ಮುಂಡಗೋಡ ತಾಲೂಕಿನಲ್ಲೂ ಮಳೆಯ ಅವಾಂತರ, ಹಲವು ಮನೆಗಳಿಗೆ ಹಾನಿ,  ತಹಶೀಲ್ದಾರ್ ಪರಿಶೀಲನೆ.‌.!

ಮುಂಡಗೋಡ ತಾಲೂಕಿನಲ್ಲೂ ಮಳೆಯ ಅವಾಂತರಗಳಿ ಸೃಷ್ಟಿಯಾಗಿವೆ. ನಿರಂತರ ಮಳೆಯಿಂದ ತಾಲೂಕಿನಲ್ಲಿ ಹಲವು ಮನೆಗಳು ಹಾನಿಗೊಳಗಾಗಿದ್ದು ತಹಶೀಲ್ದಾರ್ ಶಂಕರ್ ಗೌಡಿ ಮತ್ತವರ ಟೀಂ ಮಳೆ ಹಾನಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಲೂಕಿನ ಸನವಳ್ಳಿ, ಬೆಡಸಗಾಂವ್, ಕಾತೂರು, ಅಗಡಿ, ಹುನಗುಂದ ಸೇರಿದಂತೆ ಕೆಲವು ಕಡೆ ನಿರಂತರ ಮಳೆಯಿಂದ ಮನೆಗಳಿಗೆ ಹಾನಿಯಾಗಿದೆ.