಿಲಾವಸ್ಥೆಯ ಮನೆಯಲ್ಲಿ ವಾಸ ಬೇಡ..! ತಾಲೂಕಾಧ್ಯಂತ, ಸದ್ಯ ನಿರಂತರ ಮಳೆ ಆಗುತ್ತಿರುವ ಕಾರಣ ತಾಲ್ಲೂಕಿನ ಗ್ರಾಮಗಳ ಮತ್ತು ಮುಂಡಗೋಡ ಪಟ್ಟಣದ ಸಾರ್ವಜನಿಕರು ನಿಮ್ಮ ಮನೆ ಮಳೆಯಿಂದ ಸೋರುವ, ಬೀಳುವ ಹಂತದಲ್ಲಿ ಇದ್ದರೆ, ಶಿಥಿಲ ಸ್ಥಿತಿಯಲ್ಲಿ ಇದ್ದಲ್ಲಿ ಅಂತಹ ಮನೆಯಲ್ಲಿ ವಾಸ ಮಾಡಬಾರದು. ಸುರಕ್ಷಿತ ಮನೆಗಳಿಗೆ, ಸಂಬಂಧಿಕರ ಮನೆಗಳಿಗೆ ಹೋಗಬೇಕು. ನಿಮ್ಮ ಮನೆ ಮಳೆಯಿಂದ ಹಾನಿ ಆಗಿದ್ದಲ್ಲಿ, ಸೋರುವ ಶಿಥಿಲ ಸ್ಥಿತಿಯಲ್ಲಿ ಇದ್ದಲ್ಲಿ ಕೂಡಲೇ ನಿಮ್ಮ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO)ಅಥವಾ ಗ್ರಾಮ ಆಡಳಿತ ಅಧಿಕಾರಿ( VAO) ಗಮನಕ್ಕೆ ತರಬೇಕು. ಬದಲಿ ವ್ಯವಸ್ಥೆಗೆ ಕ್ರಮ..! ನಿರಂತರ ಮಳೆಯಿಂದ ಮನೆ ಸೋರುವುದು, ಹಾನಿ ಆಗಿರುವುದು ಇದ್ದಲ್ಲಿ, ತಮ್ಮ ವಾಸಕ್ಕೆ ಬೇರೆ ವ್ಯವಸ್ಥೆ ಮಾಡಲಾಗುವುದು. ಈ...
ಜಿಲ್ಲೆಯ ಪ್ರತಿಯೊಂದು ಅಪಾಯಕಾರಿ ಸ್ಥಳವನ್ನು ಗುರುತಿಸಿ ಮುನ್ನೆಚ್ಚರಿಕೆ ಕೈಗೊಳ್ಳಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ
ಕಾರವಾರ: ಜಿಲ್ಲೆಯಲ್ಲಿ ಅಪಾಯಕಾರಿ ಆಗಿರುವ ಶಾಲೆಗಳು ಅಂಗನವಾಡಿಗಳು, ಜನವಸತಿ ಪ್ರದೇಶಗಳ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ, ಅಲ್ಲಿ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಎರಡು ದಿನದಲ್ಲಿ ವರದಿ ನೀಡುವಂತೆ ಕಂದಾಯ ಇಲಾಖೆಯ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ ನೀಡಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿರುವ ಶಾಲೆಗಳು ಮತ್ತು ಅಂಗನವಾಡಿಗಳ ಸಮೀಪ ಅಪಾಯಕಾರಿ ಮರಗಳು, ವಿದ್ಯುತ್ ಕಂಬಗಳು, ಶಿಥಿಲವಾದ ಕಾಂಪೌಂಡ್ ಗೋಡೆ, ಶಾಲಾ ಕಟ್ಟಡ ಹಾಗೂ ಗುಡ್ಡ ಕುಸಿತ ಸಂಭವಿಸುವ ಪ್ರದೇಶಗಳ ಬಳಿಯಲ್ಲಿ ವಾಸ ಮಾಡುತ್ತಿರುವ ಸಾರ್ವಜನಿಕರ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ ಆ ಪ್ರದೇಶದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಗೂ ಕಾಳಜಿ ಕೇಂದ್ರಗಳನ್ನು ಗುರುತಿಸಿಟ್ಟುಕೊಂಡು, ಈ ಕುರಿತ ಸಂಪೂರ್ಣ ವರದಿಯನ್ನು ಸಂಬಂದಪಟ್ಟ ಅಧಿಕಾರಿಗಳು ಸಹಿ ಮಾಡಿ ದೃಢೀಕರಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಮನೆಗಳ ಸರ್ವೆ..! ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಸುರಕ್ಷಿತ...
ಉ.ಕನ್ನಡ ಜಿಲ್ಲೆಯಲ್ಲಿ ನಾಳೆ ಶುಕ್ರವಾರವೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು. ಜಿಲ್ಲಾಧ್ಯಂತ ಸಂಕಷ್ಟ ತಂದೊಡ್ಡಿದೆ. ಹೀಗಾಗಿ, ಜಿಲ್ಲೆಯ 12 ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ಶುಕ್ರವಾರವೂ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ. ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ, ಶಿರಸಿ, ಸಿದ್ದಾಪುರ ಹಾಗೂ ಜೋಯಿಡಾ, ದಾಂಡೇಲಿ, ಯಲ್ಲಾಪುರ, ಮುಂಡಗೋಡ ಹಾಗೂ ಹಳಿಯಾಳ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ,ನಾಳೆ ಶುಕ್ರವಾರ ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ, ಕಾರವಾರ, ಶಿರಸಿ,ಸಿದ್ದಾಪುರ, ಜೋಯಿಡಾ, ದಾಂಡೇಲಿ ಹಾಗೂ ಯಲ್ಲಾಪುರ, ಮುಂಡಗೋಡ ಹಾಗೂ ಹಳಿಯಾಳ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 19 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ..
ಹಾವೇರಿಯಲ್ಲಿ ಭೀಕರ ಅವಘಡ, ರಸ್ತೆ ದಾಟುತ್ತಿದ್ದ ಮಹಿಳೆ ಮೇಲೆ ಹರಿದ ಬಸ್, ತಲೆ ಪೀಸ್, ಪೀಸ್..!
ಹಾವೇರಿ: ರಸ್ತೆ ದಾಟುವ ವೇಳೆ ಸಾರಿಗೆ ಬಸ್ ಗೆ ಸಿಕ್ಕು ಮಹಿಳೆ ದಾರುಣ ಸಾವು ಕಂಡ ಘಟನೆ, ಹಾವೇರಿ ನಗರದ ವಾಲ್ಮೀಕಿ ವೃತ್ತದ ಬಳಿ ನಡೆದಿದೆ. ಹುಬ್ಬಳ್ಳಿ ಯಿಂದ ಹಾವೇರಿಯತ್ತ ಬರುತ್ತಿದ್ದ ಸಾರಿಗೆ ಬಸ್ ಗೆ, ಹಾವೇರಿಯ ಇಜಾರಿ ಲಕಮಾಪುರದ ನಿವಾಸಿ ಜಯಮ್ಮ ಕೂಳೇನೂರ (31) ಎಂಬುವವರು ಸಾವು ಕಂಡಿದ್ದಾರೆ. ಸರ್ಕಾರಿ ಮಹಿಳಾ ಹಾಸ್ಟೆಲ್ ನಲ್ಲಿ ಅಡುಗೆ ಕೆಲಸ ಮಾಡ್ತಿದ್ದ ಮೃತ ಮಹಿಳೆ, ಪತಿ ರಸ್ತೆ ಪಕ್ಕ ನಿಂತು ಕರೆದ ಹಿನ್ನಲೆ ರಸ್ತೆ ದಾಟಲು ಹೋಗಿದ್ದರು. ಹೀಗಾಗಿ, ದುರಂತ ಸಂಭವಿಸಿದೆ. ಹಾವೇರಿ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.
ಉ.ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ, ನಾಳೆ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು. ಜಿಲ್ಲಾಧ್ಯಂತ ಇನ್ನಿಲ್ಲದ ಅವಾಂತರಗಳು ಸೃಷ್ಟಿಯಾಗಿವೆ. ಹೀಗಾಗಿ, ಜಿಲ್ಲೆಯ 10 ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಮೇಡಮ್ಮು ಆದೇಶಿಸಿದ್ದಾರೆ. ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ, ಶಿರಸಿ, ಸಿದ್ದಾಪುರ ಹಾಗೂ ಜೋಯಿಡಾ, ದಾಂಡೇಲಿ, ಯಲ್ಲಾಪುರ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ,ನಾಳೆ ಗುರುವಾರ ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ, ಕಾರವಾರ, ಶಿರಸಿ,ಸಿದ್ದಾಪುರ, ಜೋಯಿಡಾ, ದಾಂಡೇಲಿ ಹಾಗೂ ಯಲ್ಲಾಪುರ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 18 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ..
ಐ ಆರ್ ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಿ; ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೂಚನೆ
ಅಂಕೋಲಾ ತಾಲೂಕಿನ ಶಿರೂರು ಸಮೀಪ ಗುಡ್ಡ ಕುಸಿದು ಜೀವ ಹಾನಿ ಆಗಿರುವ ಕುರಿತಂತೆ ಐ ಆರ್ ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಕೂಡಲೇ ಪ್ರಕರಣ ದಾಖಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಕೋಲಾ ತಾಲೂಕಿನ ಶಿರೂರುನಲ್ಲಿ ಗುಡ್ಡ ಕುಸಿದು ಜೀವ ಹಾನಿ ಆಗಿರುವ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಉಸ್ತುವಾರಿ ಸಚಿವರು ಈ ಘಟನೆಗೆ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಪ್ರಮುಖ ಕಾರಣವಾಗಿದ್ದು ಮೃತರ ಸಾವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಐಆರ್ಬಿ ಕಂಪನಿಯ ಅಧಿಕಾರಿಗಳ ವಿರುದ್ಧ ಪೊಲೀಸ್ ಪ್ರಕರಣ ಮತ್ತು ಗುಡ್ಡ ಕುಸಿತಕ್ಕೆ ಕಾರಣವಾದ ಕಾರಣ ಅರಣ್ಯ ಇಲಾಖೆಯ ಕಾಯ್ದೆ ಯಡಿ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ , ಸಾವಿರಾರು ಮಂದಿ...
ಗೋಟಗೋಡಿಕೊಪ್ಪ ಕ್ರಾಸ್ ಬಳಿ ಸರಣಿ ಅಪಘಾತ, ನಿಂತಿದ್ದ ಕಾರು, ಬೈಕ್ ಗೆ ಗುದ್ದಿದ ಕಾರು..! ಎರಡು ಕಾರುಗಳು, ಒಂದು ಬೈಕ್ ಜಖಂ
ಮುಂಡಗೋಡ ತಾಲೂಕಿನ ಗೋಟಗೋಡಿಕೊಪ್ಪ ಕ್ರಾಸ್ ಬಳಿ ನಿಂತಿದ್ದ ಕಾರ್ ಹಾಗೂ ಬೈಕಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಾಗೂ ಕಾರು ನುಜ್ಜುಗುಜ್ಜಾದ ಘಟನೆ ನಡೆದಿದೆ. ನಿರಂತರ ಮಳೆಯ ಪರಿಣಾಮ ಗೋಟಗೋಡಿಕೊಪ್ಪ ಕ್ರಾಸ್ ಬಳಿ ರಸ್ತೆ ಮೇಲೆ ಮರ ಬಿದ್ದಿದೆ. ಹೀಗಾಗಿ, ಅರಣ್ಯ ಇಲಾಖೆ ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆ ಮಾಡ್ತಿದ್ದರು. ಈ ವೇಳೆ ರಸ್ತೆ ಸಂಚಾರ ಕೆಲಹೊತ್ತು ಬಂದ್ ಆಗಿತ್ತು. ಇದೇ ಸಂದರ್ಭದಲ್ಲಿ ಸಾಲುಗಟ್ಟಿ ವಾಹನಗಳು ನಿನಮತಿದ್ದವು. ಹೀಗಿರುವಾಗ, ಏಕಾಏಕಿ ಬಂದ ಕಾರ್, ಎದುರು ನಿಂತಿದ್ದ ಕಾರ್ ಹಾಗೂ ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ, ಕಾರು ಮುಂದೆ ನಿಂತಿದ್ದ ಲಾರಿಗೆ ಹೋಗಿ ಗುದ್ದಿ ಘಟನೆ ಸಂಭವಿಸಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.